ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಲ್ಲಿ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ವಿದ್ಯಾರ್ಥಿಯು ಸೆರೆಹಿಡಿದಿರುವ ಭೀಕರ ಕ್ಷಣಗಳು ಟರ್ಕಿ ದೇಶದ ಜನರ ಹೃದಯವನ್ನು ಕರಗಿಸಿದೆ.
ವಿದ್ಯಾರ್ಥಿ ತಾಹಾ ಎರ್ಡೆಮ್ ಮತ್ತು ಅವರ ಕುಟುಂಬವು ಫೆ.6 ರ ಮುಂಜಾನೆ ಅವರ ತವರು ಆದಿಯಮಾನ್‌ನಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗ ಅವರು ವಾಸವಿದ್ದ ನಾಲ್ಕು ಅಂತಸ್ತಿನ ಅಪಾರ್ಟ್ಮೆಂಟ್ ಕಟ್ಟಡ ಭೂಕಂಪದಿಂದ ಕುಸಿದು ಬಿತ್ತು.
ಸೆಕೆಂಡುಗಳಲ್ಲಿ, ತಾಹಾ, ಅವನ ತಾಯಿ, ತಂದೆ ಮತ್ತು ಕಿರಿಯ ಸಹೋದರ ಮತ್ತು ಸಹೋದರಿ ಕಟ್ಟಡದೊಂದಿಗೆ ಕೆಳಕ್ಕೆ ಬಿದ್ದರು. ಟನ್‌ಗಟ್ಟಲೆ ಕಲ್ಲುಮಣ್ಣುಗಳ ಅಡಿಯಲ್ಲಿ ಅವರು ಸಿಕ್ಕಿಬಿದ್ದರು. ಈ ವೇಳೆ ತಾಹಾ ತನ್ನ ಸೆಲ್‌ಫೋನ್ ತೆಗೆದುಕೊಂಡು ಅಂತಿಮ ವಿದಾಯವನ್ನು ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾನೆ. ತನ್ನ ಮರಣದ ನಂತರ ಫೋನ್ ಪತ್ತೆಯಾಗುತ್ತದೆ ಎಂದು ಆಶಿಸಿ, “ಇದು ನಾನು ನಿಮಗಾಗಿ ಚಿತ್ರೀಕರಣ ಮಾಡುವ ಕೊನೆಯ ವೀಡಿಯೊ ಎಂದು ನಾನು ಭಾವಿಸುತ್ತೇನೆ” ಎಂದು ತನ್ನ ಸುತ್ತಮುತ್ತ ಕಟ್ಟಡದ ಅವಶೇಷ ಬಿದ್ದ ಕಿರಿದಾದ ಜಾಗದಲ್ಲಿ ತಾಹಾ ವಿಡಿಯೋ ರೆಕಾರ್ಡ್ ಮಾಡಿದ್ದಾನೆ
“ನಾನು ಪಶ್ಚಾತ್ತಾಪಪಡುವ ಅನೇಕ ವಿಷಯಗಳಿವೆ, ದೇವರು ನನ್ನ ಎಲ್ಲಾ ಪಾಪಗಳನ್ನು ಕ್ಷಮಿಸಲಿ, ನಾನು ಇಂದು ಜೀವಂತವಾಗಿ ಇಲ್ಲಿಂದ ಹೊರಬಂದರೆ ನಾನು ಮಾಡಲು ಬಯಸುವ ಅನೇಕ ಕೆಲಸಗಳಿವೆ, ನಾವು ಇನ್ನೂ ನಡುಗುತ್ತಿದ್ದೇವೆ, ನನ್ನ ಕೈ ಅಲುಗಾಡುತ್ತಿಲ್ಲ, ಇದು ಭೂಕಂಪವಾಗಿದೆ.” ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಹಾಗೂ ವಿಡಿಯೋ ಕೊನೆಯಲ್ಲಿ ಅರೇಬಿಕ್ ಭಾಷೆಯಲ್ಲಿ ದೇವರನ್ನು ಜಪಿಸುತ್ತಾನೆ.
ಕೈ ಕಾಲನ್ನೂ ಆಡಿಸಲಾಗದೇ ಬದುಕಿಗಾಗಿ ಹಾತೊರೆಯುತ್ತಾ ನಡುಗುತ್ತಿದ್ದ ಕಟ್ಟಡದ ಅವಶೇಷಗಳ ಮಧ್ಯೆ ವಿಡಿಯೋ ಮಾಡಿದ್ದು ಇದೀಗ ಅದು ವೈರಲ್ ಆಗ್ತಿದೆ. ನಾಶವಾದ ಕಟ್ಟಡದಿಂದ ತಾಹಾ ನನ್ನು ರಕ್ಷಿಸಲಾಗಿದೆ ಹಾಗೂ ಕೆಲವು ಗಂಟೆಗಳ ಬಳಿಕ ಅವರ ಕುಟುಂಬದವರನ್ನು ರಕ್ಷಿಸಿದ್ದು ಸಾವಿನ ದವಡೆಯಿಂದ ಪಾರಾದ ಕುಟುಂಬ ಈಗ ಮತ್ತೆ ಒಂದಾಗಿದೆ.
🇹🇷FLASH| [#Turquie] Un jeune de 17 ans, habitant Adiyaman, s’est trouvé séparé des siens et coincé sous les décombres après le séisme du 6 février. Taha Erdem a alors enregistré une vidéo sur son portable, en guise d’adieu. Il a finalement pu être secouru et retrouver ses proches pic.twitter.com/Bi5hLcoA93
— ELRAF ©️🧢 (@ElRaf67) February 18, 2023