ಆರ್ಥಿಕ ಸಂಕಷ್ಟದ ಬೇಹುಗಾರಿಕೆಯಲ್ಲಿ ಖಾಸಗೀಕರಣದ ಅಂಚಿನಲ್ಲಿ ನಿಂತಿದ್ದ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಗೆ ಕೇಂದ್ರ ಸರ್ಕಾರದ 11,440 ಕೋಟಿ ರೂ. ಪ್ಯಾಕೇಜ್ ಘೋಷಣೆ ನಡೆಯಿತು. ಈ ಪ್ಯಾಕೇಜ್ ಮೂಲಕ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಪ್ರಮುಖ ಪಾತ್ರ ವಹಿಸಿದ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿಗೆ ಆಂಧ್ರಪ್ರದೇಶದ ಜನ ಹಾಲಿನ ಅಭಿಷೇಕದ ಮೂಲಕ ತಮ್ಮ ಧನ್ಯತೆಯನ್ನು ತೋರಿಸಿದರು.
ಸಮೀಪದ ದಿನಗಳಲ್ಲಿ ಉಕ್ಕು ಕಾರ್ಖಾನೆಯ ಸಂಪೂರ್ಣ ಕಾರ್ಯ ಚೇತನಗೊಳಿಸಲು ಅಗತ್ಯವೆನ್ನಲಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತೇವೆ ಎಂದು ಸಚಿವರು ಭರವಸೆ ನೀಡಿದ್ದರು. ಕೇಂದ್ರದ ಈ ಪ್ಯಾಕೇಜ್ ಮೂಲಕ ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿದ್ದ ಕಾರ್ಖಾನೆಗೆ ಹೊಸ ಜೀವ ನೀಡಲಾಗಿದೆ.
ಸಚಿವ ಹೆಚ್.ಡಿ. ಕುಮಾರಸ್ವಾಮಿಯ ಈ ಮಹತ್ವದ ಕ್ರಮಕ್ಕೆ ಆಂಧ್ರಪ್ರದೇಶದ ಜನತೆ ಸಂತಸ ವ್ಯಕ್ತಪಡಿಸಿದ್ದು, ಅವರ ಕೊಡುಗೆಯನ್ನು ಪ್ರಶಂಸಿಸುವ ಉದ್ದೇಶದಿಂದ ಅವರ ಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.
ವೈಜಾಗ್ ಉಕ್ಕಿನ ಕಾರ್ಖಾನೆ ಉಳಿಸಿಕೊಟ್ಟ ಕುಮಾರಣ್ಣನಿಗೆ ಹಾಲಿನ ಅಭಿಷೇಕ ಮಾಡಿದ ಆಂಧ್ರದ ಜನತೆ.#HDKumaraswamy #andrapradesh #karnataka #jds #ministryofheavyindustry #vizag #VizagSteelPlant #vishakapatnam #govtofindia pic.twitter.com/IK3w4sPrVO
— Kumaraswamy for CM (@Kumaraswamy4cm) January 19, 2025