ಉತ್ತರಕನ್ನಡ ಜಿಲ್ಲೆಯಲ್ಲಿ ಬರುವ ಕುಮಟಾ ತಾಲೂಕಿನ ಬಳಿ ಬೆಟ್ಟಕುಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 66 ಆಂಬುಲೆನ್ಸ್ ವಾಹನ ಚಾಲಕನ ಅಜಾಗರೂಕತೆಯ ಚಾಲನೆಯಿಂದ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕುಮಟಾ ತಾಲೂಕಿನಲ್ಲಿ ನಡೆದಿದೆ . ಕ್ಯಾನ್ಸರ್ ರೋಗಿಯೊಬ್ಬರನ್ನು ಕಾರವಾರದಿಂದ ಮಂಗಳೂರಿಗೆ ಚಿಕಿತ್ಸೆಯ ಕಾರಣವಾಗಿ ತೆರುಳುತ್ತಿರುವಾಗ ಈ ಘಟನೆ ಸಂಭವಿಸಿದ್ದು ಕ್ಯಾನ್ಸರ್ ರೋಗಿ ಕಾರವಾರದ ತಾಲೂಕಿನ ಕಿನ್ನಾರದ ನಿವಾಸಿಯಾದ ಮನೋಜ ದತ್ತಾತ್ರೇಯ ಗುರ( 50) ಮೃತಪಟ್ಟಿದ್ದಾರೆ .ಹಾಗೂ ವಾಹನದಲ್ಲಿದ್ದ ಉಳಿದವರಿಗೂ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಥಮ ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.
ವರದಿ: ಶ್ರೀಪಾದ್ ಎಸ್ ಏಚ್
1 thought on “ಚಾಲಕನ ನಿಯಂತ್ರಣ ತಪ್ಪಿ ಆಂಬುಲೆನ್ಸ್ ಅಪಘಾತ: ರೋಗಿ ಸ್ಥಳದಲ್ಲೇ ಸಾವು”
Comments are closed.
Jeeva thumba amulyavadaddu