ಹೊಸಪೇಟೆ:- ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಹೊಸಪೇಟೆ ಪೊಲೀಸ್ ಠಾಣೆ ಸಿಬ್ಬಂದಿಯವರು ಬಂಧಿಸಿದ್ದಾರೆ ಹಾಗೂ ಕಳ್ಳತನವಾದ ಬೈಕುಗಳನ್ನು ವಶಪಡಿಸಿಕೊಂಡಿದ್ದಾರೆ.
01/09/2023 ರ ರಾತ್ರಿ 9:30 ರ ಸಮಯದಲ್ಲಿ ಹೊಸಪೇಟೆಯ ಮೆಹಬೂಬ್ ನಗರದ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್ ನಂ ಕೆಎ -35 ಇಬಿ -2324 (80,000 ರೂ) ಬೆಲೆ ಬಾಳುವ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದಿನಾಂಕ 16-09-2023 ರ ರಾತ್ರಿ 10:00 ಗಂಟೆಗೆ ಬೈಕ್ ಮಾಲೀಕ ನೀಡಿದ್ದ ದೂರಿನ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 17/09/2023 ರಂದು ಬೆಳಗಿನ ಜಾವ ಮೇಲ್ಕಂಡ ಪ್ರಕರಣದ ಪತ್ತೆ ಕಾರ್ಯದಲ್ಲಿ ತೊಡಗಿದ್ದ ಅಪರಾಧ ವಿಭಾಗದ ಎ ಎಸ್ ಐ ಶ್ರೀ ಬಿ ಎಂ ಸುರೇಶ್ ಹಾಗೂ ಸಿಬ್ಬಂದಿಯವರು ಠಾಣಾ ಸರಹದ್ದಿನಲ್ಲಿರುವ ಬಳ್ಳಾರಿ ರೋಡ್ ಸರ್ಕಲ್ ನಲ್ಲಿ ವಾಹನ ತಪಾಸಣೆ ಮತ್ತು ನಿಗಾವಣೆಯಲ್ಲಿದ್ದಾಗ ಎರಡು ಮೋಟಾರ್ ಸೈಕಲ್ ಗಳಲ್ಲಿ ಬಂದ ನಾಲ್ಕು ಜನ ಹುಡುಗರ ಮೇಲೆ ಅನುಮಾನ ಬಂದು ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ತಾವು ತಂದಿರುವ ಮೋಟಾರ್ ಸೈಕಲ್ ಗಳು ಕಳ್ಳತನ ಮಾಡಿದ್ದವು ಎಂದು ತಿಳಿಸಿದರು.
ನಂತರ ಅವರನ್ನು ಠಾಣೆಗೆ ಕರೆದುಕೊಂಡು ಬಂದು ಕೂಲಂಕುಷವಾಗಿ ವಿಚಾರಣೆ ಮಾಡಲು ತಮ್ಮ ತಪ್ಪನ್ನು ಒಪ್ಪಿಕೊಂಡು ನಾವುಗಳು ಈಗೆ ಸುಮಾರು ಆರು ತಿಂಗಳು ಹಿಂದಿನಿಂದ ಹೊಸಪೇಟೆಯ ವಿವಿಧ ಸ್ಥಳಗಳಲ್ಲಿ ಹಾಗೂ ಇತರೆ ಬೇರೆ ಊರುಗಳಲ್ಲಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಗಳನ್ನು ಕಳ್ಳತನ ಮಾಡಿಕೊಂಡು ಬಂದು ಅವುಗಳ ನಂಬರ್ ಪ್ಲೇಟ್ ಕಿತ್ತುಹಾಕಿ ಬಣ್ಣಗಳನ್ನ ಬದಲಾಯಿಸಿ ವೀಲಿಂಗ್ ಮಾಡಲು ಉಪಯೋಗಿಸಿ ನಂತರ ಬೇರೆಯವರಿಗೆ ಮಾರಾಟ ಮಾಡಲು ಪ್ರಯತ್ನಿಸಿದ್ದೇವೆ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದರು ಅವರುಗಳಿಂದ ವಿವಿಧ ಕಂಪನಿಯ ಒಟ್ಟು 14 ಮೋಟಾರ್ ಸೈಕಲ್ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ತನಿಖೆಯ ನಂತರ ಆರೋಪಿತರನ್ನು ಮಾನ್ಯ ನ್ಯಾಯಾಲಯದ ಆದೇಶ ಪಡೆದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಪುನಃ ಆರೋಪಿತರನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೆ ವಿವಿಧ ಕಂಪನಿಯ 15 ಮೋಟಾರ್ ಸೈಕಲ್ ಗಳು ಕಳ್ಳತನ ಮಾಡಿರುವುದು ಬೆಳಕಿಗೆ ತಂದರು ಒಟ್ಟಾರೆಯಾಗಿ 29 ಮೋಟಾರ್ ಸೈಕಲ್ ಗಳು ಬೆಲೆ 22.95 ಲಕ್ಷ ರೂಪಾಯಿ ಬೆಲೆ ಬಾಳುವ ಮೋಟಾರ್ ಸೈಕಲ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಕಳ್ಳತನದಲ್ಲಿ ಪಾಲ್ಗೊಂಡಿದ್ದ ಆರೋಪಿಗಳಾದ ಸೋಹೆಲ್ 19ವರ್ಷ ಹೊಸಪೇಟೆ ನಿವಾಸಿ,ಹೊನ್ನೂರು ಸ್ವಾಮಿ 22ವರ್ಷ ಹೊಸಪೇಟೆ ನಿವಾಸಿ,ತಯಾಬ್ 19ವರ್ಷ ಹೊಸಪೇಟೆ ನಿವಾಸಿ,ಸಾಧಿಕ್ 19 ವರ್ಷ ಹೊಸಪೇಟೆ ನಿವಾಸಿ.
ಹೊಸಪೇಟೆ ಉಪ ವಿಭಾಗ ಡಿಎಸ್ಪಿ ಯವರಾದ ಶ್ರೀ ಟಿ.ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ಪಟ್ಟಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಎಸ್ ಎಂ ಬಾಳನಗೌಡ ನೇತೃತ್ವದಲ್ಲಿ ಪಿಎಸ್ಐ ಗಳಾದ ಶ್ರೀ ಎಂ.ಮುನಿರತ್ನ,ಶ್ರೀ ಕೆ.ರಾಜಶೇಖರ್,ಹಾಗೂ ಎ ಎಸ್ ಐ ಶ್ರೀ ಬಿ.ಎಂ.ಸುರೇಶ್ ನೇತೃತ್ವದ ಪೊಲೀಸ್ ತಂಡವು ನಾಲ್ವರು ಮೋಟಾರ್ ಸೈಕಲ್ ಕಳ್ಳರನ್ನು ಬಂಧಿಸಿ 29 ಬೈಕುಗಳು ಸೇರಿ ಒಟ್ಟು 22.92ಲಕ್ಷ ರೂಪಾಯಿ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡ ಬಗ್ಗೆ ಹೊಸಪೇಟೆ ಠಾಣೆಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಜರುಗಿಸಿದರು.
ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಯವರಾದ ಕೆ.ಶ್ರೀ ರಾಮರೆಡ್ಡಿ, ಬಿ.ರಾಘವೇಂದ್ರ,ಲಿಂಗರಾಜ್,ಪರಶುನಾಯ್ಕಾ, ಜೆ.ಕೊಟ್ರೇಶ್, ಜೆ.ಫಕ್ಕೀರಪ್ಪ,ದೇವೇಂದ್ರಪ್ಪ,ಮಲಕಾಜಪ್ಪ,ಮಂಜುನಾಥ್,ಶಿವಪ್ಪ,ಮತ್ತು ಶ್ರೀ ದುರ್ಗಿಭಾಯಿ ರವರು ಪಾಲ್ಗೊಂಡಿದ್ದರು ಇವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು,ವಿಜಯನಗರ ಜಿಲ್ಲೆಯವರಾದ ಮಾನ್ಯ ಶ್ರೀ ಬಿ.ಎಲ್.ಶ್ರೀ ಹರಿಬಾಬು, ಐಪಿಎಸ್ ಶ್ಲಾಘಿಸಿರುತ್ತಾರೆ.
ವರದಿ:ಮಣಿಕಂಠ.ಬಿ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…