ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟು ಮಾರಣಾಂತಿಕ ಹಲ್ಲೆ ಮಾಡಿದ್ದಲ್ಲದೆ ಮನಸೋ ಇಚ್ಚೆ ಮೈಮೇಲೆ ಬರೆ ಎಳೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯಪುರ ಜಿಲ್ಲೆಯ ತಿಕೋಟದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ವ್ಯಕ್ತಿ ಒಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಎರಡು ತಿಂಗಳಿನಿಂದ ಶೆಡ್ ನಲ್ಲಿ ಕೂಡಿಟ್ಟಿದ್ದಾನೆ ಅಲ್ಲದೇ ಮನಬಂದಂತೆ ಹಲ್ಲೆ ಮಾಡಿ ಬರೆ ಹಾಕಿದ್ದಾನೆ ಎಂದು ಪೊಲೀಸನ ಹೆಂಡತಿ ಪ್ರತಿಮಾ ಎಲ್ಲಪ್ಪ ಅಸಿಗೆ ಆರೋಪಿಸಿದ್ದಾರೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಪ್ರತಿಮಾಗೆ ಅಥಣಿ ತಾಲೂಕಿನ ಕುನ್ನಾಳ ಗ್ರಾಮದ ಯಲ್ಲಪ್ಪ ಅಗಸೆಗೆ ಕಳೆದ ಹತ್ತು ವರ್ಷಗಳ ಹಿಂದೆಯೇ ಮದುವೆ ಮಾಡಿಕೊಡಲಾಗಿತ್ತು.
ಸದ್ಯ ಯಲ್ಲಪ್ಪ ವಿಜಯಪುರ ತಾಲೂಕಿನ ತಿಕೋಟಾದಲ್ಲಿ ಪೊಲೀಸ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾನೆ ಇವರಿಗೆ ಮೂವರು ಮಕ್ಕಳಿದ್ದಾರೆ. ಪ್ರತಿಮಾ ಜೊತೆ ಹತ್ತು ವರ್ಷಗಳ ತುಂಬಾ ಸಂಸಾರ ನಡೆಸಿದ್ದ ಎಲ್ಲಪ್ಪ ಇತ್ತೀಚಿಗೆ ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿ ಹಾಕಿದ್ದಾನೆ, ಅಲ್ಲದೆ ಮನಬಂದಂತೆ ಹಲ್ಲೆ ಮಾಡಿ ಮುಖ, ಕುತ್ತಿಗೆ, ಕೈ, ಕಾಲು ಸುಟ್ಟು ಹೋಗುವಂತೆ ಬರೆ ಹಾಕಿದ್ದಾನೆ ನನ್ನ ಪತಿ ಮಾತ್ರ ನನ್ನ ಮೇಲೆ ಹಲ್ಲೆ ಮಾಡಿಲ್ಲ, ಅವನ ಅಕ್ಕ-ತಂಗಿಯರು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದು ಪ್ರತಿಮಾ ಅವರ ಆರೋಪವಾಗಿದೆ. ನನ್ನ ತವರು ಮನೆಯರು ನನ್ನನ್ನು ನೋಡಲು ಬಂದಾಗ ಅವರಿಗೂ ಸಹ ನನ್ನ ಪತಿ ಬೆದರಿಕೆ ಹಾಕಿದ್ದಾರೆ, ಅಲ್ಲದೆ ನಿಮ್ಮ ಮಗಳು ಬೇರೆಯವರೊಂದಿಗೆ ಓಡಿ ಹೋಗಿದ್ದಾಳೆ ಎಂದು ನಿಮ್ಮ ಮೇಲೆ ಪ್ರಕರಣವನ್ನು ದಾಖಲಿಸಿ ಒದ್ದು ಒಳಗೆ ಹಾಕಿಸಬೇಕಾಗುತ್ತದೆ ಎಂದು ನನ್ನ ಪೋಷಕರನ್ನು ಹೆದರಿಸಿದ್ದಾರೆ.
ಶೆಡ್ ನಲ್ಲಿ ಯಾರು ಇಲ್ಲದ ವೇಳೆ ತಪ್ಪಿಸಿಕೊಂಡು ಬಂದು ಬೆಳಗಾವಿಯ ಮಹಿಳಾ ಸಂಘದ ಸಹಾಯದಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಡಾ. ಭೀಮಾ ಶಂಕರ್ ಗುಳೇದ ಅವರನ್ನು ಭೇಟಿಯಾಗಿ ನನ್ನ ಪತಿಯ ಮೇಲೆ ಪ್ರಕರಣವನ್ನು ದಾಖಲಿಸುತ್ತೇನೆ ಎಂದು ಪ್ರತಿಮಾ ಅವರು ಹೇಳಿದ್ದಾರೆ.