ಯಲ್ಲಾಪುರ: ಕಾರಿನಲ್ಲಿ ಅಕ್ರಮವಾಗಿ ಸಾಗವಾನಿ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಆನಗೋಡ ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.
ಹುಟುಕಮನೆಯ ಅಕ್ಷಯ ಮಾದೇವ ಮರಾಠಿ ಹಾಗೂ ಸುಬ್ರಹ್ಮಣ್ಯ ಬಾಬು ಸಿದ್ದಿ ಬಂಧಿತರು. ಅವರು ಅನಗೋಡ ಸಮೀಪದ ದೋಣಿಗದ್ದೆ ಕಾಯ್ದಿಟ್ಟ ಅರಣ್ಯದಲ್ಲಿ ಹಸಿ ಸಾಗವಾನಿ ಕಟ್ಟಿಗೆಗಳನ್ನು ಕಡಿದು, ಕಾರಿನಲ್ಲಿ ಸಾಗಿಸುತ್ತಿದ್ದರು.
ಆ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ 2.50 ಲಕ್ಷ ರೂ ಮೌಲ್ಯದ ಸಾಗವಾನಿ ತುಂಡುಗಳನ್ನು ಹಾಗೂ ಸಾಗಿಸುತ್ತಿದ್ದ
ಕಾರನ್ನು ವಶಪಡಿಸಿಕೊಂಡಿದ್ದಾರೆ.
ಡಿಸಿಎಫ್ ಎಸ್. ಜಿ ಹೆಗಡೆ,ಎಸಿಎಫ್ ಆನಂದ ಎಚ್,ಆರ್‌ಎಫ್‌ಒ ಎನ್.ಎಲ್ ನದಾಫ, ಡಿ.ಆರ್.ಎಸ್.ಒಗಳಾದ ಶಿವಾನಂದ ಕಡಹಟ್ಟಿ, ಶ್ರೀನಿವಾಸ ನಾಯ್ಕ, ಬಸಲಿಂಗಪ್ಪ ಬಸಪ್ಪ,ಅಶೋಕ ಶಿರಗಾವಿ, ಸುನಿಲ್ ಜಂಗಮಶೆಟ್ಟಿ,ಅಲ್ತಾಫಚೌಕಡಾಕ್ ಆಶೋಕಹಳ್ಳಿ, ಸಂಜಯ ಬೋರಗಲ್ಲಿ, ನಾಗರಾಜ ಕಲಗುಟಕರ್, ಸಂತೋಷ ಕರಚಕಟ್ಟಿ ಇತರರು ಭಾಗವಹಿಸಿದ್ದರು.
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…