Latest

ಆರೋಪಿ ನಯಾಜ್‌ಗೆ ಠಾಣೆಯ ಸೆಲ್‌ನಲ್ಲಿ ಮೊಬೈಲ್: ಪೊಲೀಸ್ ಕಾನ್‌ಸ್ಟೆಬಲ್‌ ವರ್ಗಾವಣೆ

ಹಾವೇರಿ: ಶುಶ್ರೂಷಕಿ ಸ್ವಾತಿ ಬ್ಯಾಡಗಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಇಮಾಮ್‌ಸಾಬ್ ಬೆಣ್ಣೆಗೇರಿಗೆ ಪೊಲೀಸ್ ಠಾಣೆಯ ಸೆಲ್‌ನಲ್ಲಿ ಅನಧಿಕೃತವಾಗಿ ಮೊಬೈಲ್ ಫೋನ್ ಒದಗಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಈ ಆರೋಪದ ಹಿನ್ನೆಲೆಯಲ್ಲಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾನ್‌ಸ್ಟೆಬಲ್ ಎಂ.ಎಚ್. ಬಣಕಾರ ಅವರನ್ನು ಹಾವೇರಿ ನಗರ ಠಾಣೆಗೆ ವರ್ಗಾಯಿಸಲಾಗಿದೆ.

ಪೊಲೀಸ್ ಸೆಲ್‌ನಲ್ಲಿ ಅನುಮಾನಾಸ್ಪದ ಚಟುವಟಿಕೆ

ಕಾನ್‌ಸ್ಟೆಬಲ್ ಬಣಕಾರ ಅವರು ಕೇವಲ ಮೊಬೈಲ್ ಫೋನ್ ನೀಡುವುದಷ್ಟೇ ಅಲ್ಲ, ಮತ್ತೊಬ್ಬ ಆರೋಪಿ ಗೆ ಗುಟ್ಕಾ ಸಹ ಒದಗಿಸಿದ ಮಾಹಿತಿ ಲಭ್ಯವಾಗಿದೆ. ಈ ವಿಚಾರವನ್ನು ಗಮನಿಸಿದ ಸ್ವಾತಿ ಬ್ಯಾಡಗಿಯ ಅವರ ಚಿಕ್ಕಪ್ಪ, ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರಿಗೆ ದೂರು ಸಲ್ಲಿಸಿದರು. ಈ ದೂರಿನ ಆಧಾರದ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಪೊಲೀಸ್ ಇಲಾಖೆ ನಿರ್ದಿಷ್ಟ ಮಾರ್ಗಸೂಚಿ ಉಲ್ಲಂಘನೆ

ಬಂಧಿತ ಆರೋಪಿ ತನಿಖೆ ಸಮಯದಲ್ಲಿ ಕೇವಲ ಕುಟುಂಬದ ಸದಸ್ಯರು ಮತ್ತು ವಕೀಲರನ್ನು ಮಾತ್ರ ಸಂಪರ್ಕಿಸಬಹುದು. ಇದೂ ಕೂಡ ತನಿಖಾಧಿಕಾರಿಯ ಅನುಮತಿ ಪಡೆದುಕೊಂಡು ಮಾತ್ರ ಸಾಧ್ಯ. ಆದರೆ ಈ ನಿಯಮ ಪಾಲಿಸದೆ, ಅನುಮತಿ ಇಲ್ಲದೇ ನಯಾಜ್‌ ಗೆ ಕಾನ್‌ಸ್ಟೆಬಲ್ ಬಣಕಾರ ಅವರು ಮೊಬೈಲ್ ಒದಗಿಸಿದ್ದ ಬಗ್ಗೆ ಪಕ್ಕಾ ಮಾಹಿತಿ ದೊರಕಿದೆ.

ಈ ಕುರಿತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ. ಶಿರಕೋಳ ಪ್ರತಿಕ್ರಿಯಿಸಿ, “ಪೊಲೀಸ್ ಇಲಾಖೆಯ ಶಿಸ್ತು ಮತ್ತು ನಿಯಮಗಳನ್ನು ಉಲ್ಲಂಘಿಸಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಣಕಾರ ಅವರನ್ನು ಸ್ಥಳಾಂತರ ಮಾಡಲಾಗಿದೆ. ತಪ್ಪಿತಸ್ಥರಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದರು.

ಈ ಪ್ರಕರಣದ ಬೆಳವಣಿಗೆಯು ಪೊಲೀಸ್ ಇಲಾಖೆ ಒಳಗಿನ ನಿಯಮಾವಳಿಗಳನ್ನು ಗಂಭೀರವಾಗಿ ಪರಿಗಣಿಸಲು ವಶದಲ್ಲಿದೆ. ಜನಸಾಮಾನ್ಯರ ವಿಶ್ವಾಸ ಉಳಿಸಿಕೊಳ್ಳಲು ಪೊಲೀಸರು ಶಿಸ್ತುಬದ್ಧವಾಗಿ ಕೆಲಸ ಮಾಡುವ ಅಗತ್ಯತೆಯೂ ಈ ಮೂಲಕ ಒತ್ತಿ ಹೇಳಲಾಗಿದೆ.

nazeer ahamad

Recent Posts

ಹೊನ್ನಾವರದಲ್ಲಿ ಇಸ್ಪೀಟ್ ಕ್ಲಬ್ ಮೇಲೆ ದಾಳಿ: 17 ಜನರ ಬಂಧನ

ಹೊನ್ನಾವರ: ಹೊನ್ನಾವರ ಪೊಲೀಸರು ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿ, ಅಂದರ್ ಬಾಹರ್ ಜೂಜಾಟದಲ್ಲಿ ತೊಡಗಿದ್ದ 17 ಜನರನ್ನು ಬಂಧಿಸಿದ್ದಾರೆ.…

20 hours ago

ಭಟ್ಕಳದಲ್ಲಿ ಅಜ್ಜಿಯ ಬಂಗಾರ ಕಳವು: ತಜಮುಲ್ ಹಸನ್ ಬಂಧನ

ಭಟ್ಕಳ: ಅಜ್ಜಿಯ ಬಂಗಾರ ಕದ್ದು ಮುತ್ತೋಟ ಫೈನಾನ್ಸ್‌ನಲ್ಲಿ ಅಡವಿಟ್ಟಿದ್ದ ಭಟ್ಕಳದ ತಜಮುಲ್ ಹಸನ್ ಅವರನ್ನು ಪೊಲೀಸರು ಬಂಧಿಸಿ, ಅಡವಿಟ್ಟ ಚಿನ್ನವನ್ನು…

20 hours ago

ಯುಗಾದಿ ಪಾಡ್ಯದ ನಿಮಿತ್ಯವಾಗಿ ದೇವರ ಪೂಜೆಗೆಂದು ತೆರಳಿದ ಯುವಕರು ಕೃಷ್ಣಾ ನದಿ ನೀರು ಪಾಲು

ಬಾಗಲಕೋಟೆ: ಜಿಲ್ಲೆಯ ಬಾಗಲಕೋಟೆ ತಾಲೂಕಿನ ಇಲಾಳ ಗ್ರಾಮದ ಶ್ರೀ ಬೊಮ್ಮಲಿಂಗೆಶ್ವರ ಹಾಗೂ ಲಕ್ಕಮ್ಮದೇವಿಯ ಪೂಜಾ ನಿಮಿತ್ಯವಾಗಿ ಪ್ರತಿ ವರ್ಷದಂತೆ ಈ…

20 hours ago

ಯುಗಾದಿ ಅಮಾವಾಸ್ಯೆ ಯಂದು ಜವರಾಯನ ಅಟ್ಟಹಾಸ, ಕಾಮಹಳ್ಳಿಯಲ್ಲಿ ಮೂವರು ಜಲಸಮಾಧಿ

ಯುಗಾದಿ ಅಮಾವಾಸ್ಯೆ ದಿನವಾದ ಇಂದು ಜವರಾಯನ ಅಟ್ಟಹಾಸಕ್ಕೆ ಮೂರು ಮಂದಿ ಜಲಸಮಾಧಿಯಾಗಿರುವ ಘಟನೆ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ…

20 hours ago

ಸಾಲದ ಒತ್ತಡ ಮತ್ತು ಬೆಟ್ಟಿಂಗ್ ಮೋಸ: ವ್ಯಕ್ತಿಯ ದಾರುಣ ಅಂತ್ಯ

ಹಾಸನ ಜಿಲ್ಲೆಯ ಅಟ್ಟಾವರ ಗ್ರಾಮದಲ್ಲಿ ಸಾಲದ ಒತ್ತಡ ಮತ್ತು ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಮೋಸಕ್ಕೆ ಒಳಗಾಗಿ ಮನನೊಂದ ವ್ಯಕ್ತಿಯೊಬ್ಬ ವಿಷ ಸೇವಿಸಿ…

2 days ago

ಕ್ರೇನ್ ಬಳಸಿದ ಗ್ಯಾಂಗ್‌ಸ್ಟರ್ ಶೈಲಿಯ ಎಟಿಎಂ ದರೋಡೆ: 3.71 ಲಕ್ಷ ರೂಪಾಯಿ ದೋಚಿದ ದುಷ್ಕರ್ಮಿಗಳು

ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ನಡೆದ ಗ್ಯಾಂಗ್‌ಸ್ಟರ್ ಶೈಲಿಯ ಎಟಿಎಂ ದರೋಡೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಮುಸುಕುಧಾರಿಗಳಾದ ನಾಲ್ವರು ಕಳ್ಳರು, ಕ್ರೇನ್…

2 days ago