ಈ ಘಟನೆ ನಡೆದಿರುವುದು ಶಿಕ್ಷಣ ಸಚಿವರ ತವರಿನಲ್ಲಿ. ಇವನು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಅಷ್ಟೇ ಅಲ್ಲಾ, ಈತನ ವಾಟ್ಸಪ್ ನಲ್ಲಿ ಶಿರಾ ತಾಲೂಕಿನ ಶಿಕ್ಷಕಿ ಒಬ್ಬರು ನೀಡಿದ ಮಾನಸಿಕ ಕಿರುಕುಳದ ದೂರಿಗೆ ಸಂಬಂಧಿಸಿದಂತೆ, ಏನೂ ಕ್ರಮ ಕೈಗೊಳ್ಳದೆ, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಮುಚ್ಚಿ ಹಾಕಿದ್ದಾರೆ,ಎಂಬ ಸಂದೇಶವನ್ನು ಹಾಕಿಕೊಂಡು ಸರ್ಕಾರದ 40% ಭ್ರಷ್ಟಾಚಾರವನ್ನು ಪರೋಕ್ಷವಾಗಿ ಎತ್ತಿ ಹಿಡಿದಿದ್ದಾನೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಶಿರಾ ತಾಲೂಕಿನ, ಮಾರನಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ. ಈತನ ಹೆಸರು ಬಿ ಅರ್ ಹನುಮಂತರಾಜು. ಈತನು ತನ್ನ ವಾಟ್ಸಪ್ ನ್ನಲಿ ಕಳೆದ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಒಂದು ಸ್ಟೇಟಸ್ ಹಾಕಿಕೊಳ್ಳುತ್ತಾನೆ. ಅದರ ಸಾರಾಂಶ ಇಂತಿದೆ. ಈ ಹಿಂದೆ ಪರಿಶಿಷ್ಟ ಪಂಗಡದ ,ಸಿರಾ ತಾಲೂಕಿನ ಶಿಕ್ಷಕಿಯೊಬ್ಬರಿಗೆ ಜಾತಿ ನಿಂದನೆ ಮತ್ತು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಬಿಇಓ ಮತ್ತು ಡಿಡಿಪಿಐಗೆ ಹಿಂದಿನ ಸಿ ಆರ್ ಪಿ ವಿರುದ್ದ ದೂರನ್ನು ಸಲ್ಲಿಸಿದ್ದರು. ಆಗಿನ ಡಿಡಿಪಿಐ ಏನು ಕ್ರಮ ಕೈಗೊಳ್ಳದೆ ಕೇಸನ್ನು ಮುಚ್ಚಿಹಾಕಿರುತ್ತಾರೆ ಎಂಬುದಾಗಿದೆ.
ಈ ಸ್ಟೇಟಸ್ ಅನ್ನು ಗಮನಿಸಿದಾಗ, ಒಬ್ಬ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸರ್ಕಾರದ ವಿರುದ್ಧ ಬಹಿರಂಗವಾಗಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿರುತ್ತಾನೆ. ಹಾಗಾದರೆ ಒಬ್ಬ ಜವಾಬ್ದಾರಿ ಹುದ್ದೆಯಲ್ಲಿ ಇದ್ದುಕೊಂಡು , ತನ್ನದೇ ಇಲಾಖೆಯ ಮೇಲಾಧಿಕಾರಿಗೆ, ತುಂಬಾ ಗಂಭೀರವಾದ ಪ್ರಕರಣವನ್ನು ಏನು ಕ್ರಮ ಕೈಗೊಳ್ಳದೆ ,ಮುಚ್ಚಿ ಹಾಕಿದ್ದಾರೆ ಎಂದರೆ, ಎಷ್ಟು ಹಣ ನುಂಗಿರಬಹುದು ಎಂಬುದು ಕಾಡದೆ ಇರಲಾರದು.
ಇನ್ನೂ ಇದೇ ತರಹ ಅನೇಕ ಪ್ರಕರಣಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದು ದೃಢವಾದಂತಾಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದಂತಹ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಕಚೇರಿ ಸೂಚನೆ ಮೇರೆಗೆ ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ತನಿಖೆ ನಡೆಸಿ ಶಿಕ್ಷಕಿಯ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆದಿರುವುದಿಲ್ಲ ಎಂದು ವರದಿಯನ್ನು ನೀಡಿರುತ್ತದೆ.
ಈ ರೀತಿ ವರದಿಯನ್ನು ನೀಡಿದ ನಂತರವೂ ಶಿಕ್ಷಕನೊಬ್ಬ ತನ್ನ ಮೇಲಾಧಿಕಾರಿ ಸರಿಯಾದ ರೀತಿಯಲ್ಲಿ ತನಿಖೆ ನಡೆಸಿಲ್ಲ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎಂದು ಹೇಳುತ್ತಿದ್ದಾನೆ, ಎಂದರೆ ನಿಜಕ್ಕೂ ಇದು ಈ ರೀತಿ ನಡೆದಿದೆಯಾ? ನಮ್ಮ ರಾಜ್ಯ ಸರ್ಕಾರವನ್ನು 40% ಸರ್ಕಾರ ಎಂದು ಜನರು ಸರ್ಕಾರಕ್ಕೆ ಟೀಕಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಒಬ್ಬ ಶಿಕ್ಷಕ ಶಿಕ್ಷಣ ಇಲಾಖೆಯ ಭ್ರಷ್ಟಾಚಾರ-ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತಿದ್ದಾನೆ ಎಂದರೆ, ಎಷ್ಟರ ಮಟ್ಟಿಗೆ ಸರ್ಕಾರ ಆವ್ಯವಸ್ಥೆ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿರಬೇಕು.
ಪೋಲಿಸ್ ಇಲಾಖೆ ಮತ್ತು ಶಿಕ್ಷಣ ಇಲಾಖೆ ನೀಡಿರುವ ವರದಿಗಳು ಸುಳ್ಳಾ? ಅಥವಾ ಶಿಕ್ಷಕನೇ ಸರ್ಕಾರದ ವಿರುದ್ಧ ಸಂಘಗಳನ್ನು ಎತ್ತಿ ಕಟ್ಟಲು ಮುಂದಾಗಿದ್ದಾನಾ?
ಸರ್ಕಾರಿ ನೌಕರರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ, ಯಾವುದೇ ರೀತಿಯ ಮಾಹಿತಿಗಳನ್ನು ಹಾಕುವುದು ಅಪರಾಧ ಎಂದು ಆದೇಶವಿದೆ. ಹೀಗಿದ್ದ ಮೇಲೆ ಈ ಶಿಕ್ಷಕ ಹಾಕಿರುವುದು ಸುಳ್ಳು ಎಂದಾದರೆ, ಆತನ ವಿರುದ್ಧ ಶಿಕ್ಷೆ ಆಗಬೇಕಿತ್ತು ,ಇಲ್ಲಿಯವರೆಗೂ ಆ ರೀತಿಯ ಯಾವುದೇ ಘಟನೆಗಳು ನಡೆದಿಲ್ಲವೆಂದ ಮೇಲೆ, ಸರಿಯಾದ ರೀತಿಯಲ್ಲಿ ತನಿಖೆಯಾಗಿಲ್ಲ, ಹಣ ತೆಗೆದುಕೊಂಡು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಮಾನ್ಯ ಶಿಕ್ಷಣ ಸಚಿವರೇ ತಮ್ಮದು ಭ್ರಷ್ಟಾಚಾರದ ಸರ್ಕಾರವೆಂದು ಒಪ್ಪಿಕೊಳ್ಳಿ. ನಿಮ್ಮದೇ ಇಲಾಖೆಯ ಶಿಕ್ಷಕನ ಆರೋಪ ಸತ್ಯವೆಂದು ಒಪ್ಪಿಕೊಳ್ಳಿ……