ದಾವಣಗೆರೆಯ ಹೆಗಡೆ ನಗರದ ನಿವಾಸಿಯಾದಂತಹ ವೃದ್ಧ ಚಮನ್ ಸಾಬ್ ಹಾಗೂ ವೃದ್ಧೆ ಪಕೀರ ಬಾನು ಕಳೆದ 50 ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ಅವರಿಗೂ ಸಹ ಮದುವೆ ಮಾಡಿಸಿ ಬೇರೆ ಮನೆ ಮಾಡಿ ಕೊಟ್ಟಿರುತ್ತಾರೆ.
50 ವರ್ಷಗಳಿಂದ ಅನ್ಯೋನ್ಯವಾಗಿ ಸಂಸಾರ ನಡೆಸಿದ ಇವರುಗಳು ನೆನ್ನೆ ಈದ್ ಮಿಲಾದ್ ಹಬ್ಬದಂದು ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು ಹಬ್ಬದ ಆಚರಣೆಯನ್ನು ಸಹ ಬಿಟ್ಟು ಜಗಳವಾಡಲು ಮುಂದಾಗಿದ್ದಾರೆ ಜಗಳ ವಿಕೋಪಕ್ಕೆ ತಿರುಗಿದ ನಂತರ ವೃದ್ಧ ವೃದ್ಧೆಯ ಕತ್ತು ಸೀಳಿ ಕೊಂದಿದ್ದಾನೆ. ಈ ವಿಚಾರ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ವೃದ್ಧ ಹಲವು ವರ್ಷಗಳಿಂದ ಮಾನಸಿಕ ಸ್ಥಿರತೆ ಕಳೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

error: Content is protected !!