ಕಲಬುರಗಿ-ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಗಲೀಕರಣ ಮಾಡುವ ಸಂದರ್ಭದಲ್ಲಿ ಹೀರಾಪುರ ಕ್ರಾಸ್ ಹತ್ತಿರ 250 ಎಂ.ಎಂ ಹೆಚ್.ಡಿ.ಪಿ.ಇ ಕೊಳವೆ ಮಾರ್ಗದಲ್ಲಿ ಸೋರಿಕೆ ಕಂಡು ಬಂದ ಪ್ರಯುಕ್ತ ಹೊಸ ಘಾಟಗೆ ಲೇಔಟ್, ಕಾಂತಾ ಕಾಲೋನಿ, ಶಕ್ತಿ ನಗರ ಮತ್ತು ಹಳೇ ಘಾಟಗೆ ಲೇಔಟ್ ಬಡಾವಣೆಗಳ ಸಾರ್ವಜನಿಕರು ನೀರನ್ನು ಕಾಯಿಸಿ, ಆರಿಸಿ ಮತ್ತು ಸೊಸಿ ಕುಡಿಯಬೇಕು.

ಇದರ ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ. ಆದ್ದರಿಂದ ಮೇಲ್ಕಂಡ ಬಡಾವಣೆಗಳ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮವಾಗಿ ಕುಡಿಯುವ ನೀರನ್ನು ಕಾಯಿಸಿ ಆರಿಸಿ ಸೊಸಿ ಕುಡಿಯಬೇಕೆಂದು..

ನಗರದ ಸಾರ್ವಜನಿಕರು ಕೆಯುಡಬ್ಲ್ಯೂಎಸ್‍ಎಂಪಿ-ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್&ಟಿ ಲಿಮಿಟೆಡ್‍ದೊಂದಿಗೆ ಸಹಕರಿಸಬೇಕೆಂದು ಕಲಬುರಗಿ ಕೆಯುಡಬ್ಲ್ಯೂಎಸ್‍ಎಂಪಿ, ಕೆಯುಐಡಿಎಫ್‍ಸಿ, ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ವರದಿ ನಾಗರಾಜ್ ಗೊಬ್ಬುರ್

1 thought on “ಸಾರ್ವಜನಿಕರು ಕುಡಿಯುವ ನೀರನ್ನು ಕಾಯಿಸಿ ಕುಡಿಯಲು ಮನವಿ.

Comments are closed.

error: Content is protected !!