Latest

140 ವರ್ಷಗಳ ನಂತರ ಕಂಡ ಅಪರೂಪದ ಪಕ್ಷಿ

ಅಳಿವಿನಂಚಿನಲ್ಲಿರುವ ಯಾವುದೇ ಪಕ್ಷಿ ಪ್ರಭೇದಗಳು ಮತ್ತೆ ಕಾಣಿಸಿಕೊಳ್ಳುವುದು ಬಹಳ ಅಪರೂಪ. ಇಂತಹ ಅಪರೂಪದ ಘಟನೆ ಇದೀಗ ನಡೆದಿದೆ. ಸುಮಾರು 140 ವರ್ಷಗಳ ಹಿಂದೆ ಕಣ್ಮರೆಯಾಯಿತು ಎಂದು ವಿಜ್ಞಾನಿಗಳು ಭಾವಿಸಿದ್ದ ಅಪರೂಪದ ಪಕ್ಷಿ ಮತ್ತೆ ಕಾಣಿಸಿಕೊಂಡಿದೆ.
ಇದು ನವಿಲನ್ನು ಹೋಲುವ ಪಾರಿವಾಳ. ಆದರೆ, ಸಾಮಾನ್ಯ ಪಾರಿವಾಳದಂತಲ್ಲ!. ಒಂದು ಕೋಳಿ ಗಾತ್ರದಂತೆ ತುಂಬಾ ದೊಡ್ಡದಾಗಿದ್ದು, ಕಪ್ಪು ಮತ್ತು ಬಂಗಾರದ ಬಣ್ಣವನ್ನು ಹೋಲುತ್ತದೆ. ಅದರ ಬಾಲವು ನವಿಲಿನ ಹಾಗೆ ತುಂಬಾ ದೊಡ್ಡದಾಗಿದೆ. ಪಪುವಾ ನ್ಯೂಗಿನಿಯಾದ ಅರಣ್ಯದಲ್ಲಿ ಇತ್ತೀಚೆಗೆ ಸಂಶೋಧಕರು ಈ ಪಕ್ಷಿಯನ್ನು ಗುರುತಿಸಿದ್ದಾರೆ. 140 ವರ್ಷಗಳ ನಂತರ ಮತ್ತೊಮ್ಮೆ ಈ ಪಕ್ಷಿಯನ್ನು ನೋಡಿ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಸಂಶೋಧಕರು ಈ ಹಕ್ಕಿಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ತಜ್ಞರು ಸುಮಾರು ಒಂದು ತಿಂಗಳ ಕಾಲ ಶ್ರಮಪಟ್ಟ ಬಳಿಕ ಕಳೆದ ಸೆಪ್ಟೆಂಬರ್‌ನಲ್ಲಿ ಈ ವೀಡಿಯೊ ಮಾಡಲು ಸಾಧ್ಯವಾಗಿದೆ.
ಅಳಿವಿನಂಚಿನಲ್ಲಿರುವ 20 ಅಪರೂಪದ ಪಕ್ಷಿ ಪ್ರಭೇದಗಳಲ್ಲಿ ಈ ಪಾರಿವಾಳವೂ ಸೇರಿದೆ. 1882 ರಿಂದ ಈ ಹಕ್ಕಿ ಕಾಣಿಸಿಕೊಂಡಿಲ್ಲ. ಸದ್ಯ ಈ ಹಕ್ಕಿಯ ವಿಡಿಯೋ ನೆಟ್ಟಿಗರನ್ನು ಸೆಳೆಯುತ್ತಿದೆ.

kiran

Recent Posts

ಪತ್ನಿಯ ಶೀಲ ಶಂಕಿಸಿ ಶೆಡ್ ನಲ್ಲಿ ಕೂಡಿಟ್ಟ ಪೊಲೀಸ್ ಪೇದೆ.

ಜನರಿಗೆ ನ್ಯಾಯ ಕೊಡಿಸಬೇಕಿದ್ದ ಮಹಿಳೆಯರ ರಕ್ಷಣೆ ಮಾಡಬೇಕಿದ್ದ ಮಹಿಳೆಯರ ರಕ್ಷಣೆ ಸದಾ ಸಿದ್ದರಿರಬೇಕಾಗಿದ್ದ ಪೊಲೀಸ್ ಸಿಬ್ಬಂದಿಯೇ ತನ್ನ ಹೆಂಡತಿಯ ಶೀಲ…

1 month ago

ಗುತ್ತಿಗೆದಾರನಿಂದ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಕಾಮಗಾರಿ ಮಾಡಿದ ಬಿಲ್ ಮಾಡಿಕೊಡಲು ಗುತ್ತಿಗೆದಾರನ ಬಳಿ ಲಂಚ ಪಡೆಯುವಾಗ ಅಧಿಕಾರಿಗಳು ಲೋಕಾಯುಕ್ತ ಬಲೆಗೆ…

1 month ago

ಸಾಕು ತಂದೆಯಿಂದಲೇ ಭೀಕರ ಕೊಲೆಯಾದ ಇಬ್ಬರು ಹೆಣ್ಣು ಮಕ್ಕಳು.

ಬೆಂಗಳೂರಿನ ದಾಸರಹಳ್ಳಿಯಲ್ಲಿ ಸಾಕು ತಂದೆಯೊಬ್ಬ ಇಬ್ಬರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಲೆಮೆರೆಸಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಈ ಭೀಕರ…

1 month ago

ಇನ್ನು ಕೃಷಿಕರಲ್ಲದವರು ಕೃಷಿ ಭೂಮಿ ಖರೀದಿಸುವಂತಿಲ್ಲ: ಸಿಎಂ

ಕೃಷಿಕರಲ್ಲದವರಿಗೆ ಇನ್ನೂ ಕೃಷಿ ಭೂಮಿ ಸಿಗುವುದಿಲ್ಲ. ಬಿಜೆಪಿ ತಂದಿದ್ದ ಭೂ ಕಾಯ್ದೆ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಧಾನಸೌಧದಲ್ಲಿ…

2 months ago

ಕಾಮ ಬಯಕೆ ಇದ್ದರೇ ‘ರೆಡ್ ಲೈಟ್ ಏರಿಯಾ’ಗೆ ಬನ್ನಿ, ಅತ್ಯಾಚಾರ ಮಾಡಬೇಡಿ: ಲೈಂಗಿಕ ಕಾರ್ಯಕರ್ತೆ

ಸೋನಾಗಾಚಿ ರೆಡ್ ಲೈಟ್ ಪ್ರದೇಶದ ಮಹಿಳೆಯೊಬ್ಬರು ಯುವ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ನಂತರ ಹೃದಯ ವಿದ್ರಾವಕ ಹೇಳಿಕೆಯೊಂದಿಗೆ…

2 months ago

ಶಾಲೆಯ ಮುಂದೆ ಇಲ್ಲ ಸ್ವಚ್ಛತೆ; ರೋಗಕ್ಕೆ ಆಹ್ವಾನ ನೀಡುತ್ತಿರುವ ಪಿಡಿಒ!

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಬಿಲಕೆರೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬಿಲಕೆರೂರ…

2 months ago