ಅಳಿವಿನಂಚಿನಲ್ಲಿರುವ ಯಾವುದೇ ಪಕ್ಷಿ ಪ್ರಭೇದಗಳು ಮತ್ತೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇಂತಹ ಅಪರೂಪದ ಘಟನೆ ಇದೀಗ ನಡೆದಿದೆ. ಸುಮಾರು 140 ವರ್ಷಗಳ ಹಿಂದೆ ಕಣ್ಮರೆಯಾಯಿತು ಎಂದು ವಿಜ್ಞಾನಿಗಳು ಭಾವಿಸಿದ್ದ ಅಪರೂಪದ ಪಕ್ಷಿ ಮತ್ತೆ ಕಾಣಿಸಿಕೊಂಡಿದೆ.
ಇದು ನವಿಲನ್ನು ಹೋಲುವ ಪಾರಿವಾಳ. ಆದರೆ, ಸಾಮಾನ್ಯ ಪಾರಿವಾಳದಂತಲ್ಲ!. ಒಂದು ಕೋಳಿ ಗಾತ್ರದಂತೆ ತುಂಬಾ ದೊಡ್ಡದಾಗಿದ್ದು, ಕಪ್ಪು ಮತ್ತು ಬಂಗಾರದ ಬಣ್ಣವನ್ನು ಹೋಲುತ್ತದೆ. ಅದರ ಬಾಲವು ನವಿಲಿನ ಹಾಗೆ ತುಂಬಾ ದೊಡ್ಡದಾಗಿದೆ. ಪಪುವಾ ನ್ಯೂಗಿನಿಯಾದ ಅರಣ್ಯದಲ್ಲಿ ಇತ್ತೀಚೆಗೆ ಸಂಶೋಧಕರು ಈ ಪಕ್ಷಿಯನ್ನು ಗುರುತಿಸಿದ್ದಾರೆ. 140 ವರ್ಷಗಳ ನಂತರ ಮತ್ತೊಮ್ಮೆ ಈ ಪಕ್ಷಿಯನ್ನು ನೋಡಿ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಂಶೋಧಕರು ಈ ಹಕ್ಕಿಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ತಜ್ಞರು ಸುಮಾರು ಒಂದು ತಿಂಗಳ ಕಾಲ ಶ್ರಮಪಟ್ಟ ಬಳಿಕ ಕಳೆದ ಸೆಪ್ಟೆಂಬರ್ನಲ್ಲಿ ಈ ವೀಡಿಯೊ ಮಾಡಲು ಸಾಧ್ಯವಾಗಿದೆ.
ಅಳಿವಿನಂಚಿನಲ್ಲಿರುವ 20 ಅಪರೂಪದ ಪಕ್ಷಿ ಪ್ರಭೇದಗಳಲ್ಲಿ ಈ ಪಾರಿವಾಳವೂ ಸೇರಿದೆ. 1882 ರಿಂದ ಈ ಹಕ್ಕಿ ಕಾಣಿಸಿಕೊಂಡಿಲ್ಲ. ಸದ್ಯ ಈ ಹಕ್ಕಿಯ ವಿಡಿಯೋ ನೆಟ್ಟಿಗರನ್ನು ಸೆಳೆಯುತ್ತಿದೆ.
During the final hours of an expedition searching for the Black-naped Pheasant-pigeon, camera traps captured photos and video of the bird, which had been long-lost to science for 140 years. #LostBirds https://t.co/701DV3Dokn pic.twitter.com/Qs715l6Cys
— Re:wild (@rewild) November 17, 2022