ಉತ್ತರಕನ್ನಡ ಜಿಲ್ಲೆಯ ತಾಲೂಕು ವ್ಯಾಪ್ತಿಯಲ್ಲಿ ಸಾಕಷ್ಟು ಬಡ ಕುಟುಂಬಗಳು ವಾಸವಾಗಿದ್ದವೆ.ಇಲ್ಲಿನ ಜನ ದಿನನಿತ್ಯ ಕೆಲಸ ಮಾಡಿದರೆ ಮಾತ್ರ ಅವರ ಜೀವನವಾಗಿದೆ. ಈ ಜಿಲ್ಲೆಯಲ್ಲಿ ಸಾಕಷ್ಟು ಸಂಕೆಯಲ್ಲಿ ಅರಣ್ಯವನ್ನು ಅವಲಂಬಿತವಾಗಿ ಅವರಿಗೆ ಜೀವನ ನಡೆಸಲು ಬೇಕಾದ ಚಿಕ್ಕ ಪುಟ್ಟ ಮನೆಯನ್ನು ಕಟ್ಟಿಕೊಂಡು ಸಾವಿರಾರು ಸಂಖ್ಯೆಯ ಕುಟುಂಬಗಳು ವಾಸವಾಗಿದ್ದಾರೆ .ಆದರೆ ಇತ್ತೀಚಿನ ದಿನಗಳಲ್ಲಿ ಅರಣ್ಯದಲ್ಲಿ ವಾಸ ಮಾಡುವ ಕುಟುಂಬಗಳ ಮೇಲೆ ಅಧಿಕಾರಿ ಸಿಬ್ಬಂದಿಗಳು ಬಡ ಕುಟುಂಬಗಳ ಮೇಲೆ ಕಿರುಕುಳ ನೀಡಿ ದೌರ್ಜನ್ಯ ಮಾಡುತ್ತಿರುವುದು ಬೇಸರದ ವಿಷಯ ವಾಗಿದೆ .ಹೀಗೆ ಇದೊಂದು ಘಟನೆ ತಾಲೂಕಿನ ದೇವನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಗ್ರಾಮದಲ್ಲಿ ಬರುವ ಕೃಷ್ಣಕೇರಿಯ ಮರಾಠಿ ಸಮುದಾಯಕ್ಕೆ ಸೇರಿದ ಇಲ್ಲಿನ ಕುಟುಂಬಗಳ ಮೇಲೆ ಕಳೆದ ದಿನಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಅವರ ಮನೆಯನ್ನು ಪೂರ್ತಿ ನೆಲಸಮ ಮಾಡಿ ಕುಟುಂಬಗಳಿಗೆ ಕಿರುಕುಳ ಎಸಗಿದ್ದಾರೆ . ಈ ಕಿರುಕುಳ ಹಿಂಸೆ ಒಳಪಟ್ಟ ಕುಟುಂಬಗಳು ಅಧಿಕಾರಿ ಸಿಬ್ಬಂದಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ .ಇನ್ನಾದರೂ ಈ ದೌರ್ಜನ್ಯ ಹಿಂಸೆ ಕುರಿತು ಸೂಕ್ತ ಕ್ರಮ ತನಿಖೆಗೆ ಒಳಪಡಿಸಿ ನ್ಯಾಯ ಒದಗಿಸುತ್ತಾರಾ ಕಾದು ನೋಡಬೇಕಾಗಿದೆ..
ವರದಿ: ಶ್ರೀಪಾದ್ ಹೆಗಡೆ

error: Content is protected !!