ಹುಬ್ಬಳ್ಳಿಯಲ್ಲಿ ಮನಸ್ತಾಪದಿಂದ ತಮ್ಮ ಪ್ರೇಯಸಿಯ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ, ಬಳಿಕ ಆತ್ಮಹತ್ಯೆ ಮಾಡಿಕೊಂಡ ಯುವಕನ ದುಃಖಕರ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ಸಂದೇಶ ಉಣಕಲ್ ಎಂದು ಗುರುತಿಸಲಾಗಿದೆ. ಉಣಕಲ್‌ನ ಕೆರೆಗೆ ಹಾರಿದು ಆತ್ಮಹತ್ಯೆ ಮಾಡಿಕೊಂಡ ಎನ್ನಲಾಗಿದೆ.
ಕಳೆದ ಶನಿವಾರ, ಸಂದೇಶ ಮನೆಯಿಂದ ನಾಪತ್ತೆಯಾಗಿದ್ದು, ಅವನ ಕುಟುಂಬಸ್ಥರು ನವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಕ್ಕಾಗಿ ಸ್ಥಳೀಯರು ಹುಡುಕಾಟ ನಡೆಸಿದಾಗ, ಅವರು ಕೆರೆಗೆ ಹಾರಿಬಿಟ್ಟಿದ್ದು ಸಾವಿಗೆ ಶರಣಾಗಿದ್ದಾರೆ.
ಸಂದೇಶ, ಮೋಟಾರ್ ಬೈಕ್ ಶೋ ರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ. ಆತ, ತನ್ನ ಸಾವಿಗೆ ತನ್ನ ಪ್ರೇಯಸಿ ಸಂಜನೆಯನ್ನು ಕಾರಣ ಎಂದು ವಾಯ್ಸ್ ಮೆಸೇಜ್ ಕಳುಹಿಸಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದನು.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ.