ಭಾರತ ದೇಶದಲ್ಲಿ ರೈತ ಎಂದರೆ ಅವನಿಗೆ ಆದಂತಹ ಸ್ಥಾನವಿದೆ. ರೈತ ಜಮಿನೀನಲ್ಲಿ ಉಳುಮೆ ಮಾಡಿ ಬೆಳೆದೆ ಧವಸ ಧಾನ್ಯಗಳನ್ನು ಮಾರುಕಟ್ಟೆಗೆ ತಂದ ಮೇಲೆ ನಮಗೆ ನಿಮಗೆ ಎಲ್ಲರಿಗೂ ಧವಸ ಧಾನ್ಯ ಹಾಗೂ ಅನ್ನ ಸಿಗುತ್ತದೆ .ರೈತ ಈ ದೇಶದ ಬೆನ್ನೆಲಬು. ಜಾನುವಾರುಗಳನ್ನು ಎಲ್ಲರೂ ಪ್ರೀತಿ ವಾತ್ಸಲ್ಯದಿಂದ ಕಾಣಬೇಕು. ಅವುಗಳಿಗೂ ಒಂದು ಜೀವವಿದೆ ಎಂಬುದನ್ನು ಯಾರೂ ಮರೆಯಬಾರದು. ನಿನ್ನೆಯ ದಿನ ಅಮಾನವೀಯ ಘಟನೆ ಇದಕ್ಕೆ ಸಾಕ್ಷಿ . ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಸಮೀಪದ ನೂಲ್ವಿ ಗ್ರಾಮದಿಂದ ಅದರಗುಂಚಿ ಗ್ರಾಮಕ್ಕೆ ಬರುವ ರಸ್ತೆಯಲ್ಲಿ ವೇಗವಾಗಿ ಬಂದ ಕಾರು ಒಂದು ಎಮ್ಮೆ ಕರುವಿಗೆ ಡಿಕ್ಕಿ ಹೊಡೆದು ಅಪಘಾತವಾಗಿತ್ತು.
ನೂಲ್ವಿ ಗ್ರಾಮದ ಮಂಜುನಾಥ ಎಂಬ ರೈತ ಸುಮಾರು ಐದು ಆರು ಎಮ್ಮೆಗಳನ್ನು ಹುಲ್ಲು ಮೇಯಿಸಿಕೊಂಡು ಮರಳಿ ಮನೆಗೆ ತೆರಳುತ್ತಿರುವಾಗ ಈ ಘಟನೆ ಸಂಭವಿಸಿದೆ. ಇಂತ ಸಂದರ್ಭದಲ್ಲಿ ಮನುಷ್ಯನಿಗೆ ಏನಾದರೂ ಈ ಘಟನೆ ಆದರೆ ಅದನ್ನು ಅವನು ತೋರಿಸಿಕೊಳ್ಳುತ್ತಾನೆ ಅಥವಾ ಹೇಳಿಕೊಳ್ಳುತ್ತಾನೆ ರೈತನಿಗೆ ಆಧಾರವಾದ ಜಾನುವಾರುಗಳಿಗೆ ಆದರೇ ಅವುಗಳು ಏನು ಮಾಡಬೇಕು ಇದಕ್ಕೆಲ್ಲ ಯಾರೂ ಹೊಣೆ……??
ಘಟನೆ ಸಂಭವಿಸಿದ ನಂತರ ಸಲ್ಪ ಸಮಯ ಹೊತ್ತು ಕರು ರಸ್ತೆಯ ಮದ್ಯ ಭಾಗದಲ್ಲಿ ಬಿದ್ದಿರುವ ಕಾರಣ ಸಾರಿಗೆ ವಾಹನ ಮತ್ತು ಇತರೆ ವಾಹನ ಓಡಾಟಕ್ಕೆ ಅಡೆತಡೆಯಾಗಿತ್ತು ರಸ್ತೆ ಮದ್ಯ ಭಾಗದಲ್ಲಿ ಬಿದ್ದಿರುವ ಕರುವಿಗೆ ಕಾಲಿನ ಮೂಳೆ ಮುರಿದು. ಕರುವಿನ ಹೃದಯ ಭಾಗ, ತಲೆಗೆ ಮತ್ತು ಬೆನ್ನಿನ ದೊಡ್ಡ ಮೂಳೆಗೆ ಬಲವಾಗಿ ಪೆಟ್ಟು ಬಿದ್ದಿತ್ತು .
ನಂತರ ಭ್ರಷ್ಟರ ಬೇಟೆ ಪತ್ರಿಕೆ ವರದಿಗಾರರು ಮತ್ತು ಸ್ಥಳೀಯ ಗ್ರಾಮಸ್ಥರು ಸೇರಿ ಸ್ಥಳೀಯ ಪಶು ವೈದ್ಯಾಧಿಕಾರಿಗೆ ಹಾಗೂ ತುರ್ತು ಸೇವೆ 112 ಪೊಲೀಸ್ ಇಲಾಖೆಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿ ಅಧಿಕಾರಿಗಳು ಬರುವ ವರೆಗೆ ತಡೆದು ಉದ್ವಿಗ್ನಗೋಳ್ಳುತ್ತಿದ್ದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದೆವು. ಕರುಗೆ ತೀವ್ರ ಪೆಟ್ಟು ಬಿದ್ದಿದ್ದ ಕಾರಣ ಸಾವು ಬದುಕಿನ ಮಧ್ಯೆ ಹೋರಾಡುತ್ತಿತ್ತು ಇದನ್ನು ಗಮನಿಸಿ ವಾಹನ ಮಾಲೀಕನ ಬಳಿ ಗ್ರಾಮಸ್ಥರು ಮಾತನಾಡಿ ರೈತನಿಗೆ 11,000 ಹಣವನ್ನು ಕೊಡಿಸುವ ಮೂಲಕ ನಷ್ಟವನ್ನು ಬರಿಸಿದ್ದಾರೆ.
ನಾವು ಸ್ಥಳೀಯರಿಂದ ಪಡೆದ ಮಾಹಿತಿ ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ ಆದರೂ ಸುಮಾರು ಎರಡೂ ದಿನಕ್ಕೆ ಒಂದರಂತೆ ಅಪಘಾತ ಇಲ್ಲಿ ಸಂಭವಿಸುತ್ತದೆ. ಸಂಬಂದ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಉತ್ತಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡುತ್ತಾರಾ ಕಾದು ನೋಡಬೇಕಾಗಿದೆ. ಎಂದು ತಿಳಿಸಿದ್ದಾರೆ.
ವರದಿ: ಶ್ರೀಪಾದ್ ಹೆಗಡೆ.