ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದ ಘೋರ ಘಟನೆಯೊಂದು ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಜನರ ಪ್ರಾಣ ಕಾಪಾಡುವ ವೈದ್ಯನನ್ನೇ ಅಮಾನವೀಯ ಕೃತ್ಯಕ್ಕೆ ಗುರಿಪಡಿಸಿದ್ದಾರೆ. ಮೂವರು ದುಷ್ಕರ್ಮಿಗಳು ಖಾಸಗಿ ಕ್ಲಿನಿಕ್‌ಗೆ ನುಗ್ಗಿ ವೈದ್ಯನನ್ನು ಥಳಿಸಿದ್ದಲ್ಲದೆ, ಅವರ ಮೇಲೆ ಕ್ರೌರ್ಯದ ಪರಮಾವಧಿ ಮೆರೆದಿದ್ದಾರೆ.
ಘಟನೆ ಮೀರತ್‌ನ ಪರೀಕ್ಷಿತ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ. 42 ವರ್ಷದ ವೈದ್ಯರು ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳನ್ನು ಚಿಕಿತ್ಸೆ ನೀಡುತ್ತಿದ್ದರು. ಸಂಜೆ 5 ಗಂಟೆ ಸುಮಾರಿಗೆ ಮೂವರು ವ್ಯಕ್ತಿಗಳು ಇದ್ದಕ್ಕಿದ್ದಂತೆ ಕ್ಲಿನಿಕ್‌ಗೆ ನುಗ್ಗಿ ವೈದ್ಯನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ವೈದ್ಯರು ವಿರೋಧ ವ್ಯಕ್ತಪಡಿಸಿದಾಗ, ಆರೋಪಿಗಳು ಮೊದಲು ಅವರನ್ನು ಕ್ರೂರವಾಗಿ ಹಲ್ಲೆ ನಡೆಸಿ, ನಂತರ ಅವರ ಕ್ಲಿನಿಕ್‌ನಲ್ಲಿರುವ ವಸ್ತುಗಳನ್ನು ಧ್ವಂಸಗೊಳಿಸಿದರು.
ನಿರ್ದಯ ಕೃತ್ಯ: ವೈದ್ಯರ ಖಾಸಗಿ ಅಂಗ ಕತ್ತರಿಸಿ ಪರಾರಿಯಾದ ದಾಳಿಕೋರರು
ಆಕ್ರೋಶಿತ ದಾಳಿಕೋರರು ಮಾತ್ರ ಹಲ್ಲೆಯಿಂದ ತೃಪ್ತಗೊಳ್ಳದೆ, ವೈದ್ಯನನ್ನು ಪೀಡಿಸುವ ಅಮಾನವೀಯ ಕೃತ್ಯವೆಸಗಿದ್ದಾರೆ. ಇಬ್ಬರು ಆರೋಪಿಗಳು ವೈದ್ಯನನ್ನು ಬಲವಂತವಾಗಿ ಹಿಡಿದುಕೊಂಡರೆ, ಮತ್ತೊಬ್ಬನು ಹರಿತವಾದ ಚಾಕುವಿನಿಂದ ಅವರ ಖಾಸಗಿ ಅಂಗವನ್ನು ಕತ್ತರಿಸಿದ್ದಾನೆ. ಈ ಅಮಾನವೀಯ ದಾಳಿಯಿಂದಾಗಿ ವೈದ್ಯರು ಭಾರೀ ರಕ್ತಸ್ರಾವಕ್ಕೆ ಒಳಗಾದರು. ಸ್ಥಳೀಯರು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಆದರೆ ಗಾಯಗಳ ಗಂಭೀರತೆ ಕಂಡು, ತಕ್ಷಣವೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಪ್ರಮುಖ ಆಸ್ಪತ್ರೆಗೆ ರವಾನಿಸಲಾಯಿತು.
ಅಕ್ರಮ ಸಂಬಂಧವೇ ದಾಳಿಯ ಹಿಂದಿನ ಕಾರಣ? ಪೊಲೀಸರು ತನಿಖೆ ಮುಂದುವರಿಸಿದ್ದಾರೆ
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವೈದ್ಯರ ಹೇಳಿಕೆಯ ಆಧಾರದ ಮೇಲೆ ಪ್ರಕರಣ ದಾಖಲಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಸದರ್ ಗ್ರಾಮೀಣ ಸಿಒ ಶಿವ ಪ್ರತಾಪ್ ಸಿಂಗ್ ತಿಳಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಈ ದಾಳಿ ಅಕ್ರಮ ಸಂಬಂಧದ ಹಿನ್ನೆಲೆ ನಡೆದಿರುವ ಸಾಧ್ಯತೆ ಉಳ್ಳಿದೆ. ಆದರೆ, ಪೊಲೀಸರು ಈ ಸಂಬಂಧ ಇನ್ನೂ ಯಾವುದೇ ತೀರ್ಮಾನಕ್ಕೆ ಬಂದಿಲ್ಲ ಮತ್ತು ತನಿಖೆಯನ್ನು ತೀವ್ರಗೊಳಿಸಿದ್ದಾರೆ.
ಈ ಅಮಾನವೀಯ ಕೃತ್ಯಕ್ಕೆ ಸಂಬಂಧಿಸಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ಭರವಸೆ ಪೊಲೀಸರು ವ್ಯಕ್ತಪಡಿಸಿದ್ದಾರೆ.
ಕೊಟ್ಟೂರು ತಾಲೂಕಿನ ಮೊತಿಕಲ್ ತಾಂಡ ಗ್ರಾಮದ ಮನೋಜ್ ನಾಯ್ಕ್ (32) ಅವರನ್ನು ಅಪರಿಚಿತ ಆಟೋ ಡಿಕ್ಕಿ ಹೊಡೆದು, ಅವರು ಸ್ಥಳದಲ್ಲೇ…
ಭಟ್ಕಳದಲ್ಲಿ ಅಕ್ರಮ ಜಾನುವಾರು ಸಾಗಾಟವನ್ನು ತಡೆದು, ಭಟ್ಕಳ ಪೊಲೀಸರು 17 ಕೋಣಗಳನ್ನು ರಕ್ಷಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.…
ಬಲೂಚಿಸ್ತಾನದ ಪ್ರತ್ಯೇಕತಾವಾದಿ ಗುಂಪಾದ ಬಲೂಚ್ ಲಿಬರೇಶನ್ ಆರ್ಮಿ (BLA) ಪಾಕಿಸ್ತಾನದ ಪ್ರಯಾಣಿಕ ರೈಲನ್ನು ಅಪಹರಿಸಿ, ಬಲೂಚ್ ರಾಜಕೀಯ ಕೈದಿಗಳ ಬಿಡುಗಡೆಗಾಗಿ…
2022ರಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಸವರಾಜ್ ದಡೇಸುಗೂರು ಅವರ ಆಡಿಯೋ ಮತ್ತೆ ಸಂಚಲನ ಮೂಡಿಸಿರುವ ಘಟನೆ ಇದೀಗ…
ಇಂಗ್ಲೆಂಡ್‌ನಲ್ಲಿ 45 ವರ್ಷದ ಮಹಿಳೆ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಆಘಾತಕಾರಿ ಸಂಗತಿ ಎಂದರೆ ಆಕೆಯ ಶವವನ್ನು ಸಾಕು ನಾಯಿಗಳು…
ತೆಲಂಗಾಣದ ಮೆಹಬೂಬಾಬಾದ್‌ನಲ್ಲಿ ಅಮಾನವೀಯ ಘಟನೆ ನಡೆದಿದ್ದು, ಮಟನ್ ಕರಿ ಮಾಡಿಕೊಡಲು ನಿರಾಕರಿಸಿದ್ದಕ್ಕೆ ಪತಿಯೊಬ್ಬ ತನ್ನ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. 35…