ಕಲಬುರಗಿ: ನಗರದಲ್ಲಿ ಸಬ್ ಅರ್ಬನ್ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ 27/07/2022 ಕೇರಿಭೋಸಗಾದ ಹತ್ತಿರ ನಾಗರಾಜು ಎಂಬುವವನನ್ನು ಕಲ್ಲು ಎತ್ತಿ ಹಾಕಿ ಬರ್ಬರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನ್ಯ ಪೊಲೀಸ ಆಯುಕ್ತರಾದ ಶ್ರೀ ಡಾ.ವೈ.ಎಸ್.ರವಿಕುಮಾರವರ ಮಾರ್ಗದರ್ಶನದಲ್ಲಿ ಹಾಗೂ ಗ್ರಾಮೀಣ ಪೊಲೀಸ ಠಾಣೆಯ ಇನ್ಸಪೇಕ್ಟರಾದ ರಮೇಶ ಕಾಂಬಳೆ ನೇತೃತ್ವದ ತಂಡವನ್ನು ರಚಿಸಿ ಈ ಪ್ರಕರಣವನ್ನು ಭೇದಿಸಿ 4 ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಸಬ್ ಅರ್ಬನ್ ಪೊಲೀಸ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಪೊಲೀಸ ಆಯುಕ್ತರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.