ವಿಜಯನಗರ ಜಿಲ್ಲೆ ಹರಪನಹಳ್ಳಿ ತಾಲೂಕಿನ ರಾಗಿ ಮಾಸಲವಾಡ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವದ ಅಂಗವಾಗಿ ಶುಕ್ರವಾರ ಅದ್ಧೂರಿಯಾಗಿ ರಥೋತ್ಸವ ನಡೆಯಿತು.
ಮಂದಿರದಿಂದ ದೇವರ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥದ ಸುತ್ತಲೂ ಪ್ರದಕ್ಷಿಣೆ ಹಾಕಿ ಸಂಭ್ರಮ ಸಡಗರದಿಂದ ರಥವನ್ನು ಎಳೆಯಲಾಯಿತು.ಭಕ್ತರು ಜೈಘೋಷ ಮೊಳಗಿಸಿ ಭಕ್ತಿ ಸಮರ್ಪಿಸಿದರು.
ಯುವ ಸಮೂಹವು ರಥೋತ್ಸವಯುದ್ದಕ್ಕೂ ಪಟಾಕಿ ಸಿಡಿಸಿ,ಬಾಜ ಭಜಂತ್ರಿಯ ಜೊತೆಗೆ ಡೊಳ್ಳು ಕುಣಿತದ ಮೂಲಕ ಸಂಭ್ರಮಿಸಿದರು.ಮಹಿಳೆಯರು ಆರತಿ ಬೆಳಗುವ ಮೂಲಕ ಭಕ್ತಿ ಸಮರ್ಪಿಸಿದರು.
ರಥವನ್ನು ಪುಷ್ಪ ಮಾಲೆಗಳಿಂದ ಅಲಂಕರಿಸಲಾಗಿತ್ತು.ಜಾತ್ರೆಯ ಅಂಗವಾಗಿ ಮಂದಿರ ಮತ್ತು ಗುಡಿಯ ಸುತ್ತಮುತ್ತ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.

ರಥೋತ್ಸವದಲ್ಲಿ ರಾಗಿ ಮಾಸಲವಾಡ ಗ್ರಾಮದ ಸುತ್ತ ಮುತ್ತಲಿನ ಗ್ರಾಮದ ಭಕ್ತರು ಹಾಗೂ ದಾವಣಗೆರೆ ವಿಜಯನಗರ ಜಿಲ್ಲೆಯಿಂದ ಆಗಮಿಸಿದ್ದ ನೂರಾರು ಭಕ್ತರು ರಥೋತ್ಸವಕ್ಕೆ ಬಾಳೆಹಣ್ಣು,ತೆಂಗಿನಕಾಯಿ ಸಮರ್ಪಿಸಿ ಸ್ವಾಮಿಯ ದರ್ಶನ ಮಾಡಿಕೊಂಡರು.ರಥ ಬೀದಿಯಲ್ಲಿ ವಿವಿಧ ವಾದ್ಯ ಮೇಳದೊಂದಿಗೆ ಸಾಗಿದ ರಥೋತ್ಸವ ಪುನಃ ಅದೇ ಮಾರ್ಗವಾಗಿ ಹಿಂದಿರುಗಿ ಸಂಪನ್ನಗೊಂಡಿತು.

ವರದಿ:- ಮಣಿಕಂಠ. ಬಿ

error: Content is protected !!