ಪಾಕಿಸ್ತಾನದ ಯುವಕನೊಬ್ಬ ನಮಗೆ ಭಾರತದ ಪ್ರಧಾನಿ ಮೋದಿಯಂತಹ ನಾಯಕ ಬೇಕು ಎಂದು ಹೇಳುವ ವೀಡಿಯೊವನ್ನ ಪತ್ರಕರ್ತರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ ಯುವಕ, ‘ನಾವು ಪಾಕಿಸ್ತಾನದ ಯಾವುದೇ ನಾಯಕನನ್ನ ಬಯಸೋದಿಲ್ಲ. ಭಾರತದ ಪ್ರಧಾನಿ ಮೋದಿಯವರಂತಹ ನಾಯಕನನ್ನ ಮಾತ್ರ ಬಯಸುತ್ತೇವೆ’ ಎಂದು ಹೇಳಿದ್ದಾನೆ. ವೀಡಿಯೊದಲ್ಲಿ, ಪಾಕಿಸ್ತಾನವು ಇನ್ಮುಂದೆ ಭಾರತಕ್ಕೆ ಸಮನಾಗಲು ಸಾಧ್ಯವಿಲ್ಲ ಎಂದಿದ್ದಾನೆ.
ವಿಭಜನೆಯ ಹೊರತಾಗಿಯೂ, ಭಾರತವು ಸಾಕಷ್ಟು ಅಭಿವೃದ್ಧಿಯಾಗಿದೆ. ಆದ್ರೆ, ಪಾಕಿಸ್ತಾನವು ಅಲ್ಲಿಯೇ ಉಳಿದಿದೆ ಎಂದು ಯುವಕ ಹೇಳಿದ್ದಾನೆ. ಇನ್ನು ವಿಭಜನೆಯಾಗದಿದ್ದರೆ, ನಾವು ಇಂದು ಭಾರತದ ಜನರಂತೆ ಟೊಮೆಟೊವನ್ನ 20 ರೂ.ಗೆ ಮತ್ತು ಪೆಟ್ರೋಲ್ ಅನ್ನು 150 ರೂ.ಗೆ ಖರೀದಿಸುವುತ್ತಿದ್ದೇವು ಎಂದ ನೋವು ತೋಡಿಕೊಂಡಿದ್ದಾನೆ. ಇನ್ನು ವೀಡಿಯೊದಲ್ಲಿ, ಯುವಕ ಭಾರತದೊಂದಿಗೆ ಪ್ರಧಾನಿ ಮೋದಿಯವರನ್ನ ಹೊಗಳುತ್ತಿರುವುದನ್ನ ಕಾಣಬಹುದು.
ನಮಗೆ ನವಾಜ್ ಷರೀಫ್ ಅಥವಾ ಇಮ್ರಾನ್ ಖಾನ್ ಬೇಕಿಲ್ಲ, ಅಲ್ಲಾಹನು ನಮಗೆ ಮೋದಿಯನ್ನು ಕೊಡಲಿ.! ಈ ವೀಡಿಯೊವನ್ನ ಫೆಬ್ರವರಿ 20ರಂದು ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ಪಾಕಿಸ್ತಾನದ ಯೂಟ್ಯೂಬರ್ ಸನಾ ಅಮ್ಜದ್ ಅವರ ಎಪಿಸೋಡ್ನ ಈ ಕ್ಲಿಪ್ ಈಗ ಹೆಚ್ಚು ವೈರಲ್ ಆಗುತ್ತಿದೆ. ಆದಾಗ್ಯೂ, ಯುವಕ ವೀಡಿಯೊದಲ್ಲಿ ಭಾರತ ಮತ್ತು ಪಿಎಂ ಮೋದಿಯವರ ಬಗ್ಗೆ ಅನೇಕ ವಿಷಯಗಳನ್ನ ಹೇಳಿದ್ದಾನೆ ಮತ್ತು ಅವನು ಭಾರತ ಮತ್ತು ಪ್ರಧಾನಿಯನ್ನ ಅನೇಕ ಸ್ಥಳಗಳಲ್ಲಿ ಶ್ಲಾಘಿಸುತ್ತಿರುವುದು ಕಂಡುಬಂದಿದೆ. ವೀಡಿಯೊ ಮುಗಿಯುವ ಮೊದಲು, ಯುವಕ ತನ್ನ ಬಯಕೆಯನ್ನ ವ್ಯಕ್ತಪಡಿಸಿದ್ದು, ಪಾಕಿಸ್ತಾನದಲ್ಲಿ ಯಾವುದೇ ಪಾಕಿಸ್ತಾನಿ ನಾಯಕನನ್ನ ಬೆಂಬಲಿಸೋದಿಲ್ಲ ಎಂದು ಹೇಳಿದ್ದಾನೆ. ನಾವು ನವಾಜ್ ಷರೀಫ್ ಅಥವಾ ಇಮ್ರಾನ್ ಖಾನ್ ಅವರನ್ನ ಬಯಸುವುದಿಲ್ಲ. ಅಷ್ಟೇ ಅಲ್ಲ, ಪರ್ವೇಜ್ ಮುಷರಫ್ ಮತ್ತು ಭುಟ್ಟೋ ಅವರನ್ನೂ ಬಯಸುವುದಿಲ್ಲ ಎಂದು ಹೇಳಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಆ ವ್ಯಕ್ತಿಯು ಕ್ಲಿಪ್’ನ ಕೊನೆಯಲ್ಲಿ ‘ಅಲ್ಲಾಹ್ ನಮಗೆ ಮೋದಿಯನ್ನು ನೀಡಿ’ ಎಂದು ವಿವಾದಾತ್ಮಕ ಹೇಳಿಕೆಯನ್ನ ನೀಡಿದ್ದಾನೆ.
Only Indian PM Modi can save us. How Pakistan awam loosing trust on their leaders.
Watch this video
“We don’t want Nawaj Sharif ,We don’t want Imran, We don’t want Benzir, Hame India ka PM Chaiye”#Pakistan #NarendraModi #PakistanEconomicCrisis pic.twitter.com/JEpq7yXgO3
— Manish Shukla (@manishmedia) February 23, 2023