ಕೊಟ್ಟೂರು:- ತಾಲ್ಲೂಕಿನ ಹರಾಳು ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ಬೀಸಿದ ಭಾರೀ ಗಾಳಿ, ಮಳೆಗೆ ಮನೆಯ ತಗಡಿನ ಮೇಲ್ಚಾವಣಿ ಬಿದ್ದು ನೆಟ್ಟು ದಡ್ಡಿ ನಾಗಮ್ಮ ಗಂಡ ದಡ್ಡಿ ಕರಿಬಸಪ್ಪ ಇವರಿಗೆ ತಲೆ ಒಡೆದು, ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿ ಇವರನ್ನು ಕೂಡಲೇ ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು, ಅಲ್ಲಿಂದ ತುರ್ತು ಹಾಗೂ ವೈಜ್ಞಾನಿಕ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು, ಗಾಯಾಳು ಆರೋಗ್ಯ ಸ್ಥಿತಿ ಬಹಳ ಚಿಂತಾಜನಕವಾಗಿದೆಯೆಂದು ವೈದ್ಯರು ಮಧ್ಯಾಹ್ನ ಹೇಳಿದ್ದರು. ದಿನಾಂಕ 19/04/2024 ಸಂಜೆ ಯಂದು ಚಿಕಿತ್ಸೆ ಫಲಿಸದೇ ಅಸುನೀಗಿದರು.ಮೃತರ ವಯಸ್ಸು 48 ಆಗಿದ್ದು ಗಂಡ,ಇಬ್ಬರು ಗಂಡು ಮಕ್ಕಳು,ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ನಿನ್ನೆ ಸ್ಥಳ ಪರಿಶೀಲನೆಗಾಗಿ ಕೊಟ್ಟೂರು ತಾಲ್ಲೂಕು ಆಡಳಿತದ ಕಂದಾಯ ಅಧಿಕಾರಿಗಳು ಭೇಟಿ ನೀಡಿ ವರದಿ ಮಾಡಿಕೊಂಡಿದ್ದಾರೆ.
ವರದಿ:- ಮಣಿಕಂಠ. ಬಿ