ತನ್ನ ಫೋನ್ ಕದ್ದವನಿಗೆ ಯುವತಿಯೊಬ್ಬಳು ಮನಸೋತು ಪ್ರೀತಿಸಲು ಪ್ರಾರಂಭಿಸಿದ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಇಮ್ಯಾನುಯೆಲಾ ಎಂಬಾಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಳ್ಳನೊಬ್ಬ ಆಕೆಯ ಮೊಬೈಲ್ ಕಸಿದುಕೊಂಡು ಪರಾರಿಯಾಗಿದ್ದಾನೆ. ಈ ವೇಳೆ ಆಕೆಗೆ ಏನೂ ಮಾಡಲು ಸಾಧ್ಯವಾಗಿರಲಿಲ್ಲ.
ಇಮ್ಯಾನುಯೆಲಾನ ಮೊಬೈಲ್ ಕದ್ದುಕೊಂಡು ಹೋದ ಕಳ್ಳನ ಮನಸ್ಸು ಮೊಬೈಲ್ ನಲ್ಲಿದ್ದ ಆಕೆಯ ಫೋಟೋ ನೋಡಿ ಬದಲಾಗಿದೆ. ಮೊಬೈಲ್ ಕದ್ದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ. ಬಳಿಕ ಇಬ್ಬರೂ ಭೇಟಿಯಾಗಿ ಪ್ರೀತಿಯನ್ನು ವ್ಯಕ್ತಪಡಿಸಿ ಎರಡು ವರ್ಷ ಡೇಟಿಂಗ್ ನಲ್ಲಿದ್ದರು. ಇದೀಗ ಇವರ ಪ್ರೇಮ ಕಥೆಯ ವಿಡಿಯೋ ವೈರಲ್ ಆಗಿದೆ.
ನಾನು ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನನ್ನ ಮೊಬೈಲ್ ಅನ್ನು ಯುವಕನೊಬ್ಬ ಕಳವು ಮಾಡಿದ್ದ. ಬಳಿಕ ಒಂದು ಡೇಟ್ ನೈಟ್ ನಲ್ಲಿ ನಮಗೆ ಪ್ರೀತಿ ಶುರುವಾಗಿದೆ ಎಂದು ಇಮ್ಯಾನುಯೆಲಾ ತನ್ನ ಪ್ರೀತಿ ಆರಂಭವಾದ ಕಥೆಯನ್ನು ವಿಡಿಯೋ ದಲ್ಲಿ ಹೇಳಿಕೊಂಡಿದ್ದಾಳೆ.
ಫೋನ್ ಕದ್ದು, ಅದರಲ್ಲಿ ಇಮ್ಯಾನುಯೆಲಾನ ಫೋಟೋ ನೋಡಿದಾಗ ಅವಳ ಸೌಂದರ್ಯ ನೋಡಿ ಇಷ್ಟೊಂದು ಸುಂದರವಾದ ಯುವತಿಯನ್ನು ನಾನು ಎಲ್ಲೂ ನೋಡಿಲ್ಲ ಎಂದೆನಿಸಿತ್ತು. ಬಳಿಕ ಫೋನ್ ಕದ್ದ ಬಗ್ಗೆ ಪಶ್ಚತ್ತಾಪವಾಗಿದೆ ಎಂದು ಯುವಕ ಹೇಳಿದ್ದಾನೆ.


ಒಟ್ಟಿನಲ್ಲಿ ಇವರಿಬ್ಬರ ಪ್ರೀತಿಯ ಕಥೆ ಈಗ ಟ್ವೀಟರ್ ನಲ್ಲಿ ವೈರಲ್ ಆಗಿದೆ.

error: Content is protected !!