Latest

ರೇಷನ್ ಮಾರಾಟಕ್ಕಿಳಿದ ಅಂಗನವಾಡಿ ಕಾರ್ಯಕರ್ತೆಯರು!

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕ ಕಟಕಬಾವಿ ಗ್ರಾಮದಲ್ಲಿ ಬರುವ ಅಂಗನವಾಡಿಯ ಕಾರ್ಯಕರ್ತಯರು ರೇಷನ್ ಮಾರುವದಕ್ಕೆ ಕೈ ಹಾಕಿದ್ದಾರೆಂದು ತಿಳಿದು ಬಂದ ಮೇಲೆ ದಿನಾಂಕ 17/12/2022 ರಂದು ಗ್ರಾಮ ಪಂಚಾಯತ್ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ರಾಜು ಮಾಳಿಗೆ ಸದ್ಯಸರು ಲಕ್ಕಪ್ಪ ದಾವಣಿ ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಭೀಮಪ್ಪ ದೇಸಾಯಿ ಗ್ರಾಮದ ಹಿರಿಯರು ಸೇರಿ ದಾವಣಿ ತೋಟದ ಅಂಗನವಾಡಿಗಯ ನೋಂಬರ್ 6 ಕ್ಕೆ ಬೆಟ್ಟಿ ನೀಡಿದರು ಆ ಸಮಯದಲ್ಲಿ ರೇಷಣ ಬುಕ್ಕ್ ದಲ್ಲಿ ಆಹಾರವನ್ನು ವಿತರಣೆ ಮಾಡಿರುವದಾಗಿ ಬರೆದಿರುತ್ತಾರೆ.ಆಹಾರ ಮಾತ್ರ ಹಾಗೆ ಇರುತ್ತದೆ.ಪರಿಶೀಲನೆ ಸಮಯದಲ್ಲಿ ಆಹಾರ ಹೆಚ್ಚಿಗೆ ಇದ್ದದು ಕಂಡು ಬಂದಿದೆ 1) ಪುಷ್ಟಿ ಪುಡಿ140 ಕೆ ಜಿ 4 ಬ್ಯಾಗ ಹೆಚ್ಚಿಗೆ ಇದೆ,2) ಅಕ್ಕಿ 100 ಕೆ ಜಿ 4 ಬ್ಯಾಗ ಹೆಚ್ಚಿಗೆ ಇದೆ 3) ಗೋದಿ /ರವಾ 70 ಕೆ ಜಿ ಹೆಚ್ಚಿಗೆ ಇದೆಂದು ಕಂಡು ಬಂದ ಮೇಲೆ ಅಂಗನವಾಡಿ ರೇಷಣನ್ನು ಫೋಟೋ ವಿಡಿಯೋ ಮಾಡಿಕೊಂಡ ಬಂದಿರುತ್ತಾರೆ ಆ ಮೇಲೆ ರಾಯಬಾಗ ಮಹಿಳಾ ಮತ್ತು ಮಕ್ಕಳು ಇಲಾಖೆಗೆ ಒಂದು ಅರ್ಜಿ ಸಲ್ಲಿಸಿದರು ಅರ್ಜಿ ಯನ್ನು ಸ್ವೀಕರಿಸಿದ ತಾಲೂಕ ಅಧಿಕಾರಿಯು ಇಬ್ಬರು ಸಿಬಂದೀಯ ವಿಚಾರಣೆಗೆ ಕಳಿಸಿದರು ವಿಚಾರಣೆಗೆ ದಿನಾಂಕ 20/12/2022 ರಂದು ಬಂದಿದರು ಇದೆ ದಿವಸ ಗ್ರಾಮ ಸಭೆ ನಡೆಯಿತು ಆ ಸಭೆ ಅಂಗನವಾಡಿ ವಿಷಯವನ್ನು ಚರ್ಚೆ ಮಾಡಲಾಗಿತ್ತು. ಅಧ್ಯಕ್ಷರು ವಿಷಯ ಚರ್ಚೆಯನ್ನು ತಿಳಿದ ಮೇಲೆ ಅಂಗನವಾಡಿ ಕಾರ್ಯಕಾರ್ತೀಯ ಮೇಲೆ ಶಿಸ್ತು ಕ್ರಮ ಜರುಗಿಸಲು ಹೇಳಿದರು.ಸಭೆ ಮುಗೆದ ಮೇಲೆ ಗ್ರಾಮ ಪಂಚಾಯತ್ ಉಪಾಧ್ಯಕ್ಷರು ರಾಜು ಮಾಳಿಗೆ ಮತ್ತು ಸದ್ಯಸರು ಪುಂಡಲೀಕ್ ಮೇಳವಂಕಿ, ಬಾಳಪ್ಪ ಮಗದುಮ್ಮ ಸಂಜು ದೊಡಮನಿ, ಮಾಜಿ ಅಧ್ಯಕ್ಷರು ಪರಸರಾಮ್ ಪಿಡಾಯಿ ಗ್ರಾಮದ ಹಿರಿಯರಾದ ಹಣಮಂತ ಪಿಡಾಯಿ ಮತ್ತು ಸಾಹಾಯಕ ಶಿಶು ಮತ್ತು ಮಕ್ಕಳು ಯೋಜನಾಧಿಕಾರಿಗಳಾದ ಶ್ರೀಮತಿ ಏನ್ ಎಮ್ ಮುಲ್ತಾನಿ ಮತ್ತು ಅಂಗನವಾಡಿಯ ಮೇಲ್ವಿಚಾರಕರಾದ ಶ್ರೀಮತಿ ಸುಜಾತಾ ಮೇತ್ರಿ ಸೇರಿ ಸಮಯ 12 ಘಂಟೆಗೆ ಅಂಗನವಾಡಿಯ ಕೇಂದ್ರ ನಂಬರ್ 1ಕ್ಕೆ ಬಂದರು. ಅಂಗನವಾಡಿಯ ಕಾರ್ಯಕಾರ್ತೀಯಾಗಿ ಕಾರ್ಯ ನಿರ್ವಹಿಸುತ್ತಿರುವ ಮೇಡಂ ಅರುಣಾ ಹಾದಿಮನಿಯಾವನ್ನು ಎಲ್ಲಾ ಸರಿಯಾಗಿದೆಂದು ಕೇಳಿದರು? ಅವರು ಎಲ್ಲ ಸರಿ ಇದೆ ಎಂದರು ಬೇಕಾದರೆ ನೋಡಿಕೊಳ್ಳಿರಿ ನೀವು ಆ ಉಪಾಧ್ಯಕ್ಷರು ಮತ್ತು ಸದ್ಯಸರು ಪರಿಶೀಲನೆ ಮಾಡಿದರು ಗೋದಿ ಮಾತ್ರ 8 ರಿಂದ 10 ಕೆ ಜಿ ಹೆಚ್ಚಿಗೆ ಬಂದಿತ್ತು. ನಂತರ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದ್ಯಸರು, ಗ್ರಾಮದ ಹಿರಿಯರು ಮತ್ತು ಅಂಗನವಾಡಿಯ ಮೇಲಿನ ಅಧಿಕಾರಿಗಳು ಸೇರಿ ಅಂಗನವಾಡಿಯ ನಂಬರ್ 6ಕ್ಕೆ ಹೋದರು.ದಿನಾಂಕ 17/12/2022 ರಂದು ಪರಿಶೀಲನೆಯ ಮಾಡಿದ ಆಹಾರ ವ್ಯತ್ಯಾಸ ಇದ್ದನು ಮನಗಂಡರು ಅಧಿಕಾರಿಗಳು. ನಂತರ ಗ್ರಾಮ ಪಂಚಾಯತ್ ಉಪಾಧ್ಯಕ್ಷರು, ಸದ್ಯಸರು ಗ್ರಾಮದ ಹಿರಿಯರನ್ನು ಕೇಳಿದರು ಸಹಾಯಕ ಶಿಶು ಯೋಜನಾಧಿಕಾರಿಗಳಾದ ಶ್ರೀಮತಿ ಏನ್ ಎಮ್ ಮುಲ್ತಾನಿವರು ಕಾರ್ಯಕರ್ತಿಯು ತಪ್ಪು ಮಾಡಿದ್ದಾರೆ ಇದೊಂದು ಸಲ್ಲ ಭೀಡರಿ ಎಂದರು ಇದಕ್ಕೆ ಒಪ್ಪುವದಿಲ್ಲ ಎಂದರು ಗ್ರಾಮಸ್ಥರು ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು.ಸಹಾಯಕ ಶಿಶು ಯೋಜನಾಧಿಕಾರಿಗಳಾದ ಮೇಡಂ ಏನ್ ಎಮ್ ಮುಲ್ತಾನಿಯವರು ಯಾರು ತಪ್ಪ ಮಾಡಲ್ಲ ಎಲ್ಲರೂ ಅವರೇಂದರು ಆಗ ಅವರ ಮಾತಿನ ಅರ್ಥ ಮಾಡಿಕೊಂಡು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪರಸರಾಮ್ ಪಿಡಾಯಿಯವರು ನಮ್ಮನು ಕೇಳುವ ಅಧಿಕಾರ ನಿಮ್ಮಗಿಲ್ಲ ನೀವು ನೌಕರಿಗೆ ರಾಜೀನಾಮೆ ನೀಡಿ ಬಂದ ಕೇಳಿರಿ ಎಂದರು, ಮೇಡಂ ಮುಲ್ತಾನಿಯರನ್ನು ಗ್ರಾಮದರು ಕೇಳಿದರು ಅಂಗನವಾಡಿಗೆ ಹಚ್ಚಿಕೆ ಬಂದ ವಾಹನದಲ್ಲಿಯೇ ಮರಳಿ ಕಳಿಸುತ್ತಾರೆಂದು ಕೇಳಿದರು ಆಗ ಮೇಡಂ ಈ ವಿಷಯ ನನ್ನ ಗಮನಕ್ಕೆ ಬಂದಿದೆ ದ್ರಾವೆರಿಗೆ ತಾಕಿತ್ತು ಮಾಡಿದನೇ ಆದರೂ ಅವನು ಇದೆ ತರ ಮುಂದು ವರಿಸಿದ್ದಾನೆಂದರು. ಮೇಡಂ ಮುಲ್ತಾನಿ ತಪ್ಪಿಸ್ಟರಿ ಶಿಕ್ಷೆ ನೀಡುವನ್ನು ಬಿಟ್ಟ ಯಲ್ಲಾರೂ ತಪ್ಪು ಮಾಡುವುದು ಸಹಜ ಇದೊಂದು ಸಲ್ಲ ಬಿಡರಿ ಎಂದು ಕೇಳುವದನ್ನ ನೋಡಿದರೆ ಇವರು ಕೂಡಾ ಆಹಾರ ದಾನ್ಯಗಳನ್ನು ಮಾರುವದಕ್ಕೆ ಸಪೋರ್ಟ್ ಇದಾರೆಂದು ಎದ್ದು ಕಾಣುತ್ತದೆ
ಅಂಗನವಾಡಿಯ ಕಾರ್ಯಕರ್ತಿರು ಜನರಿಗೆ ಹೇಳುತ್ತಾರೆಂದು ಏನು ಗೊತ್ತೇ ನಮ್ಮ ಮೇಲಿನ ಅಧಿಕಾರಿಗಳಿಗೆ ಪ್ರತಿ ಅಂಗನವಾಡಿ ಯಿಂದ ರೂ 500 ಕೊಡುತ್ತೀವೆ ಎಂದು ಹೇಳುತ್ತಾರೆ
ಇವರ ಹೇಳಿಕ್ಕೆ ಪ್ರಕಾರ ರಾಯಬಾಗ ತಾಲ್ಲೂಕಿನಲ್ಲಿ 480 ಅಂಗನವಾಡಿಗಳಿವೆ ಪ್ರತಿಯಿಂದ ರೂ 500*480=240000 ಪ್ರತಿ ತಿಂಗಳ ಆದಾಯವಾಗಿದೆ

ಇದೆಲ್ಲ ಆದಮೇಲೆ ಅದೇದಿನ ರಾತ್ರಿ 10.30 ರಿಂದ 11ಘಂಟೆಯ ಸುಮಾರಿಗೆ ಮತ್ತೊಂದು ಅಂಗನವಾಡಿಯ ನಂಬರ 1 ರ ಶಿಕ್ಷಕಿಯೂ ರೇಷಣ ಮಾರುವದಕ್ಕೆ ಅಥವಾ ಮನೆಗೆ ವಯಿಯಲು ಬೇರೊಬರ್ ಮಹಾದೇವ ನಾವಿಯವರ ಮನೆಯಲ್ಲಿ ಬಚಿಟ್ಟಿದ ರೇಷನವನ್ನು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರೇಣುಕಾ ಪಿಡಾಯಿ ಇವರ ಪತಿ ಯಾದ ಪರಸರಾಮ್ ಪಿಡಾಯಿ ಉಪಾಧ್ಯಕ್ಷರು ರಾಜು ಮಾಳಿಗೆ ಸಂಜು ಹಳ್ಳದಮಣಿ,ಗ್ರಾಮ ಪಂಚಾಯತ್ ಸಿಬ್ಬಂದಿಯಾದ ಭೀಮಪ್ಪ ದೇಸಾಯಿ, ಅಂಗನವಾಡಿ ಸಹಾಯಕಿಯಾದ ಕಸ್ತೂರಿ ಪೂಜೇರಿ ಮತ್ತು ಭ್ರಷ್ಟರ ಬೇಟೆ ತಾಲ್ಲೂಕಿನ ವರಿದಿಗಾರಾದ ರಮೇಶ ದೊಡಮನಿ ಭೇಟಿ ನೀಡದ ಸಮಯದಲ್ಲಿ ರೇಷಣ ಪತ್ತೆ ಮಾಡಿದರು ಅಲ್ಲಿ ಇದ್ದ ಹಾಲಿನ ಪೌಡರ್ 1/2 ಕೆ ಜಿ 47 ಪ್ಯಾಕೆಟ್ 23 1/2 ಕೆ ಜಿ ಮತ್ತು ಅಕ್ಕಿ 25 ಕೆ ಜಿ 10,15,ಬ್ಯಾಗ್ ಒಟ್ಟು 50 ಕೆ ಜಿ ಅಕ್ಕಿ ಇದವು ಇದನ್ನೆಲ್ಲ ಫೋಟೋ ಮತ್ತು ವಿಡಿಯೋ ಮಾಡಿದ ನಂತರ ಅಂಗನವಾಡಿ ಶಿಕ್ಷೆಕಿಯಾದ ಮೇಡಂ ಅರುಣಾ ಹಾದಿಮನಿ ಅವರಿಗೆ ಫೋನ ಮಾಡಿ ಕೇಳಿದ ಸಮಯದಲ್ಲಿ ಅವರು ಸ್ಟಾಕ್ ಬುಕ್ ದಲ್ಲಿ ನಿಲ್ಲ ಮಾಡೀನಿ ಆದಕಾಗಿ ಅದನ್ನು ತಗೆದಿದೆ ಎಂದು ಹೇಳಿದರು
ಇದೆಲ್ಲ ಮೇಲೆ ಎ ಸಿ ಡಿ ಪೋ ಮೇಡಂ ಏನ್ ಎಮ್ ಮುಲ್ತಾನಿ ಅವರಿಗೆ ಸಿ ಡಿ ಫೋಟೋ ಅಧಿಕಾರಿಗಳಿಗೆ ಫೋಟೋ ಮತ್ತು ವಿಡಿಯೋ ವಾಟ್ಸಾಪ್ ಗೆ ಕಳಿಸಿದವು ಮುಂಜಾನೆ 8ಘಂಟೆ ಫೋನ್ ಮಾಡಿ ಹೇಳಿದೆವು ಅಧಿಕಾರಿಯು ಚಳಿಗಾಲ ಅಧಿವೇಶನ ಮುಗಿಸಿ ಬಂದಮೇಲೆ ಅವರನ್ನು ಅಮಾನತ ಮಾಡುವಾದಾಗಿ ಭರವಸೆ ನೀಡಿರುತ್ತಾರೆ.  ಇದಾದ ಬಳಿಕ ದಿನಾಂಕ 30 ರಂದು ಕರ್ತವ್ಯ ಲೋಪದಡಿ ಆಕೆಯ ಗೌರವಸೇವೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿರುತ್ತಾರೆ.

ವರದಿ: ರಮೇಶ ದೊಡಮನಿ

kiran

Recent Posts

ಬೈಕ್ ಟಿಪ್ಪರ್ ನಡುವೆ ಡಿಕ್ಕಿ ಬೈಕ್ ಸವಾರ ಸಾವು

ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…

1 month ago

ಅಪರಿಚಿತ ಕಾರು ಡಿಕ್ಕಿ; ಐವರಿಗೆ ಗಂಭೀರ ಗಾಯ, ಓರ್ವ ಮಹಿಳೆ ಸ್ಥಳದಲ್ಲೇ ಸಾವು.

ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…

1 month ago

ರಸ್ತೆ ಅಪಘಾತ; ಗೊಲಗೇರಿ ಗ್ರಾಮದ ಯುವಕ ಸಾವು.

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…

1 month ago

ಕುಡಿಯುವ ನೀರಿನ ಬಿಲ್ ಪಾವತಿ ಮಾಡಬೇಡಿ -ಮಾಜಿ ಶಾಸಕ ಹರ್ಷವರ್ಧನ್

ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…

1 month ago

ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…

1 month ago

ಮಟ-ಮಟ ಮಧ್ಯಾಹ್ನ‌ ಮಹಿಳೆಯ ಮಾಂಗಲ್ಯ ಸರ ಕಸಿದು ಪರಾರಿ ‌

ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…

2 months ago