ವಿಜಯಪುರ: ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಬೇನಾಳ ಬಳಿಯ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ.
ಗಂಡ ಹೆಂಡತಿಯ ಜಗಳ ಮಧ್ಯದಲ್ಲಿ 4 ಮಕ್ಕಳ ಜೀವ ಹೋಗಿದ್ದು ನಿಜಕ್ಕೂ ಮನಕಲಕುವ ಘಟನೆ,
ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ತನು ನಿಂಗರಾಜ ಭಜಂತ್ರಿ (5), ರಕ್ಷಾ ನಿಂಗರಾಜ ಭಜಂತ್ರಿ (3), ಹಸನ್ ನಿಂಗರಾಜ ಭಜಂತ್ರಿ ಹಾಗೂ ಹುಸೇನ್ ನಿಂಗರಾಜ ಭಜಂತ್ರಿ (13 ತಿಂಗಳು) ಮೃತ ಮಕ್ಕಳು. ನಾಲ್ವರು ಮಕ್ಕಳ ತಾಯಿ ಭಾಗ್ಯ ಭಜಂತ್ರಿಯನ್ನ ಸ್ಥಳಿಯರು ಕಾಪಾಡಿದ್ದಾರೆ. ಕೌಟುಂಬಿಕ ಕಾರಣವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಬಹುದಿನಗಳಿಂದ ಭಾಗ್ಯಳ ಪತಿ ನಿಂಗರಾಜ ಅಣ್ಣತಮ್ಮಂದಿರ ಮಧ್ಯೆ ಆಸ್ತಿಗಾಗಾಗಿ ಕಲಹ ನಡೆದಿತ್ತು. ಆಸ್ತಿಯಲ್ಲಿ ಬಿಡಿಗಾಸು ಕೊಡಲ್ಲ ಅಂತಾ ಲಿಂಗರಾಜ್‌ಗೆ ಅಣ್ಣತಮ್ಮಂದಿರು ಹೇಳಿದ್ದರು. ಅದೆ ರೀತಿ ಇಂದು ಕೂಡ ಪರಸ್ಪರ ಗಲಾಟೆ ನಡೆದಿತ್ತು. ಗಲಾಟೆಯ ನಂತರ ಮನೆಯಿಂದ ತೆಲಗಿಗೆ ಹೊರಟಾಗ ಕಾಲುವೆ ಹತ್ತಿರ ನಿಂಗರಾಜನ ದ್ವಿಚಕ್ರ ವಾಹನದ ಪೆಟ್ರೋಲ್ ಖಾಲಿ ಆಗಿದೆ. ಆಗ ಪೆಟ್ರೋಲ್ ತರಲೆಂದು ನಿಂಗರಾಜ ಸ್ವಲ್ಪ ದೂರ ಹೋಗುತ್ತಿದ್ದಂತೆ ಭಾಗ್ಯ ಮಕ್ಕಳೊಂದಿಗೆ ಕಾಲುವೆಗೆ ಹಾರಿದ್ದಾಳೆ ಎಂದು ಪತಿ ನಿಂಗರಾಜ ಕಣ್ಣೀರು ಹಾಕುತ್ತಿದ್ದಾನೆ. ನಿಂಗರಾಜ ಹಾಲಿ ತೆಲಗಿ ಗ್ರಾಮ ಪಂ ಸದಸ್ಯನಾಗಿದ್ದು, ಮೊಹರಂನಲ್ಲಿ ದೇವರನ್ನು ಹೊರುತ್ತಿದ್ದರು. ಈ ಕಾರಣದಿಂದ ಗಂಡು ಮಕ್ಕಳಿಗೆ ಹಸೇನ್ ಹಾಗೂ ಹುಸೇನ್ ಎಂದು ಹೆಸರಿಡಲಾಗಿದೆ.
ಸದ್ಯ ಇಬ್ಬರು ಹೆಣ್ಣು ಮಕ್ಕಳ ಮೃತದೇಹವನ್ನು ಮೀನುಗಾರರು ಹೊರತೆಗೆದಿದ್ದಾರೆ. ಇಬ್ಬರು ಗಂಡು ಮಕ್ಕಳ ಶವಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿದ್ದು, ಶವ ಶೋಧಕಾರ್ಯ ಮುಂದುವರಿದಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವರದಿ: ದಾವಲಸಬ್. ಬನ್ನೇಟ್ಟಿ
ಪತಿ ಶಫಿ ಅಹ್ಮದ್ ವಿರುದ್ಧ ಪತ್ನಿ ಲಕ್ಷ್ಮೀ ಮತಾಂತರ ಮಾಡಿಸಲು ಕಿರುಕುಳ ನೀಡಿದುದಾಗಿ ಆರೋಪ ಮಾಡಿದ್ದಾರೆ. 2014-15 ರಲ್ಲಿ ಪ್ರೀತಿಸಿ…
ವ್ಯಕ್ತಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಒಂದು ದುರ್ಘಟನೆ ಧಾರವಾಡ ತಾಲೂಕಿನ ಬೇಲೂರು ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ…
ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನ ಚಿಟಗಿನಕೊಪ್ಪ ಗ್ರಾಮದ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 50 ರ ಬಳಿ ಕಳೆದ ಎರಡು…
ತಮ್ಮ ಮಗಳ ಮೇಲೆಯೇ ಕಣ್ಣು ಹಾಕಿದ ವ್ಯಕ್ತಿಯನ್ನು ಅವನ ಇಬ್ಬರು ಪತ್ನಿಯರು ಸೇರಿ ಕೊಲೆಗೈದ ಘಟನೆ ತೆಲಂಗಾಣದ ಸೂರ್ಯಪೇಟಾ ಜಿಲ್ಲೆಯ…
ಸಾಮಾಜಿಕ ಜಾಲತಾಣಗಳಲ್ಲಿ ಐಫೋನ್ ಮತ್ತು ಆಂಡ್ರಾಯ್ಡ್ ಫೋನುಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವಾಗ ವಸ್ತುಗಳ ಬೆಲೆ ಹೆಚ್ಚು ಕಡಿಮೆಯಾಗುತ್ತಿವೆ ಎಂಬ ಸಾಕಷ್ಟು…
ನಾಲ್ಕು ಮಕ್ಕಳನ್ನು ಕಾಲುವೆಗೆ ಎಸೆದು ತಾಯಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ…
View Comments