ಕೊಟ್ಟೂರು: ತಾಲೂಕಿನ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಬೈಕ್ ಕಳ್ಳತನ ದೂರುಗಳು ದಾಖಲಾಗುತ್ತಿರುವುದನ್ನು ಗಮನಿಸಿದ ಡಿವೈಎಸ್ಪಿ ಮಲ್ಲೇಶಪ್ಪ ಮಲ್ಲಾಪುರ ಇವರ ಮಾರ್ಗದರ್ಶನದಲ್ಲಿ ಸಿಪಿಐ. ಟಿ. ವೆಂಕಟಸ್ವಾಮಿ ಹಾಗೂ ಪಿ ಎಸ್ ಐ ಗೀತಾಂಜಲಿ ಶಿಂಧೆ ರವರ ನೇತೃತ್ವದ ಬಸವರಾಜ ಹೆಚ್. ವೀರೇಶ್, ಶಶಿಧರ, ನಾಗಪ್ಪ ಯು.ಹೆಚ್.ಸಿ. ಕೊಟ್ರುಗೌಡ, ರೇವಣಸಿದ್ದಪ್ಪ ಪೊಲೀಸ್ ರ ತಂಡ ಬೈಕ್ ಕಳ್ಳರ ಪತ್ತೆಗಾಗಿ ರಚಿಸಲಾಗಿತ್ತು.
ಮಲ್ಲೇಶಪ್ಪ ಮಲ್ಲಾಪುರ ಡಿ ವೈ ಎಸ್ಪಿ ಕೂಡ್ಲಿಗಿ ಇವರ ಸಲಹೆಯಂತೆ ಕೊಟ್ಟೂರು ಪೊಲೀಸ್ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಹ್ಯಾಳ್ಯಾ ರಸ್ತೆಯ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿ ದೂಪದಹಳ್ಳಿ ಗ್ರಾಮದ ಕೆ ಸಂತೋಷ (31) ಎಂಬ ವ್ಯಕ್ತಿಯನ್ನು ಬಂಧಿಸಿ ಅವನ ಬಳಿ ಇದ್ದ ವಿವಿಧ ಜಿಲ್ಲೆಗಳ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ 7 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶ ಪಡಿಸಿಕೊಂಡ ಬೈಕ್ ಗಳ ಅಂದಾಜು ಮೊತ್ತ 2 ಲಕ್ಷದ 50 ಸಾವಿರ ಎಂದು ತಿಳಿದುಬಂದಿದೆ
ತಂಡದ ಕಾರ್ಯಚರಣೆ ಯಶಸ್ವಿಯನ್ನು ಗಮನಿಸಿದ ವಿಜಯನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಹರಿಬಾಬು ಕೊಟ್ಟೂರು ಪೊಲೀಸ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ:- ಮಣಿಕಂಠ. ಬಿ