Latest

ಹಾಜರಾತಿ ಮೋಸ: ಐದು ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಒಂದು ತಿಂಗಳ ಅಮಾನತು

ಬೆಳಗಾವಿಯ ಕೆಎಂಸಿ-ಆರ್‌ಐ ಆಸ್ಪತ್ರೆಯಲ್ಲಿ ಕಿರಿಯ ಎಂಬಿಬಿಎಸ್ ವಿದ್ಯಾರ್ಥಿಗಳು, ಹಿರಿಯ ವಿದ್ಯಾರ್ಥಿಗಳ ಪರ ಹಾಜರಾತಿ ಹಾಕಿದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಐವರು ವಿದ್ಯಾರ್ಥಿಗಳನ್ನು ಒಂದು ತಿಂಗಳ ಕಾಲ ಅಮಾನತು ಮಾಡಲಾಗಿದೆ.

ಹಿರಿಯರ ಒತ್ತಡಕ್ಕೆ ಲಗ್ಗೆಯಾದ ಕಿರಿಯರು
ಮಾರ್ಚ್ 14ರಂದು ಸರ್ಜರಿ ವಿಭಾಗದ ಅಂತಿಮ ತರಗತಿಯ ವೇಳೆ, ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ಕೆಲ ವಿದ್ಯಾರ್ಥಿಗಳನ್ನು ಬೆದರಿಸಿ, ತಮ್ಮ ಪರ ಹಾಜರಾತಿ ಹಾಕುವಂತೆ ಒತ್ತಾಯಿಸಿದ್ದರು. ಈ ವಿಷಯವನ್ನು ಸಹಾಯಕ ಪ್ರಾಧ್ಯಾಪಕರು ಗಮನಿಸಿ, ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ ಅವರಿಗೆ ತಿಳಿಸಿದ್ದಾರೆ.

ಅಮಾನತು ಆದೇಶ
ವಿಷಯ ತಿಳಿದ ಕೆಎಂಸಿ-ಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ, ರ್ಯಾಗಿಂಗ್ ನಿಯಂತ್ರಣ ಸಮಿತಿಗೆ ವರದಿ ಸಲ್ಲಿಸುವಂತೆ ಸೂಚಿಸಿದರು. ಸಮಿತಿ ತನಿಖೆ ನಡೆಸಿ ಆರೋಪ ಸಾಬೀತು ಮಾಡಿದ ಹಿನ್ನೆಲೆಯಲ್ಲಿ, ನಿರ್ದೇಶಕರು ಐದು ವಿದ್ಯಾರ್ಥಿಗಳನ್ನು ಒಂದು ತಿಂಗಳ ಕಾಲ ಅಮಾನತು ಮಾಡಿದರು.

ನಿಯಮ ಉಲ್ಲಂಘನೆಗೆ ಕಠಿಣ ಕ್ರಮ
ಈ ಕುರಿತು ಪ್ರತಿಕ್ರಿಯಿಸಿದ ಡಾ. ಕಮ್ಮಾರ, “ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳ ಪರ ಹಾಜರಾತಿ ಹಾಕಿರುವುದು ದೃಢಪಟ್ಟಿದೆ. ವೈದ್ಯಕೀಯ ಶಿಕ್ಷಣ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

ಭ್ರಷ್ಟರ ಬೇಟೆ

Recent Posts

ಪ್ರಿಯಕರನಿಗಾಗಿ ಗಂಡನನ್ನು ಬಿಟ್ಟು 4 ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್‌ಗೆ ಹೆಣ್ಣು ಮಗು ಜನನ..!

ಗೇಮಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿ ಪ್ರೇಮ ಸಂಬಂಧ ಬೆಳೆಸಿ, ಗಂಡನನ್ನು ತೊರೆದು ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಸೀಮಾ ಹೈದರ್ ಇದೀಗ…

34 minutes ago

ಲೋಕಾಯುಕ್ತ ಹೆಸರಿನಲ್ಲಿ ಮಹಿಳಾ ಅಧಿಕಾರಿಗೆ ಬ್ಲಾಕ್ ಮೈಲ್; 10 ತಿಂಗಳ ಬಳಿಕ ಆರೋಪಿ ಅಂದರ್..!

ಲೋಕಾಯುಕ್ತ ಅಧಿಕಾರಿ ಎಂದು ಭ್ರಮೆ ಹುಟ್ಟುಸಿ ಮಹಿಳಾ ಅಧಿಕಾರಿಯನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ 8ನೇ ತರಗತಿ ಓದಿದ ವಂಚಕನ ಕೀಳರಿಮೆ ಕೊನೆಗೊಂಡಿದೆ.…

49 minutes ago

ಮೂರು ಮಕ್ಕಳನ್ನು ಕೈಗೆ ಕೊಟ್ಟು ಪ್ರೇಯಸಿಯೊಂದಿಗೆ ಪತಿರಾಯ ಎಸ್ಕೇಪ್..!

ಬೆಳಗಾವಿಯಲ್ಲಿ ಗಂಡನ ಮೋಸದೊಂದು ಪ್ರಕರಣ ಬೆಳಕಿಗೆ ಬಂದಿದೆ. ಗೋಕಾಕ ತಾಲೂಕಿನ ಸುಳದಾಳ ಗ್ರಾಮದ ಯಲ್ಲಪ್ಪ ಮುಸಲ್ಮಾರಿ, ಮನೆಯವರ ವಿರೋಧದ ನಡುವೆಯೇ…

1 hour ago

ಖಾಸಗಿ ಫೈನಾನ್ಸ್ ಕಂಪನಿಯ ಶಾಖೆ ಉದ್ಘಾಟಿಸಿದ ಶಿಕ್ಷಣ ಇಲಾಖೆಯ ಅಧಿಕಾರಿ…!

ಮುಂಡಗೋಡ ಇಂದು ಮುಂಡಗೋಡಿನಲ್ಲಿ ಖಾಸಗಿ ಬಜಾಜ್ ಕಂಪನಿಯ ಶಾಖೆಯು ಉದ್ಘಾಟನೆಯಾಗಿದ್ದು ಈ ಯಾಕೆ ಇನ್ನು ಮುಂಡಗೋಡದ ಶಿಕ್ಷಣ ಇಲಾಖೆಯ ಸಮನ್ವಯಾಧಿಕಾರಿ…

2 hours ago

ಹಿರಿಯ ಸೇನಾ ಅಧಿಕಾರಿ ಮತ್ತು ಆತನ ಪುತ್ರನ ಮೇಲೆ ಪೊಲೀಸ್ ಹಲ್ಲೆ: 12 ಅಧಿಕಾರಿಗಳು ಅಮಾನತು

ಪಟಿಯಾಲಾದಲ್ಲಿ ಹಿರಿಯ ಸೇನಾ ಅಧಿಕಾರಿ ಪುಷ್ಪಿಂದರ್ ಸಿಂಗ್ ಬಾತ್ ಮತ್ತು ಅವರ ಮಗ ಅಂಗದ್ ಸಿಂಗ್ ಮೇಲೆ ಮೂವರು ಪಂಜಾಬ್…

1 day ago

ಪತಿಗೆ ಮದ್ಯ ಕುಡಿಸಿ ನವವಿವಾಹಿತೆಯ ಮೇಲೆ ಅತ್ಯಾಚಾರ…!

ಒಡಿಶಾದ ಬಾಲಸೋರ್ ಜಿಲ್ಲೆಯ ಜಲೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಲಿಯಾಪಾಳ ಗ್ರಾಮದಲ್ಲಿ ನೊಂದ ಮಹಿಳೆಯ ನೆರೆಮನೆಯವನೊಬ್ಬ ಅತ್ಯಾಚಾರ ಎಸಗಿದ ಘಟನೆಯು…

1 day ago