ಅನ್ಯಧರ್ಮೀಯನ ಪ್ರೀತಿಗೆ ಬಿದ್ದ ಪುತ್ತೂರಿನ ಹಿಂದೂ ಯುವತಿ ಬೆಂಗಳೂರಿನ ಯುವಕನನ್ನು ಮದುವೆಯಾದ ಘಟನೆ ನಡೆದಿದ್ದು, ಮತ್ತೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಪುತ್ತೂರಿನ ದರ್ಬೆ ನಿವಾಸಿ ಅಕ್ಷತಾ (34) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬಾತನನ್ನು ನವೆಂಬರ್ 9ರಂದು ಮದುವೆಯಾಗಿದ್ದಾರೆ. ಈ ಬಗ್ಗೆ ಬೊಮ್ಮನಹಳ್ಳಿ ರಿಜಿಸ್ಟಾರ್ ಕೇಂದ್ರದಲ್ಲಿ ವಿವಾಹ ನೋಂದಣಿಯಾಗಿದೆ. ಸದ್ಯ ಈ ನೋಟಿಸ್ ಎಲ್ಲೆಡೆ ಹರಿದಾಡುತ್ತಿದ್ದು ವ್ಯಾಪಕ ವಿರೋಧ ವ್ಯಕ್ತವಾಗಿದೆ.
ಒಟ್ಟಾರೆ ಒಂದೆಡೆ ಲವ್ ಜಿಹಾದ್ ಕೊಲೆ ಬಗ್ಗೆ ಅಪಸ್ವರ ಕೇಳಿ ಬರುತ್ತಿದ್ದರೂ ಅನ್ಯಧರ್ಮೀಯ ಯುವಕರನ್ನು ಕೈ ಹಿಡಿಯುವ ಹಿಂದೂ ಯುವತಿಯರ ಚಾಳಿ ಇನ್ನೂ ನಿಂತಿಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.