ಬೆಳಗಾವಿಯಲ್ಲಿ ಕನ್ನಡ ಭಾಷೆ ಬಳಸುವಂತೆ ಹೇಳಿದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಬಳಿಕ ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ ಪ್ರಕರಣ ಹೊಸ ತಿರುವು ಪಡೆದಿದೆ. ಈ ಸಂಬಂಧ ಮಾರಿಹಾಳ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಿಪಿಐಗೆ ವರ್ಗಾವಣೆ ಆದೇಶ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರ ಆದೇಶದಂತೆ, ಸಿಪಿಐ ಕಲ್ಯಾಣಶೆಟ್ಟರ್ ಅವರನ್ನು ಮಾರಿಹಾಳ ಠಾಣೆಯಿಂದ ಸಿಸಿಆರ್‌ಬಿಗೆ  ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಜುನಾಥ ನಾಯಕ ಅವರನ್ನು ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ನೇಮಕ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕ ಮಹದೇವ್ ಅವರು, ಫ್ರೀ ಬಸ್‌ ಸೇವೆಯನ್ನು ಬಳಸಲು ಯುವತಿಯೊಬ್ಬಳಿಗೆ ಆಧಾರ್ ಕಾರ್ಡ್ ಕೇಳಿದರು. ಈ ಸಂದರ್ಭ ಬಾಲಕಿ ಮರಾಠಿಯಲ್ಲಿ ಮಾತನಾಡಿದಾಗ, ಮಹದೇವ್ ಕನ್ನಡದಲ್ಲಿ ಮಾತನಾಡುವಂತೆ ಹೇಳಿದರು. ಇದರಿಂದ ಸಿಟ್ಟಿಗೆದ್ದ ಯುವತಿ ಮತ್ತು ಬೆಂಬಲಿಗರು ನಿರ್ವಾಹಕನೊಂದಿಗೆ ವಾಗ್ವಾದಕ್ಕೆ ಇಳಿದರು.

ವಿವಾದದ ನಂತರ, ಮರಾಠಿ ಗುಂಪು ಮಹದೇವ್ ಮೇಲೆ ಹಲ್ಲೆ ನಡೆಸಿತು. ಅಲ್ಲದೆ, ತಿರುಚಿದ ಆರೋಪಗಳ ಮೂಲಕ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅವರ ವಿರುದ್ಧ ಕೇಸ್ ದಾಖಲಿಸಲಾಯಿತು.

ಸತ್ಯ ಹೊರಬಂದ ನಂತರ ಕ್ರಮ

ಈ ಪ್ರಕರಣದಲ್ಲಿ ಯಾವುದೇ ಪ್ರಾಮಾಣಿಕ ಆಧಾರವಿಲ್ಲದೇ ಪೋಕ್ಸೋ ಕೇಸ್ ದಾಖಲಿಸಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ವಿರುದ್ಧ ವಿಸ್ತೃತ ತನಿಖೆ ನಡೆಯಿತು. ತನಿಖೆಯ ಪಶ್ಚಾತ್ತ, ಅವರ ಕಾನೂನುಬಾಹಿರ ಕ್ರಮಗಳು ಬೆಳಕಿಗೆ ಬಂದ ಕಾರಣ, ಅವರನ್ನು ಮಾರಿಹಾಳ ಠಾಣೆಯಿಂದ ತೆರವುಗೊಳಿಸಿ, ಹೊಸ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಘಟನೆಯು ಬೆಳಗಾವಿಯಲ್ಲಿ ಕನ್ನಡಿಗರ ಹಕ್ಕುಗಳನ್ನು ಉಳಿಸುವ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

Related News

error: Content is protected !!