ಮಂಡ್ಯದಲ್ಲಿ ಯುವಕನೊಬ್ಬ ರಸ್ತೆ ಮಧ್ಯದಲ್ಲೇ ಯುವತಿಗೆ ತಾಳಿ ಕಟ್ಟಿರುವ ಘಟನೆ ನಡೆದಿದೆ. ಕಾಲೇಜು ಮುಗಿಸಿ ಯುವತಿ ಮನೆಗೆ ಹೋಗುತ್ತಿದ್ದಳು. ಈ ವೇಳೆ ಯುವಕನೊಬ್ಬ ಯುವತಿ ಮುಂದೆ ಪ್ರತ್ಯಕ್ಷನಾಗಿದ್ದಾನೆ. ಆಕೆಯನ್ನು ಬಿಗಿದಪ್ಪಿದ್ದಾನೆ. ಆ ಯುವತಿ ಆತನಿಂದ ಬಿಡಿಸಿಕೊಳ್ಳಲು ಸಾಕಷ್ಟು ಪರದಾಡಿದ್ದಾಳೆ. ಆದ್ರೆ ಪಟ್ಟು ಬಿಡದ ಯುವಕ, ಯುವತಿಯನ್ನು ಅತ್ತಿತ್ತ ಅಲುಗಾಡಲು ಬಿಡದೆ ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದಾನೆ.