Categories: Latest

ಕನ್ನಡ ಮಾತಾಡಲು ಹೇಳಿದ ಕಂಡಕ್ಟರ್ ಮೇಲೆ ಹಲ್ಲೆ – ತಪ್ಪು ಕೇಸ್ ದಾಖಲಿಸಿದ ಸಿ.ಪಿ.ಐ ವರ್ಗಾವಣೆ

ಬೆಳಗಾವಿಯಲ್ಲಿ ಕನ್ನಡ ಭಾಷೆ ಬಳಸುವಂತೆ ಹೇಳಿದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ಬಸ್‌ ನಿರ್ವಾಹಕನ ಮೇಲೆ ಹಲ್ಲೆ ನಡೆಸಿ, ಬಳಿಕ ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ ಪ್ರಕರಣ ಹೊಸ ತಿರುವು ಪಡೆದಿದೆ. ಈ ಸಂಬಂಧ ಮಾರಿಹಾಳ ಠಾಣೆಯ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಸಿಪಿಐಗೆ ವರ್ಗಾವಣೆ ಆದೇಶ

ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಅವರ ಆದೇಶದಂತೆ, ಸಿಪಿಐ ಕಲ್ಯಾಣಶೆಟ್ಟರ್ ಅವರನ್ನು ಮಾರಿಹಾಳ ಠಾಣೆಯಿಂದ ಸಿಸಿಆರ್‌ಬಿಗೆ  ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಜುನಾಥ ನಾಯಕ ಅವರನ್ನು ಮಾರಿಹಾಳ ಠಾಣೆಯ ನೂತನ ಸಿಪಿಐ ಆಗಿ ನೇಮಕ ಮಾಡಲಾಗಿದೆ.

ಪ್ರಕರಣದ ಹಿನ್ನೆಲೆ

ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ, ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕ ಮಹದೇವ್ ಅವರು, ಫ್ರೀ ಬಸ್‌ ಸೇವೆಯನ್ನು ಬಳಸಲು ಯುವತಿಯೊಬ್ಬಳಿಗೆ ಆಧಾರ್ ಕಾರ್ಡ್ ಕೇಳಿದರು. ಈ ಸಂದರ್ಭ ಬಾಲಕಿ ಮರಾಠಿಯಲ್ಲಿ ಮಾತನಾಡಿದಾಗ, ಮಹದೇವ್ ಕನ್ನಡದಲ್ಲಿ ಮಾತನಾಡುವಂತೆ ಹೇಳಿದರು. ಇದರಿಂದ ಸಿಟ್ಟಿಗೆದ್ದ ಯುವತಿ ಮತ್ತು ಬೆಂಬಲಿಗರು ನಿರ್ವಾಹಕನೊಂದಿಗೆ ವಾಗ್ವಾದಕ್ಕೆ ಇಳಿದರು.

ವಿವಾದದ ನಂತರ, ಮರಾಠಿ ಗುಂಪು ಮಹದೇವ್ ಮೇಲೆ ಹಲ್ಲೆ ನಡೆಸಿತು. ಅಲ್ಲದೆ, ತಿರುಚಿದ ಆರೋಪಗಳ ಮೂಲಕ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಅವರ ವಿರುದ್ಧ ಕೇಸ್ ದಾಖಲಿಸಲಾಯಿತು.

ಸತ್ಯ ಹೊರಬಂದ ನಂತರ ಕ್ರಮ

ಈ ಪ್ರಕರಣದಲ್ಲಿ ಯಾವುದೇ ಪ್ರಾಮಾಣಿಕ ಆಧಾರವಿಲ್ಲದೇ ಪೋಕ್ಸೋ ಕೇಸ್ ದಾಖಲಿಸಿದ್ದ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟರ್ ವಿರುದ್ಧ ವಿಸ್ತೃತ ತನಿಖೆ ನಡೆಯಿತು. ತನಿಖೆಯ ಪಶ್ಚಾತ್ತ, ಅವರ ಕಾನೂನುಬಾಹಿರ ಕ್ರಮಗಳು ಬೆಳಕಿಗೆ ಬಂದ ಕಾರಣ, ಅವರನ್ನು ಮಾರಿಹಾಳ ಠಾಣೆಯಿಂದ ತೆರವುಗೊಳಿಸಿ, ಹೊಸ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ.

ಈ ಘಟನೆಯು ಬೆಳಗಾವಿಯಲ್ಲಿ ಕನ್ನಡಿಗರ ಹಕ್ಕುಗಳನ್ನು ಉಳಿಸುವ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

nazeer ahamad

Recent Posts

ಯಾದಗಿರಿ: ಚಿಂದಿ ಆಯುವ ಯುವತಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ; ಬೆಂಗಳೂರಿನಲ್ಲಿ ಪ್ರತಿಭಟನೆ…!

ಯಾದಗಿರಿ ಜಿಲ್ಲೆ ಗುರುಮಿಟ್ಕಲ್ ತಾಲೂಕು ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿಂದಿ ಆಯುವ ಯುವತಿಯರಿಬ್ಬರ ಶವ ನೀಲಹಳ್ಳಿ ಕೆರೆಯಲ್ಲಿ ದಿನಾಂಕ…

3 hours ago

ಕುಣಿಗಲ್‌ನಲ್ಲಿ ನವಜಾತ ಶಿಶು ಮಾರಾಟ ಆರೋಪ: ಅಂಗನವಾಡಿ ಕಾರ್ಯಕರ್ತೆ ಸಸ್ಪೆಂಡ್

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದಲ್ಲಿ ನವಜಾತ ಶಿಶುವಿನ ಮಾರಾಟಕ್ಕೆ ಮಧ್ಯಸ್ಥಿಕೆ ವಹಿಸಿದ ಆರೋಪದ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ…

4 hours ago

ಶಿಕ್ಷಕರಿಂದ ವಿದ್ಯಾರ್ಥಿಗೆ ಲೈಂಗಿಕ ದೌರ್ಜನ್ಯ: ಪ್ರಭಾರ ಮುಖ್ಯಶಿಕ್ಷಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

ಪಟ್ಟಣ: ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಕೆ.ಎಚ್. ಗಿರೀಶ್ ವಿರುದ್ಧ ವಿದ್ಯಾರ್ಥಿಯ ಮೇಲೆ ಲೈಂಗಿಕ ದೌರ್ಜನ್ಯ…

5 hours ago

ಸೂಟ್‌ಕೇಸ್‌ನಲ್ಲಿ ಶವ ತುಂಬಿ ನದಿಗೆ ಎಸೆಯಲು ಯತ್: ತಾಯಿ-ಮಗಳು ಸ್ಥಳೀಯರ ಕೈಗೆ ಸಿಕ್ಕಿ ಬಂಧನ

ಕೋಲ್ಕತ್ತಾದ ಕುಮಾರ್ತುಲಿಯ ಗಂಗಾ ನದಿಯ ದಡದಲ್ಲಿ ಇಂದು ಬೆಳಗ್ಗೆ ಭೀಕರ ಘಟನೆ ಬೆಳಕಿಗೆ ಬಂದಿದೆ. ಶವವನ್ನು ಸೂಟ್‌ಕೇಸ್‌ನಲ್ಲಿ ತುಂಬಿ ನದಿಗೆ…

8 hours ago

14 ಲಕ್ಷ ನಕಲಿ ನೋಟುಗಳು ವಶ: ಮೂವರು ಆರೋಪಿಗಳ ಬಂಧನ

ವಾಡಾ: ಇಲ್ಲಿನ ಪಾಲಿ ಗ್ರಾಮದ ಬಳಿ ನಡೆದ ಪೊಲೀಸ್ ಕಾರ್ಯಾಚರಣೆಯಲ್ಲಿ ₹14 ಲಕ್ಷ ಮೌಲ್ಯದ ನಕಲಿ ನೋಟುಗಳು ವಶಪಡಿಸಿಕೊಳ್ಳಲಾಗಿದೆ. ಖಚಿತ…

9 hours ago

ತುಮಕೂರಿನಲ್ಲಿ ಶಿಶು ಮಾರಾಟ ಜಾಲ ಬಯಲಾಗಿದ್ದು, ಐವರು ಬಂಧನ

ತುಮಕೂರು ಜಿಲ್ಲೆಯಲ್ಲಿ ಶಿಶು ಮಾರಾಟ ಜಾಲ ಬೆಳಕಿಗೆ ಬಂದಿದ್ದು, ಈ ಸಂಬಂಧ ಐವರು ಪೊಲೀಸರ ವಶಕ್ಕೆ ಒಳಗಾಗಿದ್ದಾರೆ. ಫೆಬ್ರುವರಿ 20…

11 hours ago