Latest

ಪ್ರತೀ ರಾತ್ರಿ ಲವರ್ ಮೀಟ್ ಆಗೋಕೆ ಗ್ರಾಮದ ಟ್ರಾನ್ಸ್‌ಫಾರ್ಮರ್ ಫ್ಯೂಸ್ ತೆಗೆಯುತ್ತಿದ್ದ ಯುವತಿ!

ಬಿಹಾರದ ಬೆಟ್ಟಿಯಾ ಗ್ರಾಮದ ಯುವತಿ ಸಂಪೂರ್ಣ ಗ್ರಾಮದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಪ್ರಿಯಕರನನ್ನು ಭೇಟಿಯಾಗುತ್ತಿದ್ದಳೆ. ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್‌ಫಾರ್ಮರ್‌ ಬಳಿ ಬಂದು ಪ್ರೇಮಿಯನ್ನು ಭೇಟಿ ಯಾಗಲು ಕಾಯುತ್ತಿದ್ದಳು. ಪ್ರಿಯಕರ ಬಂದು ಮೊದಲು ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಎಬಿ (ಏರ್ ಬ್ರೇಕ್ ಸ್ವಿಚ್) ಸ್ವಿಚ್ ಕೆಳಗೆ ಬೀಳಿಸುತ್ತಿದ್ದನು. ಇದರಿಂದಾಗಿ ಇಡೀ ಗ್ರಾಮದ ದೀಪಗಳು ಆಫ್ ಆಗುತ್ತಿದ್ದವು. ಆಗ ಇಬ್ಬರೂ ರಾತ್ರಿಯ ಕತ್ತಲಲ್ಲಿ ಭೇಟಿಯಾಗುತ್ತಿದ್ದರು. ನಂತರ ಪ್ರಿಯಕರ ಮರಳಿ ಹೋದ ನಂತರ ಯುವತಿ ಟ್ರಾನ್ಸ್‌ಫಾರ್ಮರ್ ಸ್ವಿಚ್ ಹಾಕುತ್ತಿದ್ದಳು.
ಗ್ರಾಮದಲ್ಲಿ ದಿನಾಲೂ ಕರೆಂಟ್ ಕಟ್ ಆಗುವ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು, ಜನರು ನಿಗಾ ವಹಿಸಿದ್ದರು. ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರು. ಇದೇ ವೇಳೆ ಜುಲೈ 14ರಂದು ಗೆಳತಿಯನ್ನು ಭೇಟಿಯಾಗಲು ಬಂದಿದ್ದ ಲವರ್ಸ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿಡಿಯೋದಲ್ಲಿ ಆರರಿಂದ ಏಳು ಮಂದಿ ಜೋಡಿಯನ್ನು ಸುತ್ತುವರಿದಿದ್ದಾರೆ. ಎಲ್ಲರೂ ಸೇರಿ ಹುಡುಗನಿಗೆ ಬೆಲ್ಟ್‌ನಿಂದ ಹೊಡೆಯುತ್ತಾರೆ. ಈ ಸಂದರ್ಭದಲ್ಲಿ ಯುವತಿ ತನ್ನ ಪ್ರಿಯಕರನನ್ನು ಥಳಿಸುತ್ತಿರುವುದನ್ನು ಕಂಡು ಆತನನ್ನು ರಕ್ಷಿಸಲು ಜನರನ್ನು ಹೊಡೆದಿದ್ದಾಳೆ. ಥಳಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗಿದೆ. ಇದರಲ್ಲಿ ಕೆಲವರು ಯುವಕನಿಗೆ ದೊಣ್ಣೆಯಿಂದ ಹೊಡೆಯುತ್ತಿರುವುದು ಕಂಡುಬರುತ್ತದೆ. ನೌತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ವಿಡಿಯೋ ವೈರಲ್ ಆದ ಬಳಿಕ ಯುವತಿಯ ಪ್ರೇಮಿ ಆಕೆಯ ಗ್ರಾಮಕ್ಕೆ ಬಂದು ಆಕೆಯನ್ನು ಥಳಿಸಿದವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಂಡಿರುವ ಪೊಲೀಸರು, ವೀಡಿಯೋ ಆಧರಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ವೇಳೆ ಪ್ರಿಯಕರ ಮತ್ತು ಗೆಳತಿಯ ಕುಟುಂಬಗಳ ನಡುವೆ ಸಮಸ್ಯೆ ಇತ್ಯರ್ಥವಾಗಿದೆ. ಇಬ್ಬರೂ ಶೀಘ್ರದಲ್ಲೇ ಮದುವೆ ಯಾಗಲಿದ್ದಾರೆ ಎಂದು ಗೆಳತಿ ಮತ್ತು ಗೆಳೆಯನ ಸಂಬಂಧಿಕರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ನೌತನ್ ಪೊಲೀಸ್ ಠಾಣೆಯ ಮುಖ್ಯಸ್ಥ ಖಾಲಿದ್ ಅಖ್ತರ್, ಈ ವಿಷಯವು ಪ್ರೇಮ ಸಂಬಂಧವಾಗಿದೆ. ಹೀಗಾಗಿ ಸೂಕ್ಷ್ಮವಾಗಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

1 month ago