ಮದ್ಯಪಾನ ಮಾಡಿ ನಿಶೆಯಲ್ಲಿ ಪಾನಶಾಪ್ ಅಂಗಡಿಗೆ ಹೋಗಿ ಬೇಕಾಗಿದ್ದನ್ನ ಪಡೆದು ಕೊಂಡಿದ್ದಾನೆ ನಂತರ ಪಾನ್ ಶಾಪ್ ಅಂಗಡಿ ಮಾಲೀಕ ಹಣ ಕೊಡಿ ಎಂದರೇ ಮದ್ಯಪಾನ ಮಾಡಿದ್ದ ಆಟೋ ಚಾಲಕ ನನಗೇ ಹಣ ಕೆಳುತ್ತಿಯಾ ಮಗನೇ ಎಂದೂ ಹಲ್ಲೆ ಮಾಡಲು ಯತ್ನಿಸಿದ್ದಾನೆ ಆಗ ಪಾನ್ ಶಾಪ್ ಅಂಗಡಿ ಮಾಲೀಕ ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಅಲ್ಲಿಯೇ ಇದ್ದ ಕತ್ತರಿಯಿಂದ ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದ ಘಟನೆ ಸ್ಮಾರ್ಟ್ ಸಿಟಿ ಹುಬ್ಬಳ್ಳಿಯ ಗೋಕುಲ್ ರೋಡ್ ಹರ್ಷ ಪಾನ್ ಶಾಪ್ ದಲ್ಲಿ ನಡೆದಿದೆ.
ನಿನ್ನೆ ಮದ್ಯಾಹ್ನದ ಸಮಯದಲ್ಲಿ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿರುವ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಗೆ ಬಂದ ಸ್ಥಳೀಯ ನಿವಾಸಿ ಆಟೋ ಚಾಲಕ ಸೋಮು ಎಂಬ ವ್ಯಕ್ತಿ ಕಂಠ ಪೂರ್ತಿ ಕುಡಿದು ( ಮದ್ಯಪಾನ ಮಾಡಿ ) ಮದ್ಯದ ನೀಶೆಯಲ್ಲಿ ಹರ್ಷ ಪಾನ್ ಶಾಪ್ ಗೆ ಬಂದಿದ್ದಾನೆ ಪಾನ್ ಶಾಪ್ ದಲ್ಲಿ ತನಗೆ ಬೇಕಾಗಿದ್ದನ್ನು ಕೇಳಿ ಪಡೆದಿದ್ದಾನೆ ಆಮೇಲೆ ಪಾನ್ ಶಾಪ್ ಅಂಗಡಿ ಮಾಲೀಕ ಸೋಮು ಗೆ ಬಿಲ್ ಕೊಡಿ ಎಂದು ಕೇಳಿದ್ದಾನೆ ಅದರಿಂದ ಕುಡಿದ ನಿಶೆಯಲ್ಲಿದ್ದ ಸೋಮು ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾನೆ ಪಾನ್ ಶಾಪ್ ಮಾಲೀಕ ವೃದ್ದನಾಗಿದ್ದು ತನ್ನ ಜೀವವನ್ನು ಸಂರಕ್ಷಿಸಿಕೊಳ್ಳಲು ಎಲೆ (ಬೀಡಾ) ಕತ್ತರಿಸುವ ಕತ್ತರಿಯಿಂದ ಆಟೋ ಚಾಲಕನ (ಸೋಮು) ಹೊಟ್ಟೆಯ ಭಾಗಕ್ಕೇ ಬರ್ಬರವಾಗಿ ಇರಿದಿದ್ದಾನೆ ಈ ದುರ್ಘನೆಯಲ್ಲಿ ತೀವ್ರ ಗಂಭೀರವಾಗಿ ಗಾಯಗೊಂಡ ಸೋಮುನನ್ನು ಸ್ಥಳೀಯರು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಇನ್ನೂ ಮಾಹಿತಿ ತಿಳಿದ ಹುಬ್ಬಳ್ಳಿಯ ಗೋಕುಲ್ ರೋಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಾನ್ ಶಾಪ್ ಅಂಗಡಿ ಮಾಲೀಕ ವೃದ್ಧನನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.
ವರದಿ: ಶಿವು ಹುಬ್ಬಳ್ಳಿ.