ಉತ್ತರ ಪ್ರದೇಶ ಪೊಲೀಸ್ ನೇಮಕಾತಿಯ ಹಾಲ್ ಟಿಕೆಟ್ನಲ್ಲಿ ಸನ್ನಿ ಲಿಯೋನ್ ಫೋಟೊ ಕಾಣಿಸಿಕೊಂಡಿದ್ದು, ಹಾಲ್ ಟಿಕೆಟ್ ಇದೀಗ ವೈರಲ್ ಆಗಿದೆ.
ಸನ್ನಿ ಲಿಯೋನ್ ಅಭಿಮಾನಿಯೊಬ್ಬ ಅವರ ಹೆಸರಿನಲ್ಲಿಯೇ ಉತ್ತರ ಪ್ರದೇಶ ಪೊಲೀಸ್ ನೇಮಕಾತಿ ಪರೀಕ್ಷೆಗೆ ಅರ್ಜಿ ಹಾಕಿದ್ದಾನೆ. ಈಗ ರಾಜ್ಯ ಸರ್ಕಾರವು ಸನ್ನಿ ಲಿಯೋನ್ ಹೆಸರಿನಲ್ಲಿ ಹಾಲ್ ಟಿಕೆಟ್ ಬಿಡುಗಡೆ ಮಾಡಿದ್ದು, ಅವವರಿಗೆ ಕನೌಜ್ ಜಿಲ್ಲೆಯ ತಿರ್ವಾದಲ್ಲಿರುವ ಶ್ರೀಮತಿ ಸೋನೆಶ್ರೀ ಮೆಮೋರಿಯಲ್ ಗರ್ಲ್ಸ್ ಕಾಲೇಜ್ಅನ್ನು ಪರೀಕ್ಷಾ ಕೇಂದ್ರವನ್ನಾಗಿ ನೀಡಲಾಗಿದೆ.
ಹಾಲ್ ಟಿಕೆಟ್ ನಲ್ಲಿ ನೋಂದಣಿಯಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ, ಉತ್ತರ ಪ್ರದೇಶದ ಮಹೋಬಾ ಎಂಬಲ್ಲಿ ಮೊಬೈಲ್ ಸಂಖ್ಯೆ ನೋಂದಣಿಯಾಗಿದೆ. ಇನ್ನು, ನೋಂದಣಿಗೆ ಮುಂಬೈ ವಿಳಾಸ ನೀಡಲಾಗಿದೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ, ಸನ್ನಿ ಲಿಯೋನ್ ಹೆಸರಿನಲ್ಲಿ ಅರ್ಜಿ ಹಾಕಿದವರು ಫೆಬ್ರವರಿ 17ರಂದು ಪರೀಕ್ಷೆ ಬರೆಯಬೇಕಿತ್ತು. ಆದರೆ, ಯಾರೂ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಕಾಲೇಜಿನ ಆಡಳಿತ ಮಂಡಳಿಯು ಮಾಹಿತಿ ನೀಡಿದೆ.
ಸರ್ಕಾರಿ ಹುದ್ದೆಗಳಿಗೆ ಈ ರೀತಿಯ ಫೇಕ್ ಅರ್ಜಿಗಳನ್ನು ಹಾಕಿ ಆಟವಾಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಕೆಲವರು ಆಗ್ರಹಿಸಿದ್ದಾರೆ.