ಬೆಳಗಾವಿಯಲ್ಲಿ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ಭಾರೀ ಟ್ರಕ್ ಹರಿದ ಪರಿಣಾಮ ವಿದ್ಯಾರ್ಥಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದ ಫಿಶ್ ಮಾರ್ಕೆಟ್ ಬಳಿಯ ವೆಲ್ ಕಮ್ ಹೋಟಲ್ ಎದುರಿಗೆ ನಡೆದಿದೆ. ಅಪಘಾತ ಸಂಭವಿಸುತ್ತಿದ್ದಂತೆ ಆಕ್ಸಿಡೆಂಟ್ ಮಾಡಿದ ಲಾರಿ ಮೇಲೆ ಸ್ಥಳದಲ್ಲಿದ್ದ ಉದ್ರಿಕ್ತ ಸಮೂಹ ಲಾರಿ ಮೇಲೆ ಕಲ್ಲು ತೂರಾಟ ನಡೆಸಿ ಲಾರಿಯನ್ನು ಜಖಂಗಿಳಿಸಿದ್ದಾರೆ. ಸಧ್ಯ ಕ್ಯಾಂಪ್ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಶಾಲೆಗೆ ತರಳಲು ಸ್ಕೂಟಿ ಮೇಲೆ ಅಕ್ಕ ತಮ್ಮ, ಮತ್ತು ಇನ್ನೊಬ್ಬ ಪಾದಚಾರಿ ಬಾಲಕ ರಸ್ತೆಯನ್ನು ದಾಟುತ್ತಿದ್ದರು. ಈ ವೇಳೆ ಯಮರೂಪಿ ಲಾರಿ ಬಂದು ವಿದ್ಯಾರ್ಥಿಗಳ ಮೇಲೆ ಹರಿದಿದೆ. ಈ ವೇಳೆ ಅರಹಾನ್ ಬೇಪಾರಿ (10) ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಅಕ್ಕ ಅತಿಕಾ ಹಾಗೂ ಆಯುಷ್ಯ ಎನ್ನುವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿವೆ. ಗಾಯಗೊಂಡವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಈ ವೇಳೆಗೆ ಸ್ಥಳದಲ್ಲಿ ನೂರಾರು ಜನರು ಜಮಾಯಿಸಿದರು. ಅಪಘಾತ ಮಾಡಿದ ಲಾರಿ ಮೇಲೆ ಕಲ್ಲು, ಕಟ್ಟಿಗೆಯಿಂದ ದಾಳಿ ನಡೆಸಿ ಲಾರಿಯನ್ನು ಜಖಂಗೊಳಿಸಿದ್ದಾರೆ. ಸ್ಥಳದಲ್ಲಿ ಬೀಗುವಿನ ವಾತಾವರಣ ಉಂಟಾಗಿದೆ. ಸ್ಥಳಕ್ಕೆ ಡಿಸಿಪಿ ಪಿ.ವಿ ಸ್ನೇಹಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.