ಆಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದ ಆರೋಪಿ ಸಂತೋಷ ಹಾಗೂ ಸಿದ್ದೇಶ್ ಎಂಬುವವರನ್ನು ಪಿಎಸ್ಐ ಗೀತಾಂಜಲಿ ಶಿಂಧೆ ರವರು ಬಂಧಿಸಿ ಇವರ ವಿರುದ್ಧ ಶನಿವಾರ ಪ್ರಕರಣ ದಾಖಲಿಸಿದ್ದಾರೆ
ಕೊಟ್ಟೂರು ತಾಲೂಕಿನ ಕುರುಬನಹಳ್ಳಿ ಗ್ರಾಮದ ಹಳ್ಳದಲ್ಲಿ ಆರೋಪಿಗಳಾದ ಸಂತೋಷ ಮತ್ತು ಸಿದ್ದೇಶ್ ರವರು ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಆಕ್ರಮವಾಗಿ ಮರಳು ಸಾಗಾಣಿಕೆ ನಡೆಸುತ್ತಿದ್ದರು ಇದರ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ಗೀತಾಂಜಲಿ ಶಿಂಧೆ ರವರು ಪೊಲೀಸ್ ಸಿಬ್ಬಂದಿ ಜೊತೆಗೆ ಸ್ಥಳಕ್ಕೆ ಧಾವಿಸಿ ಆರೋಪಿಗಳನ್ನು ಬಂಧಿಸಿ ಕೆಂಪು ಬಣ್ಣದ ಮಹೇಂದ್ರ ಕಂಪನಿ ಟ್ರಾಕ್ಟರ್ ಹಾಗೂ ಇಂಜಿನ್ ನಂಬರ್ ಕೆ.ಎ -35ಟಿಬಿ 9385 ಸಂಖ್ಯೆವುಳ್ಳ ಟ್ರ್ಯಾಲಿ ಯನ್ನು ಜಪ್ತಿಮಾಡಿ ಇವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ- ಮಣಿಕಂಠ. ಬಿ