ಬಾಗಲಕೋಟೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ಸಿನಲ್ಲಿ ಸಿಮೆಂಟ್ ಚೀಲದ ಆವರಣದಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದ ಶಕೀರಾ ಬೇಪಾರಿ ಎಂಬ ಮಹಿಳೆಯನ್ನು ಹಿಂದೂ ಸಂಘಟನೆ ಕಾರ್ಯಕರ್ತರು ನವನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಘಟನೆ ಬಾಗಲಕೋಟೆ ನಗರದ KSRTC ಬಸ್ ನಿಲ್ದಾಣದಲ್ಲಿ ನಡೆದಿದ್ದು, ಶಕೀರಾ ಎಂಬವರು ಬಸ್‌ವೊಂದರಲ್ಲಿ ಸಿಮೆಂಟ್ ಚೀಲದಲ್ಲಿ ಶಂಕಿತ ಗೋಮಾಂಸವನ್ನು ತುಂಬಿಸಿಕೊಂಡು ಪ್ರಯಾಣ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಬಸ್ ಚಾಲಕನ ಗಮನಕ್ಕೆ ವಿಷಯ ಬಂದ ಕೂಡಲೆ ಅವರು ಶಕೀರಾರನ್ನು ಬಸ್ಸಿನಿಂದ ಇಳಿಸಿದ್ದಾರೆ.
ಆ ಬಳಿಕ, ಬಸ್ ನಿರ್ವಾಹಕ ಟಂಟಂ ವಾಹನವನ್ನು ಕರೆಸಿ ಶಂಕಿತ ಮಾಂಸವನ್ನು ಸ್ಥಳಾಂತರಿಸಲು ಯತ್ನಿಸುತ್ತಿದ್ದರು. ಈ ಘಟನೆ ಬಗ್ಗೆ ಹಿಂದೂ ಸಂಘಟನೆ ಸದಸ್ಯರಿಗೆ ಮಾಹಿತಿ ಲಭಿತವಾಗುತ್ತಿದ್ದಂತೆಯೇ ಅವರು ಸ್ಥಳಕ್ಕಾಗಮಿಸಿ ಶಕೀರಾರನ್ನು ತಡೆದು ಪೊಲೀಸರು ಸೇರಿಸಿದರು.
ನವನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಮಾಂಸವನ್ನು ಪರೀಕ್ಷೆಗಾಗಿ ಫೊರೆನ್ಸಿಕ್ ಲ್ಯಾಬ್‌ಗೆ ಕಳುಹಿಸಲಾಗಿದೆ. ಪೂರ್ಣ ತನಿಖೆಯ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯಿಂದ ಬಸ್ ನಿಲ್ದಾಣದಲ್ಲಿ ಕೆಲಕಾಲ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೋಲಾರ: ಆಂಧ್ರ ಪ್ರದೇಶ ಪೊಲೀಸರು ಚಿನ್ನದ ರಾಬರಿ ಪ್ರಕರಣದಲ್ಲಿ ಕೆಜಿಎಫ್ ಮೂಲದ ಕಾಂಗ್ರೆಸ್ ಮುಖಂಡನನ್ನು ಬಂಧಿಸಿರುವ ಘಟನೆ ರಾಜ್ಯ ರಾಜಕೀಯ…
ಪುತ್ತೂರು: ಪಿಯುಸಿ ಓದುತ್ತಿದ್ದ ಬಾಲಕಿ ಮೇಲೆ ಆಟೋ ಚಾಲಕನೊಬ್ಬ ದೌರ್ಜನ್ಯ ಎಸಗಿದ ದಾರುಣ ಘಟನೆ ಬೆಳಕಿಗೆ ಬಂದಿದೆ. ಕಾಲೇಜಿಗೆ ರಜೆ…
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಅಸ್ತಾಪನಹಳ್ಳಿ ಗ್ರಾಮದಲ್ಲಿ ನಡೆದ ಅಮಾನವೀಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಏಪ್ರಿಲ್ 4 ರಂದು…
ಬಂಗಾರಪೇಟೆ: ದಿನಾಂಕ 05.04.2025 ರಂದು ಮಧ್ಯ ರಾತ್ರಿ 12.30 ಗಂಟೆ ಸಮಯದಲ್ಲಿ ಹುದುಕುಳ ಗೇಟ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ…
ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಮಾನವೀಯತೆಯೆಂಬ ಮೌಲ್ಯವೇ ಪ್ರಶ್ನೆಗೆ ಒಳಪಡಿಸುವ ದುರ್ಘಟನೆ ಬೆಳಕಿಗೆ ಬಂದಿದೆ. 13 ವರ್ಷದ ಕ್ಯಾನ್ಸರ್ ಪೀಡಿತ ಬಾಲಕಿಯೊಬ್ಬಳ…
ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಕಲಾ ಅವರನ್ನು ಅಮಾನತುಗೊಳಿಸಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆದೇಶ ಹೊರಡಿಸಿದ್ದಾರೆ.…