ಕುಮಟಾ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಆತನಿಂದ ಒಂದುವರೆ ಕೆಜಿ ಗಾಂಜಾ ಹಾಗೂ ಸ್ಕೂಟಿ ವಶಕ್ಕೆ ಪಡೆದ ಘಟನೆ ಕುಮಟಾದ ರೈಲ್ವೆ ನಿಲ್ದಾಣದ ರಸ್ತೆಯಲ್ಲಿ ನಡೆದಿದೆ.
ಒರಿಸ್ಸಾ ಮೂಲದ ರಾಕೇಶ್ ಕುಮಾರ ದಾಸ ಬಂಧಿತ ಆರೋಪಿಯಾಗಿದ್ದಾನೆ.ಬಂದಿತ ಆರೋಪಿಯಿಂದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 1ಕೆಜಿ 500 ಗ್ರಾಂ ಗಾಂಜಾ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದ ಬಗ್ಗೆ ಪತ್ತೆಗಾಗಿ ಉತ್ತರ ಕನ್ನಡ ಜಿಲ್ಲೆಯ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಸುಮನ್ ಪನ್ನೇಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶ್ರೀ ಬದರಿನಾಥ್ ಹಾಗೂ ಹಾಗೂ ಭಟ್ಕಳ ಉಪವಿಭಾಗದ ಡಿ,ವೈ,ಎಸ್ ,ಪಿ ಬೆಳ್ಳಿಯಪ್ಪ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ತಿಮ್ಮಪ್ಪ ನಾಯಕ್ ಸಿಪಿಐ ಕುಮಟಾ, ಹಾಗೂ ನವೀನ್ ನಾಯಕ್ ಪಿಎಸ್ಐ ಕುಮಟಾ ಅವರನ್ನು ಒಳಗೊಂಡ ತಂಡ ದಾಳಿ ಮಾಡಿ ಆರೋಪಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ರವಿ ಗುಡ್ಡಿ ಪಿಎಸ್ಐ, ಪದ್ಮಾ ದೇವಳಿ ಪಿಎಸ್ಐ, ಚಂದ್ರಮತಿ ಪಟಗಾರ ಪಿಎಸ್ಐ, ಸಿಬ್ಬಂದಿಗಳಾದ ಗಣೇಶ್ ನಾಯ್ಕ,ದಯಾನಂದ್ ನಾಯ್ಕ,ರಾಜು ನಾಯ್ಕ,ಆಸೀಫ್ ಆರ್ ಕೆ, ಗುರು ನಾಯಕ್, ಶಿವಾನಂದ ಜಾಡರ್, ಮಂಜುನಾಥ,ಪ್ರದೀಪ್ ನಾಯಕ್,ಧನಂಜಯ್ ಪಟಗಾರ,ಸಂಜೀವ ನಾಯ್ಕ್ ಭಾಗವಹಿಸಿದ್ದರು .
ವರದಿ :ಮಂಜುನಾಥ ಹರಿಜನ