ಬಾಗಲಕೋಟೆ:ಇತ್ತೀಚೆಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಾರಿ ಶಾಲೆಯ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ಉಚಿತವಾಗಿ ವಿತರಣೆ ಆಗುವ ಹಾಲಿನ ಪುಡಿ ಪಾಕೆಟ್ ಗಳನ್ನು ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 4 ಪ್ರಕರಣಗಳು ಹಾಗೂ ಕಲಾದಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 1 ಪ್ರಕರಣ ಹೀಗೆ ಒಟ್ಟು ಆರು ಪ್ರಕರಣಗಳು ದಾಖಲಾಗಿದ್ದು. ಸದರ ಪ್ರಕರಣಗಳಲ್ಲಿ ಒಟ್ಟು 697 ಕೆಜಿ ಹಾಲಿನ ಪುಡಿ ಹಾಗೂ 50 ಕೆಜಿ ಒಳ್ಳೆನ್ನೆ 2.09.861 ರೂ ಗಳು ಕಳ್ಳತನ ವಾಗಿರುತ್ತದೆ.
ಆದ ಕಾರಣ ಕಳುವಾದ ಮಾಲು ಹಾಗೂ ಆರೋಪಿತರ ಪತ್ತೆ ಮಾಡಲು ಶ್ರೀ ಜಯಪ್ರಕಾಶ ಮಾನ್ಯ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಜಿಲ್ಲೆ.ಹಾಗೂ ಪ್ರಸನ್ನ ದೇಸಾಯಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಬಾಗಲಕೋಟೆ ಮತ್ತು ಪೊಲೀಸ್ ಉಪ ವಿಭಾಗಾಧಿಕಾರಿ ಗಳಾದ ಶ್ರೀ ಪ್ರಶಾಂತ ಮುನ್ನೊಳ್ಳಿ ಹಾಗೂ ಬೀ ಎಂ ಸೋರಿ ಸಿಪಿಐ ಬಾಗಲಕೋಟೆ ಗ್ರಾಮೀಣ ವೃತ್ತ ಅವರ ಮಾರ್ಗದರ್ಶನದಲ್ಲಿ ಶ್ರೀ ಜನಾರ್ಧನ ಭಟ್ರಳ್ಳಿ ಪಿಎಸ್ಐ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ರವರ ನೈತೃತ್ವದಲ್ಲಿ ತನಿಖಾ ಅಪರಾಧ ತಂಡವನ್ನು ರಚಿಸಲಾಗಿತ್ತು.
ಸದರಿ ಅಪರಾಧ ಪತ್ತೆ ತಂಡದ ಅಧಿಕಾರಿ ಹಾಗೂ ಸಿಬ್ಬಂದಿ ಜನರು ಕೂಡಿಕೊಂಡು ಇದರ ಆರೋಪಿತರ ತಪಾಸಣೆಯಲ್ಲಿ ಇದ್ದಾಗ ದಿನಾಂಕ 05/02/2023 ರಂದು 03 ಘಂಟೆಗೆ ಗದ್ದನಕೆರಿ ಗ್ರಾಮದಲ್ಲಿ ಟಮ್ ಟಮ್ ವಾಹನದಲ್ಲಿ ಸಂಶಯಾಸ್ಪದ ವಾಗಿ ತಿರುಗಾಡುತ್ತಿದ್ದ ಆರೋಪಿತರು ಆದ 1) ಕಲ್ಮೇಶ್ ತಂದೆ ಈರಪ್ಪ ಗುಳನ್ನವರ 2)ಸುರೇಶ ಈರಪ್ಪ ಅಗಸರ 3)ಶಿವಾನಂದ ಸಿದ್ದಪ್ಪ ಡೊಳ್ಳಿನವರ ಎಲ್ಲರೂ ಸಾ //ಗಿರಿಸಾಗರ ತಾಲ್ಲೂಕು ಬೀಳಗಿ ಇವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಲಾಗಿ ಸದರಿ ಆಸಾಮಿಗಳು ಈಗ ಕಳೆದ ಎರಡು ವರ್ಷಗಳಿಂದ ಬಾಗಲಕೋಟೆ ಗ್ರಾಮೀಣ ಹಾಗೂ ಶಹರ ಮತ್ತು ಕಲಾದಗಿ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಯಲ್ಲಿ ಉಚಿತವಾಗಿ ಶಾಲಾ ಮಕ್ಕಳಿಗೆ ವಿತರಣೆ ಆಗುವ ಹಾಲಿನ ಪುಡಿ ಮತ್ತು ಒಳ್ಳೆನ್ನೇ ಪಾಕಿಟ್ ಗಳನ್ನೂ ಕಳ್ಳತನ ಮಾಡಿ ,ಕಳ್ಳತನ ಮಾಡಿದ್ದ ಹಾಲಿನ ಪುಡಿಯಿಂದ ಕವಾ ತಯಾರಿಸಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡು ತಮ್ಮ ಸ್ವ ಇಚ್ಛೆ ಹೇಳಿಕೆ ನೀಡಿದ್ದು ,ತನಿಖೆ ಕೈಗೊಂಡು ಆರೋಪಿತರಿಂದ 97 ಕೆಜಿ ಹಾಲಿನ ಪುಡಿಯಿಂದ ಕವಾ ತಯಾರಿಸಿ ಮಾರಾಟ ಮಾಡಿ ಬಂದ ಹಣ ಒಟ್ಟು 1,22.000 ರೂಪಾಯಿಗಳನ್ನು ಮತ್ತು ಕಳ್ಳತನಕ್ಕೆ ಉಪಯೋಗಿಸಿದ ಒಂದು ಟಂ ಟಂ ಗೂಡ್ಸ್ ವಾಹನವನ್ನು ಜಪ್ತಿ ಮಾಡಿಕೊಂಡು ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಇರುತ್ತದೆ.
ಈ ಕಾರ್ಯದಲ್ಲಿ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆ ಯ ಪಿಸೈ ರವರಾದ ಶ್ರೀ ಜನಾರ್ಧನ ಬಿ.ಮತ್ತು ಎಸೈ ಡಿ.ಸಿ.ಗುಡ್ಡಳ್ಳಿ ಮತ್ತು ಸಿಬ್ಬಂದಿ ಜನರಾದ ಆರ್. ಬಿ.ಪದರಾ ,ಎಸ್ ಬಿ ಹಣಮಗೌಡ್ರ.ರಾಜಭಕ್ಷ ನಧಾಪ.ಪ್ರದೀಪ ಪಾಟೀಲ್.ಶ್ರೀಕಾಂತ ಸೊನ್ನದ .ಎನ್ ಎಂ ಗುರಾಣಿ .ವಾಹನ ಚಾಲಕರಾದ ರಾಮಸ್ವಾಮಿ ನಾಯಕ ಹಾಗೂ ಕಲಾದಗಿ ಪೊಲೀಸ್ ಠಾಣೆಯ ಚಿದಾನಂದ ಭಜಂತ್ರಿ ಇವರು ಭಾಗವಹಿಸಿದ್ದರು.ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯವೈಖರಿಯನ್ನು ಮಾನ್ಯ ಎಸ್ಪಿ ಸಾಹೇಬರು ಬಾಗಲಕೋಟೆ ಜಿಲ್ಲೆ ರವರು ಶ್ಲಾಘಿಸಿದ್ದಾರೆ.
ವರದಿ :ಸಂಗಪ್ಪ ಚಲವಾದಿ
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…