ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧ. ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೀನಿ, ಇಲ್ಲದಿದ್ರೆ ಸುಮ್ಮನಾಗ್ತೀನಿ. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ. ಯಾರೂ ಈ ರೀತಿ ಮಾಡಬಾರದು ಎಂದು ಸಚಿವ ವಿ.ಸೋಮಣ್ಣ ಕಣ್ಣೀರು ಹಾಕಿದ್ದಾರೆ. ಇತ್ತೀಚೆಗೆ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ಆಗ್ತಾರೆ ಎಂಬ ವಿಚಾರ ರಾಜಕೀಯದಲ್ಲಿ ಸಾಕಷ್ಟು ಚರ್ಚೆ ಆಗ್ತಿತ್ತು. ಈ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿದ ಸೋಮಣ್ಣ, ಸುಳ್ಳು ಹೇಳಿ ನಾನು ನನ್ನ ಜೀವನ ಮಾಡಲ್ಲ. ನಮ್ಮ ತಾಯಿ, ತಂದೆ ನನಗೆ ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ನಾನು ಯಾರ ಮುಲಾಜಿನಲ್ಲೂ ಬದುಕಿಲ್ಲ. ಅನಾವಶ್ಯಕವಾಗಿ ಇನ್ನೊಬ್ಬರ ತೇಜೋವಧೆ ಮಾಡೋದು ಒಳ್ಳೆಯದಲ್ಲ ಎಂದು ಸೋಮಣ್ಣ ಕಣ್ಣೀರು ಹಾಕಿದರು.
ನಾನು ಸಂಜೆ ಕಾಲೇಜಿನಲ್ಲಿ ಓದಿದ್ದೇನೆ. ಕಸ್ತೂರಿ ಮಾತ್ರೆ ಮಾರಿದ್ದೇನೆ. ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ಸುಮ್ಮನೆ ಇರೋನಲ್ಲ. ನಾನು ಈಗಾಗಲೇ ಹಲವು ಬಾರಿ ಸ್ಪರ್ಧೆ ಮಾಡಿದ್ದೇನೆ. ಪ್ರಧಾನಿ ಮೋದಿ ಅವರು ಉತ್ತಮ ಮಾರ್ಗದಲ್ಲಿ ನಡೆಯುತ್ತಿದ್ದಾರೆ. ಬಿಜೆಪಿಯಲ್ಲೇ ಮುಂದುವರೆಯುತ್ತೇನೆ. ರಾಜಕೀಯದಲ್ಲಿ ಯಾರಿಗೆ ಯಾರೂ ಶತ್ರು ಅಲ್ಲ ಎಂದು ಸೋಮಣ್ಣ ಹೇಳಿದರು.
1 thought on “ಕೈ ಮುಗಿದು ಕಣ್ಣೀರು ಹಾಕಿ ‘ಸ್ವಾಭಿಮಾನಕ್ಕೆ ಧಕ್ಕೆ ಆದ್ರೆ ಸುಮ್ಮನಿರಲ್ಲ’- ಸಚಿವ ಸೋಮಣ್ಣ”
Comments are closed.
ಸೋಮಣ್ಣ ಅವರಿಗೆ ಕಿವಿಮಾತು
ಸೋಮಣ್ಣ ಒಳ್ಳೆ ರಾಜಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವ ಉಳ್ಳ ವ್ಯಕ್ತಿ. ಇಂಥ ವ್ಯಕ್ತಿಗಳಿಗೆ ಜನ ಪಕ್ಷ ನೋಡಿ ವೋಟ್ ಹಾಕಲ್ಲ. ಇಂಥವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಳ ವಾಗಬೇಕು. ಆಗ ಮಾತ್ರ ಹೈಕಮಾಂಡ್ ಗಳ ಕಪಿಮುಷ್ಟಿಗೆ ಕಡಿವಾಣ ಹಾಕಲು ಸಾಧ್ಯ. ಇಲ್ಲದಿದ್ದರೆ ಯಡಿಯೂರಪ್ಪ ಅವರಿಗೆ ಆದ ಗತಿಯೇ ಎಲ್ಲರಿಗೂ ಆಗುತ್ತೆ. ರೇವಣ್ಣ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವದಲ್ಲಿ ಬರುವುದಕ್ಕೆ ಕಾರಣರಾದ ಯಡಿಯೂರಪ್ಪ ವಿರುದ್ಧ ತೊಡೆ ತಟ್ಟ ಬಾರದು ವಿಜಯ ಸೂರ್ಯ ವಾರಪತ್ರಿಕೆ ಸಂಪಾದಕ ಮತ್ತು ವಕೀಲ ನಾದ ನನ್ನ ಸಂದೇಶ.
ಇಂತಿ ನಿಮ್ಮ ಹಿತೈಷಿ
ಪಂಚನಹಳ್ಳಿ ದಯಾನಂದ ಸಾಗರ ಮೂರ್ತಿ
ವಕೀಲ ಮತ್ತು ಪತ್ರಕರ್ತ