ಆಳಂದ : 2021ನೇ ಸಾಲಿನ ನವಂಬರ ತಿಂಗಳಲ್ಲಿ ಆಳಂದ ಪಟ್ಟಣದ ಬಸ್ ನಿಲ್ದಾಣದ ಎದುರುಗಡೆ ಇರುವ ಕೃಷ್ಣ ಲಾಡ್ಜಿನಲ್ಲಿ 10,70,000 ರೂಪಾಯಿಗಳ ಬೆಲೆಯುಳ್ಳ ಬಂಗಾರ,ಹಣ ಮತ್ತು ರಾಡೊ ಕಂಪನಿ ಕೈಯಲ್ಲಿನ ಗಡಿಯಾರ ಕಳ್ಳತನ ಮಾಡಿಕೊಂಡು ಹೋಗಿದ್ದರು ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ಪ್ರಕರಣದ ಪತ್ತೆ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಇಶಾಪಂತ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರವೀಂದ್ರ ಶಿರೂರ ಇವರ ನೇತೃತ್ವದಲ್ಲಿ ಬಾಸು ಚೌವ್ಹಾಣ ಸಿಪಿಐ ಆಳಂದ ಪಿ ಎಸ್ ಐ ತಂಡವನ್ನು ರಚಿಸಿ ಖಚಿತ ಬಾತ್ಮಿ ಮೇರೆಗೆ ಇಂದು ಸದರಿ ಪ್ರಕರಣದಲ್ಲಿ ಆರೋಪಿಯಾದ ವಾಹಿದ ಅಲಿ ಡಾಬರ್ಬಾದ್ ಕ್ರಾಸ್ ಕಲಬುರಗಿ ಹತ್ತಿರ ಆತನನ್ನು ಪತ್ತೆ ಮಾಡಿ 140 ಗ್ರಾಂ ಬಂಗಾರದ ಆಭರಣಗಳು ಒಂದು ಕೈಗಡಿಯಾರ ಮೂರು ಮೊಬೈಲ್ ಗಳು ಹಾಗೂ ಒಂದು ಟ್ಯಾಬ್ ಹೀಗೆ ಒಟ್ಟು 8,00,000 ನಗ್ದುವುಗಳನು ವಶಕ್ಕೆ ಪಡೆದುಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ವರದಿ: ಗುರಯ್ಯ ಸ್ವಾಮಿ

error: Content is protected !!