ಕುಂದಗೋಳ ತಾಲೂಕಿನ ರಟ್ಟಗೇರಿ ಗ್ರಾಮದ ಅಪ್ರಾಪ್ತ ಬಾಲಕಿಯ ಬಾಲ್ಯ ವಿವಾಹ ಸೋಮವಾರ ನಡೆಯವುದಿತ್ತು. ವಿಷಯ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಂಡ ಸೋಮವಾರ ಬೇಟೆ ನೀಡಿ, ಬಾಲ್ಯ ವಿವಾಹ ತಡೆಗಟ್ಟಿದೆ.

ಬಾಲಕಿ ಮದುವೆ ಇಂದು ರಟ್ಚಿಗೇರಿಯಲ್ಲಿ ಮೇ 29 ರಂದು ನಡೆಯುವುದಿತ್ತು. ಖಚಿತ ಮಾಹಿತಿ ಪಡೆದ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಜಿಲ್ಲಾ ಮಕ್ಕಳ ಘಟಕ, ಪೋಲಿಸ್ ಇಲಾಖೆ, ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಥಳಕ್ಕೆ ಬೇಟೆ ನೀಡಿ ಪರಿಶೀಲಿಸಿ ಬಾಲಕಿ ಪೋಷಕರಿಗೆ ತಿಳಿ ಹೇಳಿ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡರು.

ಅದಲ್ಲದೇ ಬಾಲಕಿ ಪೋಷಕರಿಗೆ ಒಂದು ವೇಳೆ ಮದುವೆಗೆ ಮುಂದಾಗಿದ್ದಾರೆ ಕಾನೂನು ಕ್ರಮ ಜರುಗಿಸಲಾಗುವುದು. ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

ಸದ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಶಿಶು ಯೋಜನಾಧಿಕಾರಿಗಳು, ಪೋಲಿಸ್ ಇಲಾಖೆ, ಜಿಲ್ಲಾ ಮಹಿಳಾ ರಕ್ಷಣ ಘಟಕ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಬಾಲಕಿಯನ್ನು ಬಾಲ್ಯ ವಿವಾಹದಿಂದ ರಕ್ಷಿಸಿ ಹುಬ್ಬಳ್ಳಿಯ ಘಂಟಿಕೇರಿ ಬಾಲಕಿಯರ ಬಾಲ ಮಂದಿರ ದಲ್ಲಿ ದಾಖಲಿಸಿದ್ದಾರೆ.

error: Content is protected !!