ಕಲಬುರಗಿ : ನಗರ ಪೊಲೀಸ ಆಯುಕ್ತಾಲಯದ ವ್ಯಾಪ್ತಿಯ ಚೌಕ ಪೊಲೀಸ ಠಾಣೆಯ ಪೊಲೀಸರಿಂದ ಮಿಂಚಿನ ದಾಳಿ. ಕಲಬುರಗಿ ನಗರದ ಶಹಾಬಜಾರ ನಾಕಾದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ 07 ಜನರ ಬಂಧನ, ಬಂಧಿತರಿಂದ 52 ಇಸ್ಪೇಟ ಎಲೆ, ಹಾಗೂ ನಗದು ₹1,00,300/- ರೂಪಾಯಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಕ್ಕಾಗಿ ಮಾನ್ಯ ಪೊಲೀಸ ಆಯುಕ್ತರಾದ ಡಾ॥ ವೈ.ಎಸ್.ರವಿಕುಮಾರ,ಭಾ.ಪೊ.ಸೇ. ರವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.