ಯುವತಿಯ ವಿಚಾರಕ್ಕಾಗಿ ಜಗಳವಾಗಿದ್ದು ಸ್ನೇಹಿತನೇ ತನ್ನ ಸ್ನೇಹಿತನನ್ನು ಕೊಂದು ಎದೆ ಸೀಳಿ ಪ್ರೇಯಸಿಗೆ ಫೋಟೋ ಕಳುಹಿಸಿರುವಂತಹ ಘಟನೆ ತೆಲಂಗಾಣದ ಹೈದರಾಬಾದ್ ನಲ್ಲಿ ನಡೆದಿದೆ.
ಹರಿಹರ ಕೃಷ್ಣ ಮತ್ತು ನವೀನ್ ಇವರು ಸ್ನೇಹಿತರಾಗಿರುತ್ತಾರೆ. ಕಾಲೇಜಿನಲ್ಲಿ ಓದುತ್ತಿರುವಂತಹ ಸಂದರ್ಭದಲ್ಲಿ ಇಬ್ಬರು ಒಂದೇ ಹುಡುಗಿಯನ್ನು ಪ್ರೀತಿಸುತ್ತಾರೆ ಆದರೆ ನವೀನ್ ಮೊದಲು ಹೋಗಿ ಯುವತಿಯ ಬಳಿ ಪ್ರಪೋಸ್ ಮಾಡುತ್ತಾನೆ ಅದಕ್ಕೆ ಯುವತಿ ಸಹ ಒಪ್ಪಿರುತ್ತಾಳೆ. ಇದಾದ ಬಳಿಕ ಎರಡು ವರ್ಷಗಳ ಕಾಲ ಇಬ್ಬರು ಜೊತೆಯಲ್ಲೇ ಇರುತ್ತಾರೆ ನಂತರ ಅವರು ಬೇರ್ಪಡುತ್ತಾರೆ. ಈ ಸಂದರ್ಭದಲ್ಲಿ ಹರಿಹರ ಕೃಷ್ಣ ಯುವತಿಯ ಬಳಿ ಪ್ರಪೋಸ್ ಮಾಡುತ್ತಾನೆ ಅದಕ್ಕೆ ಆಕೆಯೂ ಸಹ ಒಪ್ಪುತ್ತಾಳೆ. ಇವರಿಬ್ಬರ ಲವ್ ಸ್ಟೋರಿ ಶುರುವಾಗುವಷ್ಟರಲ್ಲಿ ನವೀನ್ ಪುನಹ ಆಕೆಗೆ ಮೆಸೇಜ್ ಮಾಡುವುದು ಕರೆ ಮಾಡುವುದನ್ನು ಮಾಡುತ್ತಾನೆ.
ಈ ವಿಚಾರದಿಂದ ಬೇಜಾರಾಗಿದ್ದ ಹರಿಹರ ಕೃಷ್ಣ ಮೂರು ತಿಂಗಳಿಂದ ಸರಿಯಾದ ಸಮಯಕ್ಕೆ ಕಾದು ಕುಳಿತಿರುತ್ತಾನೆ, ಫೆಬ್ರವರಿ 17ರಂದು ನವೀನನನ್ನು ಭೇಟಿಯಾಗಿ ಪಾರ್ಟಿಯ ನೆಪದಲ್ಲಿ ಚೆನ್ನಾಗಿ ಕಂಠಪೂರ್ತಿ ಕುಡಿದಿರುತ್ತಾರೆ. ಈ ಸಂದರ್ಭದಲ್ಲಿ ಇವರಿಬ್ಬರ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ರೊಚ್ಚಿಗೆದ್ದ ಹರಿಹರ ಕೃಷ್ಣ ತನ್ನ ಸ್ನೇಹಿತ ನವೀನನನ್ನೇ ಕೊಲೆ ಗೈದಿದ್ದಾನೆ. ನಂತರ ಅವನನ್ನು ಬೆತ್ತಲೆ ಮಾಡಿ ಆತನ ಬೆರಳು ತಲೆ ಖಾಸಗಿ ಅಂಗಗಳು ಹಾಗೂ ಹೃದಯವನ್ನು ಕತ್ತರಿಸಿದ್ದಾನೆ.
ಇದಾದ ಬಳಿಕ ಆತನ ಹೃದಯದ ಫೋಟೋವನ್ನು ತನ್ನ ಪ್ರೇಯಸಿಗೆ ಕಳುಹಿಸಿದ್ದಾನೆ ಇದಕ್ಕೆ ಆಕೆ ವೆರಿ ಗುಡ್ ಎಂದು ಪ್ರತಿಕ್ರಿಯಿಸಿರುತ್ತಾಳೆ ಎಂದು ಹೇಳಲಾಗುತ್ತಿದೆ.
ನಂತರ ಆತನೇ ಠಾಣೆಗೆ ಬಂದು ಪೊಲೀಸರಿಗೆ ಶರಣಾಗಿದ್ದು ಪೊಲೀಸರು ಹರಿಹರ ಕೃಷ್ಣನ ವಿರುದ್ಧ ಪ್ರಕರಣ ದಾಖಲಿಸಿದ್ದು ಆತನನ್ನು ಕೋರ್ಟಿಗೆ ಹಾಜರುಪಡಿಸಿರುತ್ತಾರೆ.