ಕಲಬುರಗಿ: ಕಮಲಾಪುರ್ ತಾಲೂಕಿನ ಮುದಡ್ಗಾ ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದಲ್ಲಿ ಹನುಮಾನ್ ಮಂದಿರ ಹತ್ತಿರ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿಯು ಸಂಪೂರ್ಣ ಕಳಪೆಯಿಂದ ಕೂಡಿದು ಕಾಂಕ್ರೀಟ್ ರಸ್ತೆ ನಿರ್ಮಾಣದ ಮೆಟ್ಲಿಂಗ್ ಕೆಲಸಕ್ಕೆ ಕಳಪೆ ಮಟ್ಟದ ಮಣ್ಣು ಉಯೋಗಿಸಲಾಗಿದೆ. ಗುಣ ಮಟ್ಟದ ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ರಸ್ತೆಯು ನಿರ್ಮಾಣ ಹಂತದಲ್ಲಿ ಸೀಳಿಕೆಯಾಗಿದ್ದು ಮತ್ತು ತೆಗ್ಗು ಬಿದ್ದಿವೆ ಈ ಸಂಬಂಧ ಈಗಾಗಲೇ ಕಾಮಗಾರಿ ಕುರಿತು ಇಲಾಖೆ ಎಂಜಿನಿಯರ್ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ ವಹಿಸಿದ್ದಾರೆ. ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಗ್ರಾಮೀಣ ಭಾಗದಲ್ಲಿ ಕಳಪೆ ಕಾಮಗಾರಿಗಳು ಹೆಚ್ಚಾಗಿದ್ದು, ಸರಕಾರದ ಹಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಿ ತಪ್ಪಿತಸ್ಥ ಎಂಜನೀಯರ್ ಮೇಲೆ ಸೂಕ್ತ ಕ್ರಮ ಕೈಗೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು ಎಂದು ಸ್ಥಳೀಯ ಸಂಘಟನೆಗಳು ಆಗ್ರಹಿಸುವುದರ ಮೂಲಕ ಆಕ್ರೋಶ ಹೊರಹಾಕಿದ್ದಾರೆ.