Latest

ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಕಾರಣಕ್ಕಾಗಿ ಹಿಂದೂ ಯುವತಿಗೆ ಕೈ ಕೊಟ್ಟ ಮುಸ್ಲಿಂ!

ಇಸ್ಲಾಂಗೆ ಮತಾಂತರವಾಗಿ ಮದುವೆಯಾಗಿದ್ದ ಹಿಂದೂ ಮಹಿಳೆಯನ್ನು ಹೆರಿಗೆಗೆ ಎಂದು ತವರು ಮನೆಗೆ ಕಳುಹಿಸಿ ಅಬ್ದುಲ್‌ ರಹೀಂ ಎಂಬಾತ ಎರಡನೇ ಮದುವೆಯಾಗಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಬನಶಂಕರಿ 3ನೇ ಹಂತದ ಇಟ್ಟುಮಡು ನಿವಾಸಿ 25 ವರ್ಷದ ಸಂತ್ರಸ್ತೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ದೂರಿನನ್ವಯ ಆಂಧ್ರಪ್ರದೇಶ ಮೂಲದ ಪತಿ ಅಬ್ದುಲ್‌ ರಹೀಂ, ಮಾವ ಅಫೀಜ್‌, ಅತ್ತೆ ರಶೀದಾ ಮತ್ತು ಅಬ್ದುಲ್‌ ರಹೀಂನ 2ನೇ ಪತ್ನಿ ನಸ್ರೀನ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಂತ್ರಸ್ತೆ ಐದು ವರ್ಷಗಳ ಹಿಂದೆ ನಗರದಲ್ಲಿ ಬಿಕಾಂ ಓದುತ್ತಿದ್ದಾಗ ಆರೋಪಿ ಅಬ್ದುಲ್‌ ರಹೀಂ ಪರಿಚಿತವಾಗಿತ್ತು. ರಿಚ್ಮಂಡ್‌ ಸರ್ಕಲ್‌ ಖಾಸಗಿ ಹೋಟೆಲ್‌ನಲ್ಲಿ ಈವೆಂಟ್‌ ಆರ್ಗನೈಸರ್‌ ಅಬ್ದುಲ್‌ ರಹೀಂ ಕೆಲಸ ಮಾಡುತ್ತಿದ್ದ. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿಯ ವಿಷಯ ಮನೆಯವರಿಗೆ ಗೊತ್ತಾಗಿ ಅಬ್ದುಲ್‌ ರಹೀಂ ಪೋಷಕರು, ಸಂತ್ರಸ್ತೆ ಇಸ್ಲಾಂಗೆ ಮತಾಂತರವಾದರೆ ಮದುವೆಗೆ ಒಕೆ ಎಂದಿದ್ದರು. ಹೀಗಾಗಿ ಅನ್ಯ ಮಗಳ ಪ್ರೀತಿಗೆ ಬೆಂಬಲವಾಗಿ ನಿಂತ ಸಂತ್ರಸ್ಥೆ ಪೋಷಕರು, ಮಗಳು ಇಸ್ಲಾಂಗೆ ಮತಾಂತರವಾಗಲು ಒಪ್ಪಿದ್ದರು.
2020ರ ಫೆ.6ರಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಮಸೀದಿಯಲ್ಲಿ ಸಂತ್ರಸ್ತೆ ಇಸ್ಲಾಂಗೆ ಧರ್ಮಕ್ಕೆ ಮತಾಂತರವಾಗಿ ಕುಟುಂಸ್ಥರು ಸಮಕ್ಷಮದಲ್ಲಿ ಮದುವೆಯಾಗಿದ್ದಳು. ಮದುವೆಯಾದ ಮೇಲೆ ಆರೋಪಿ ಅಬ್ದುಲ್‌ ರಹೀಂ ಒಂದೂವರೆ ವರ್ಷ ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಂಡಿದ್ದ. ಈ ನಡುವೆ ಸಂತ್ರಸ್ತೆ ಗರ್ಭಿಣಿಯಾದ ಬಳಿಕ ವರಸೆ ಬದಲಿಸಿದ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡಲು ಆರಂಭಿಸಿದ್ದರು ಎನ್ನಲಾಗಿದೆ. ಇತ್ತ ಮಗಳನ್ನು ನೋಡಲು ಆಂಧ್ರಕ್ಕೆ ಹೋದಗಾಲೆಲ್ಲಾ ಸಂತ್ರಸ್ತೆ ಪೋಷಕರು ಅಳಿಯನಿಗೆ ಹಣ ಕೊಟ್ಟು ಬರುತ್ತಿದ್ದರು. ಆದರೆ ಹೆರಿಗೆ ನೆಪದಲ್ಲಿ ಸಂತ್ರಸ್ತೆಯನ್ನು ಬೆಂಗಳೂರಿಗೆ ಕರೆತಂದು ರಹೀಂ ಇಲ್ಲಿಯೆ ಬಿಟ್ಟು ಹೋಗಿದ್ದ. ಹೀಗೆ 2021ರ ನವೆಂಬರ್ 30ರಂದು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಸಂತ್ರಸ್ತೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇದನ್ನು ತಿಳಿದ ಪತಿ ಮತ್ತು ಅತ್ತೆ, ಮಾವ ಬಾಣಂತಿಯನ್ನು ನೋಡಲು ಸಹ ಬಂದಿರಲಿಲ್ಲ. ಕೆಲ ದಿನಗಳ ನಂತರ ಪತಿ ಅಬ್ದುಲ್‌ ರಹೀಂ ಪತ್ನಿ ಹಾಗೂ ಮಗುವನ್ನು ನೋಡಿಕೊಂಡು ಹೋಗಿದ್ದ. ಹೀಗಾಗಿ ಸಂತ್ರಸ್ತೆಯ ಪೋಷಕರು ಸಂತ್ರಸ್ತೆ ಹಾಗೂ ಮಗುವನ್ನು ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಆಗ ಆಬ್ದುಲ್‌ ರಹೀಂ ಪೋಷಕರು ಹೆಣ್ಣು ಮಗು ಆಗಿದೆ. ಮನೆಗೆ ಸೇರಿಸುವುದಿಲ್ಲ.
ಮಗನಿಗೆ ಬೇರೊಂದು ಮದುವೆ ಮಾಡುವುದಾಗಿ ಜಗಳವಾಡಿ ವಾಪಸ್ ಕಳುಹಿಸಿದ್ದಾರೆ. ಈ ನಡುವೆ ಆರೋಪಿ ಅಬ್ದುಲ್‌ ರಹೀಂ ಬೇರೆ ಯುವತಿ ಜೊತೆ ಮದುವೆಯಾಗಿ ಆಕೆಗೆ ಒಂದು ಗುಂಡು ಮಗು ಇದೆ ಎಂಬ ವಿಚಾರ ಸಂತ್ರಸ್ತೆಗೆ ತಿಳಿದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಬ್ದುಲ್‌ ರಹೀಂ ಹಾಗೂ ಆತನ ಪೋಷಕರು, ಸಂತ್ರಸ್ತೆ ಹಾಗೂ ಆಕೆಯ ಪೋಷಕರಿಗೆ ಪ್ರಾಣ ಬೆದರಿಕೆ ಹಾಕಿದ್ದಾರೆ. ಇಷ್ಟೇ ಅಲ್ಲದೇ ಆರೋಪಿ ಅಬ್ದುಲ್‌ ರಹೀಂ ವಿಚ್ಛೇದನ ನೀಡುವಂತೆ ಸಂತ್ರಸ್ತೆಗೆ ಒತ್ತಾಯಿಸುತ್ತಿದ್ದ. ಸಂತ್ರಸ್ತೆಯ ಫೋಟೋಗಳನ್ನು ಬೇರೆ ಪುರುಷರ ಇದ್ದಂತೆ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಿ ವೇಶ್ಯೆ ಎಂದು ಅಪಪ್ರಚಾರ ಮಾಡಿದ್ದ. ವಿಚ್ಛೇದನಕ್ಕೆ ಸಹಿ ಮಾಡದಿದ್ದಲ್ಲಿ ಇನ್ನೂ ಬೇರೆ ರೀತಿ ಮರ್ಯಾದೆ ತೆಗೆಯುವುದಾಗಿ ಸಂತ್ರಸ್ತೆಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಆಂಧ್ರಕ್ಕೆ ತೆರಳಿ ಆರೋಪಿಯನ್ನು ಎಳೆದು ತರುವ ಸಾಧ್ಯತೆ ಇದೆ.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago