ಸಾಲ ಕೊಡ್ತೀನಿ ಅಂತ ಕರೆಸಿ ಸಕ್ರಪ್ಪ ಲಮಾಣಿ ಹೆಸರಿನ ವ್ಯಕ್ತಿಯನ್ನು ಕೊಂದು ಹಾಕಿದ್ದರು. ಕೊಲೆಗಾರರಿಗೆ ಸ್ಕೆಚ್ ಹಾಕಿ ಕೊಟ್ಟಿದ್ದು ಆತನ ಹೆಂಡತಿ.
ಮಗಳು ಕೊಲೆ ಮಾಡಿಸಿದ್ರೆ ಚಿಕ್ಕಪ್ಪನಾದವನು ಸಕ್ರಪ್ಪ ಲಮಾಣಿಯ ದೇಹಕ್ಕೆ ಬೆಂಕಿ ಇಟ್ಟಿದ್ದ. ಕೊಲೆ ಮಾಡಿದ ಮರುದಿನ ಶವವನ್ನು ಟೈರ್ ಹಾಕಿ ಸುಟ್ಟು ಹಾಕಿ ಗುರುತೇ ಸಿಗದಂತೆ ಮಾಡಿದ್ದರು. ಆ ಕೊಲೆಯ ಬೆನ್ನು ಬಿದ್ದ ಪೊಲೀಸರಿಗೆ ಸಿಕ್ಕಿದ್ದು ರೋಚಕ ಟ್ವಿಸ್ಟ್‌ಗಳು.
ಕಾಲಿಗೆ ಆಗಿದ್ದ ಗಾಯ ನೋಡಿ ಕೊಲೆಯಾದ ವ್ಯಕ್ತಿ ಸಕ್ರಪ್ಪ ಎಂದು ಕುಟುಂಬಸ್ಥರು ಗುರುತು ಹಿಡಿದಿದ್ರು. ಮೃತ ಪಟ್ಟ ವ್ಯಕ್ತಿ ಸಕ್ರಪ್ಪ ಅಂತ ಖಚಿತವಾದ ಮೇಲೆ ಪೊಲೀಸರಿಗೆ ಕೊಲೆಗಡುಕರ ಪತ್ತೆ ದಾರಿ ಬಹಳ ಸುಲಭ ಆಗಿ ಬಿಡ್ತು. ಸಕ್ರಪ್ಪನಿಗೆ ಗ್ರಾಮದಲ್ಲಿ ಯಾರಾದ್ರೂ ಶತ್ರುಗಳಿದ್ದಾರ ಅಂತ ಪೊಲೀಸರು ಮಾಹಿತಿ ಪಡೆಯಲು ಮುಂದಾಗುತ್ತಾರೆ. ಆ ಮಾಹಿತಿಯನ್ನ ಆಧರಿಸಿ ಇಬ್ಬರನ್ನ ಎತ್ತಾಕೊಂಡು ಬಂದಾಗಲೇ ಗೊತ್ತಾಗಿದ್ದು ಅವನ ಕಥೆ ಮುಗಿಸಿದವರಲ್ಲಿ ಆತನ ಹೆಂಡತಿ ಕೂಡ ಒಬ್ಬಳು ಅನ್ನೋದು.
ಈ ಘಟನೆ ಹಾವೇರಿಯಲ್ಲಿ ನಡೆದಿದ್ದು ಕೊಲೆ ಮಾಡಿದವರುನು ಹಾಗೂ ಅನೈತಿಕ ಸಂಬಂಧಕ್ಕೆ ಅಡ್ಡವಾಗಿದ್ದ ಗಂಡನನ್ನು ಕೊಲೆ ಮಾಡಿಸಿದ ಹೆಂಡತಿಯನ್ನು ಪೊಲೀಸರು ಜೈಲಿಗೆ ಹಟ್ಟಿದ್ದಾರೆ.