ಸ್ನೇಹ ಹಾಗೂ ಲಾಸಿ ಎನ್ನುವ ಯುವತಿಯರಿಬ್ಬರು ದಾವಣಗೆರೆಯ ಪದವಿ ವ್ಯಾಸಾಂಗ ಮಾಡುತ್ತಿದ್ದು, ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅತ್ಮೀಯವಾಗಿದ್ದರು. ಬಳಿಕ ಇಬ್ಬರ ಮಧ್ಯೆ ಪ್ರೀತಿ ಚಿಗುರೊಡೆದಿದೆ. ಅದು ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿ ಸಲಿಂಗಕಾಮಕ್ಕೆ ತಿರುಗಿದೆ. ಆದ್ರೆ, ಆ ಯುವತಿಯು ಪರ ಯುವತಿಯೊಂದಿಗೆ ಫೋನ್ನಲ್ಲಿ ಮಾತನಾಡಿದ್ದಾಳೆ ಎಂಬ ಒಂದೇ ಕಾರಣಕ್ಕೆ ಸಲಿಂಗಕಾಮಿ ರೇಡಿಯಂ ಕಟರ್‌ನಿಂದ ಹಲ್ಲೆ ನಡೆಸಿದ್ದಾಳೆ. ಈ ಪ್ರಕರಣ ದಾವಣಗೆರೆ ನಗರದ ಶಾಂತಿ ನಗರದಲ್ಲಿ ನಡೆದಿದೆ.
ಕಡೂರು ಮೂಲದ ಲಾಸಿ ಎನ್ನುವ ಯುವತಿ ದಾವಣಗೆರೆಯ ಶಾಂತಿ ನಗರದ ಸ್ನೇಹ ಎನ್ನುವ ಯುವತಿಗೆ ರೇಡಿಯಂ ಕಟರ್ ನಿಂದ ಹಲ್ಲೆ ನಡೆಸಿ ತಾನು ಕೈ ಕೊಯ್ದುಕೊಂಡಿದ್ದಾಳೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಲಾಸಿ ಹಾಗು ಸ್ನೇಹ ಇಬ್ಬರು ಯುವತಿಯರನ್ನು ನೋಡಿ ಕುಟುಂಬಸ್ಥರು ಒಂದು ಕ್ಷಣ ದಂಗ್ ಆಗಿ ಹೋಗಿದ್ದರು. ಬಳಿಕ ಇಬ್ಬರು ಯುವತಿಯರನ್ನು ಸ್ಥಳೀಯರು ಹಾಗೂ ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಇಬ್ಬರು ಕೂಡ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಹಲ್ಲೆಗೊಳಗಾದ ಯುವತಿ ಸ್ನೇಹ ಇತ್ತೀಚೆಗೆ ಬೇರೆ ಯುವತಿಯ ಜೊತೆ ಮಾತನಾಡಿ ಆತ್ಮೀಯವಾಗಿದ್ದ ಒಂದೇ ಕಾರಣ ಲಾಸಿಗೆ ಸಿಟ್ಟು ಬಂದಿದೆ. ಯುವತಿ ಲಾಸಿ ನಿನ್ನೇ (ಅ.20) ಸ್ನೇಹ ಮನೆಗೆ ನುಗ್ಗಿ ರೇಡಿಯಂ ಕಟರ್ ನಿಂದ ಮನಬಂದಂತೆ ಕುತ್ತಿಗೆ, ಕೆನ್ನೆ, ಹಾಗೂ ಕೈಗೆ ಗಂಭೀರ ಗಾಯಗೊಳಿಸಿದ್ದಾಳೆ. ಬಳಿಕ ತಾನು ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಈ ಸಂಬಂಧ ವಿದ್ಯಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಯತ್ನ ನಡೆಸಿದ ಲಾಸಿ ವಿರುದ್ದ 307 ಕೇಸ್ ದಾಖಲಾಗಿದೆ.