“ಹಣವನ್ನು ಕಂಡರೆ ಹೆಣವೂ ಬಾಯಿ ಬಿಡುತ್ತದೆ” ಎಂಬ ಗಾದೆಯಂತಾಗಿದೆ ನಮ್ಮ ದೇಶದ ಪರಿಸ್ಥಿತಿ. ಹಣವನ್ನು ಕೊಟ್ಟರೆ ಸಾಕು ಎಂತಹ ಅಪಾಯಕಾರಿ ವಸ್ತುಗಳನ್ನು ಆದರೂ ಚಾಲ್ತಿಗೆ ತರುತ್ತಾರೆ. ಹೌದು ಹಲವು ದೇಶಗಳಲ್ಲಿ ಮನುಷ್ಯನ ಜೀವಕ್ಕೆ ಅಪಾಯಕಾರಿ ಎಂದು ಬ್ಯಾನ್ ಮಾಡಿರುವಂತಹ ಎಷ್ಟೊ ವಸ್ತುಗಳು ಭಾರತದಲ್ಲಿ ಇನ್ನೂ ಚಾಲ್ತಿಯಲ್ಲಿವೆ ಹಾಗೂ ಅಂತಹ ವಸ್ತುಗಳೇ ಹೆಚ್ಚು ಜನಪ್ರಿಯತೆ ಪಡೆದು ಪ್ರಚಲಿತದಲ್ಲಿವೆ. ಇಂತಹದೇ ಕೆಲವು ವಸ್ತುಗಳ ಬಗ್ಗೆ ಈಗ ಹೇಳಲು ಹೊರಟಿದ್ದೇವೆ. ಆ ವಸ್ತುಗಳು ಯಾವುವು ಎಂದು ತಿಳಿಯಲು ಮುಂದೆ ಓದಿ.
ಲೈಫ್ ಬಾಯ್ ಸೋಪ್ ಪ್ರಪಂಚದ ದೊಡ್ಡಣ್ಣನಾದ ಅಮೇರಿಕಾದಲ್ಲಿ ಬ್ಯಾನ್ ಆಗಿದೆ ಆಶ್ಚರ್ಯವಾದರೂ ನಂಬಲೇಬೇಕು. ಹೌದು, ಲೈಫ್ ಬಾಯ್ ಸೋಪನ್ನು ಅಮೆರಿಕ ಸರ್ಕಾರವು ಬ್ಯಾನ್ ಮಾಡಿದೆ. ಲೈಫ್ ಬಾಯ್ ಸೊಪ್ಪಿನ ಕಂಪನಿಯು ಅಮೇರಿಕಾ ಸರ್ಕಾರದ ಬಳಿ ತನ್ನ ಸೋಪು ಮನುಷ್ಯನ ಚರ್ಮಕ್ಕೆ ಸುರಕ್ಷಾವಾದದ್ದು ಎಂದು ನಿರೂಪಿಸುವಲ್ಲಿ ವಿಫಲವಾಗಿದೆ. ಹಾಗೂ
ಈ ಸೋಪನ್ನು ಅಮೆರಿಕದಲ್ಲಿ ಪ್ರಾಣಿಗಳಿಗೆ ಮಾತ್ರ ಬಳಸುತ್ತಾರೆ. ಪ್ರಾಣಿಗಳಿಗೆ ಏಕೆಂದರೆ ಪ್ರಾಣಿಗಳದ್ದು ದಪ್ಪ ಚರ್ಮವಾಗಿರುತ್ತದೆ ಆದ ಕಾರಣ ಅವುಗಳ ಚರ್ಮಕ್ಕೆ ಈ ಸೋಪು ಯಾವುದೇ ರೀತಿಯ ಹಾನಿ ಮಾಡುವುದಿಲ್ಲ. ಆದರೆ ಮನುಷ್ಯನ ಚರ್ಮ ಮೃದುವಾಗಿರುವುದರಿಂದ ಮನುಷ್ಯನ ಚರ್ಮಕ್ಕೆ ಹಾನಿ ಮಾಡುತ್ತದೆ. ಜನಸಾಮಾನ್ಯರ ಬಗ್ಗೆ ಕಾಳಜಿ ಇರುವಂತಹ ಅಮೆರಿಕ ದೇಶವು ಅಮೇರಿಕಾ ದೇಶದಲ್ಲಿ ಈ ಸೋಪನ್ನು ಬ್ಯಾನ್ ಮಾಡಿದೆ. ಹೊರದೇಶದಲ್ಲಿ ಲೈಫ್ ಬಾಯ್ ಸೋಪು ಮನುಷ್ಯನ ಚರ್ಮಕ್ಕೆ ಸುರಕ್ಷಾವಾದದ್ದು ಎಂದು ನಿರೂಪಿಸುವಲ್ಲಿ ವಿಫಲವಾದ ಮೇಲೆ ಭಾರತದಲ್ಲಿ ಹೇಗೆ ನಿರೂಪಿಸಿದೆ? ಸುರಕ್ಷವಾದದ್ದು ಎಂದು ನಿರೂಪಿಸಿದೆಯೋ ಅಥವಾ ಸುರಕ್ಷವಾದ ನೋಟಗಳಿಂದ ಭ್ರಷ್ಟ ಸರ್ಕಾರದ ಕೈ ತಂಪು ಮಾಡಿದೆಯೋ ಬಲ್ಲವರ್ಯಾರು? ಮನುಷ್ಯನ ಚರ್ಮಕ್ಕೆ ಹಾನಿ ಉಂಟು ಮಾಡುವಂತಹ ಇಂತಹ ಸೋಪು ಭಾರತದಲ್ಲಿ ಪ್ರಚಲಿತದಲ್ಲಿರುವುದು ಮಾತ್ರವೇ ಅಲ್ಲದೆ ಹೆಚ್ಚು ಜನಪ್ರಿಯತೆಯನ್ನು ಸಹ ಪಡೆದಿದೆ. “ಶೇಕಡ ೯೯ರಷ್ಟು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ” ಎಂದು ಟಿವಿಯಲ್ಲಿ ತೋರಿಸುತ್ತಿರುವಂತಹ ಜಾಹಿರಾತುಗಳನ್ನು ದಿನನಿತ್ಯ ನಾವು ನೋಡುತ್ತಲೇ ಇದ್ದೇವೆ. “ಬಂಟಿ ನಿನ್ನ ಸೋಪು ಸ್ಲೋ ನಾ” ಲೈಫ್ ಬಾಯ್ ಸೋಪಿನ ಜಾಹೀರಾತಿನಲ್ಲಿ ಬರುವ ಈ ವಾಕ್ಯವಂತೂ ಸೋಪಿಗಿಂತ ಹೆಚ್ಚು ಪ್ರಚಾರವನ್ನು ಪಡೆದಿದೆ. ಇಷ್ಟೆಲ್ಲಾ ಪ್ರಚಾರ ಗಿಟ್ಟಿಸಿಕೊಂಡಿರುವ ಇಂತಹ ಸೋಪು ಮನುಷ್ಯನ ಚರ್ಮಕ್ಕೆ ಹಾನಿಕಾರಕ ಎಂಬುದು ಭಾರತದ ಎಷ್ಟೊ ಜನರಿಗೆ ತಿಳಿದೆ ಇಲ್ಲ. ನಮ್ಮ ದೇಶದಲ್ಲಿ ಪರೀಕ್ಷಿಸುವ ತಂತ್ರಜ್ಞಾನ ಬೆಳೆದಿಲ್ಲವೊ? ಅಥವಾ ಪರೀಕ್ಷಿಸುವವರೇ ಸರಿಯಿಲ್ಲವೋ? ತಿಳಿಯುತ್ತಿಲ್ಲ. ಇದೊಂದು ಮಾತ್ರವೇ ಅಲ್ಲದೆ ಇನ್ನೂ ಹಲವು ವಸ್ತುಗಳು ಹೊರದೇಶದಲ್ಲಿ ಬ್ಯಾನ್ ಆಗಿದ್ದರೂ ಸಹ ಭಾರತದಲ್ಲಿ ಪ್ರಚಲಿತದಲ್ಲಿವೆ.
ಇದು ದುಬಾರಿ ಬೆಲೆಯ ಎನರ್ಜಿ ಡ್ರಿಂಕ್ ಭಾರತದಲ್ಲಿ ಬೇಕರಿ ಹಾಗೂ ದಿನಸಿ ಅಂಗಡಿಗಳಲ್ಲೆಲ್ಲಾ ದೊರೆಯುವಷ್ಟು ಪ್ರಚಲಿತದಲ್ಲಿದೆ. ಆದರೆ ಫ್ರಾನ್ಸ್ ಮತ್ತು ಡೆನ್ಮಾರ್ಕ್ ದೇಶಗಳು ಇದನ್ನು ಬ್ಯಾನ್ ಮಾಡಿವೆ. ಹಾಗೂ ಇನ್ನೂ ಕೆಲವು ದೇಶಗಳಲ್ಲಿ ೧೮ವಯಸ್ಸಿನ ಕೆಳಪಟ್ಟವರು ಇದನ್ನು ಕುಡಿಯದಂತೆ ನಿಷೇಧಿಸಿದ್ದಾರೆ. ಏಕೆಂದರೆ ಇದನ್ನು ಕುಡಿಯುವುದರಿಂದ ಹೃದಯಾಘಾತ, ನಿರ್ಜಲೀಕರಣ, ಅಧಿಕ ರಕ್ತದೊತ್ತಡ ಮತ್ತು ಸೆಳೆತ ಹೆಚ್ಚಾಗುತ್ತದೆ ಎಂದು ಇದನ್ನು ಬ್ಯಾನ್ ಮಾಡಿರುವಂತಹ ದೇಶಗಳು ನಂಬುತ್ತವೆ. ಆದರೆ ಭಾರತದಲ್ಲಿ ಮಾತ್ರ ಇದು ಚಿಕ್ಕಪುಟ್ಟ ಅಂಗಡಿಗಳಲ್ಲೆಲ್ಲಾ ದೊರೆಯುತ್ತದೆ ಹಾಗೂ ಇದನ್ನು ಯಾರು ಬೇಕಾದರೂ ಕುಡಿಯಬಹುದು.
ಇದೊಂದು ನೋವನ್ನು ಕಡಿಮೆ ಮಾಡುವಂತಹ ಗುಳಿಗೆ ಇದಕ್ಕೆ ನಿಮುಲಿದ್ ಪೇನ್ ಕಿಲ್ಲರ್ ಎಂದು ಕರೆಯುತ್ತಾರೆ. ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ದಂತಹ ದೇಶಗಳಲ್ಲಿ ಇದನ್ನು ಬ್ಯಾನ್ ಮಾಡಿದ್ದಾರೆ ಏಕೆಂದರೆ ಇದು ಯಕೃತ್ತಿಗೆ(ಲಿವರ್) ಹಾನಿಕಾರಕ ಎಂದು. ಆದರೆ ಇದನ್ನು ಭಾರತದಲ್ಲಿ ಸುಲಭವಾಗಿ ಪಡೆಯಬಹುದು.
ಡಿ-ಕೋಲ್ಡ್ ಟೋಟಲ್ ಎಂದರೆ ಗಂಟಲು ಕಡಿತ, ಮೈ ನೋವು, ತಲೆನೋವು ಮತ್ತು ನೆಗಡಿಯಿಂದ ಮೂಗು ಮುಚ್ಚಿದರೆ ತೆಗೆದುಕೊಳ್ಳುವಂತಹ ಮಾತ್ರೆ. ಈ ಮಾತ್ರೆಯ ಹಲವು ಜಾಹಿರಾತುಗಳು ಈಗಾಗಲೇ ಟಿವಿಗಳಲ್ಲು ಸಹ ಬಂದಿವೆ ಇದು ಹಲವರಿಗೆ ತಿಳಿದಿರುವಂತಹದೆ. ಆದರೆ ಈ ಮಾತ್ರಯು ಕಿಡ್ನಿಗೆ ಸಮಸ್ಯೆ ಮಾಡುತ್ತದೆ ಎಂಬ ಕಾರಣಕ್ಕಾಗಿ ಹಲವು ದೇಶಗಳಲ್ಲಿ ಬ್ಯಾನ್ ಮಾಡಿದ್ದಾರೆ. ಆದರೆ ಇದು ಭಾರತದಲ್ಲಿ ಲಭ್ಯವಿದೆ. ಭಾರತದಲ್ಲಿರುವ ಜನರಿಗೆ ಕಿಡ್ನಿ ಇಲ್ಲವೇ? ಹೊರದೇಶದ ಜನರ ಕಿಡ್ನಿಗೆ ಸಮಸ್ಯೆ ಮಾಡುವಂತಹ ಈ ಮಾತ್ರೆಯು ಭಾರತದಲ್ಲಿರುವ ಜನರ ಕಿಡ್ನಿಗೆ ಸಮಸ್ಯೆ ಮಾಡದಿರದೇ? ಆದರೂ ಸರ್ಕಾರ ಇದನ್ನು ಬ್ಯಾನ್ ಮಾಡದಿರಲು ಕಾರಣವೇನು?
ಮಾರುತಿ ಸುಜುಕಿ ಕಂಪನಿಯ ಆಲ್ಟೊ-೮೦೦ ಕಾರು ಎಷ್ಟೋ ಮಧ್ಯಮವರ್ಗದ ಜನರ ಕಾರಿನ ಆಸೆಯನ್ನು ಈಡೇರಿಸಿದೆ. ಆದರೆ ಗ್ಲೋಬಲ್ ಎನ್.ಸಿ.ಎ.ಪಿ ಟೆಸ್ಟ್ ನಲ್ಲಿ ಫೇಲ್ ಆದ ಕಾರಣ ಈ ಕಾರನ್ನು ಹಲವು ದೇಶಗಳಲ್ಲಿ ಬ್ಯಾನ್ ಮಾಡಿದ್ದಾರೆ. ಈ ಕಾರಿನಲ್ಲಿ ಪ್ರಯಾಣಿಸುವವರಿಗೆ ಸುರಕ್ಷತೆ ಕಡಿಮೆ. ಚಿಕ್ಕ ಅಪಘಾತವಾದರೂ ಪ್ರಯಾಣಿಕರಿಗೆ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುತ್ತದೆ ಎಂಬ ಕಾರಣಕ್ಕಾಗಿ ಹಲವು ದೇಶಗಳು ಇದನ್ನು ಬ್ಯಾನ್ ಮಾಡಿದೆ. ಆದರೆ ಭಾರತದಲ್ಲಿ ಈಗಲೂ ಸಹ ದೊರೆಯುತ್ತದೆ ಯಾರು ಬೇಕಾದರೂ ಇದನ್ನು ಕೊಂಡುಕೊಳ್ಳಬಹುದು. ಜನಸಾಮಾನ್ಯರ ಸುರಕ್ಷತೆಯನ್ನು ಬದಿಗಿಟ್ಟು ಸುರಕ್ಷವಲ್ಲದ ಕಾರನ್ನು ಮಾರುಕಟ್ಟೆಯಲ್ಲಿ ಬಿಡುವುದು ಎಷ್ಟರಮಟ್ಟಿಗೆ ಸರಿ?
ಹೊರದೇಶದಲ್ಲಿ ಬ್ಯಾನ್ ಆಗಿ ಭಾರತದಲ್ಲಿ ಇನ್ನೂ ಚಾಲ್ತಿಯಲ್ಲಿರುವಂತಹ ಕೆಲವು ವಸ್ತುಗಳ ಬಗ್ಗೆ ಮಾತ್ರ ಈಗ ಹೇಳಿರುವುದು ಇದನ್ನು ಹೊರತುಪಡಿಸಿ ಜನಸಾಮಾನ್ಯರಿಗೆ ಸಮಸ್ಯೆಯನ್ನು ಉಂಟು ಮಾಡುವಂತಹ ಹಲವು ವಸ್ತುಗಳು ಸಹ ಈಗಲೂ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿವೆ. ಹೊರದೇಶಗಳಲ್ಲಿ ನಡೆಸುತ್ತಿರುವಂತಹ ಪರೀಕ್ಷೆಗಳಲ್ಲಿ ವಿಫಲವಾಗುತ್ತಿರುವಂತಹ ಹಲವು ವಸ್ತುಗಳು ಭಾರತ ದೇಶದಲ್ಲಿ ನಡೆಸುತ್ತಿರುವ ಪರೀಕ್ಷೆಯಲ್ಲಿ ಸಫಲವಾಗುತ್ತಿರುವುದು ಹೇಗೆ? ಭಾರತ ದೇಶದಲ್ಲಿ ಅಷ್ಟೊಂದು ಕಳಪೆ ಮಟ್ಟದಲ್ಲಿ ಪರೀಕ್ಷೆ ನಡೆಸುತ್ತಾರಾ? ಅಥವಾ ಪರೀಕ್ಷೆ ನಡೆಸಲು ಹೊರ ದೇಶದಲ್ಲಿರುವಷ್ಟು ತಂತ್ರಜ್ಞಾನ ಭಾರತ ದೇಶದಲ್ಲಿ ಇಲ್ಲವಾ? ಅದೇನೇ ಇರಲಿ ಹೊರದೇಶಗಳಲ್ಲಿ ಬ್ಯಾನ್ ಆದ ಮೇಲಾದರೂ ಸಹ ಭಾರತ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು ಅದನ್ನು ಮಾಡದೆ ಜನಸಾಮಾನ್ಯರನ್ನು ಕಷ್ಟಕ್ಕೆ ನೂಕಿ ಹಣ ಮಾಡಲು ಮುಂದಾಗಿರುವ ಭ್ರಷ್ಟ ಸರಕಾರಕ್ಕೆ ನಮ್ಮದೊಂದು ಧಿಕ್ಕಾರ!
ನಂಜನಗೂಡು: ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಯುವಕನೊಬ್ಬ ಮೃತಪಟ್ಟಿರುವ ಘಟನೆ ನಂಜನಗೂಡು ತಾಲೂಕು ಹುಲ್ಲಹಳ್ಳಿ ಸಮೀಪ…
ನಂಜನಗೂಡು: ಅಪರಿಚಿತ ಕಾರು ಚಾಲಕನ ಅತಿ ವೇಗಕ್ಕೆ ಸಿಲುಕಿದ ಆರು ಜನರ ಪೈಕಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಮಹಿಳೆ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯಂಕಂಚಿ ಯಿಂದ ಗೊಲಗೇರಿಗೆ ಹೋಗುವ ಮಾರ್ಗ ಮಧ್ಯದಲ್ಲಿ ರಸ್ತೆ ಅಪಘಾತದಲ್ಲಿ ಗೊಲಗೇರಿ ಗ್ರಾಮದ ಯುವಕ…
ನಂಜನಗೂಡು: ನಗರದಲ್ಲಿ ವಾಸಿಸುವ ನಗರವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ, ಅಲ್ಲದೆ ಅನಧಿಕೃತ ಬಡಾವಣೆಗಳಿಗೆ ಎನ್‌ಓಸಿ ನೀಡಿ…
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಭಟ್ಕಳ ಪುರಸಭೆಯ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು 50,000 ಲಂಚ ಸ್ವೀಕರಿಸುತ್ತಿದ್ದ ವೇಳೆ…
ಗೌರಿಬಿದನೂರು ನಗರದ ವಿನಾಯಕ ನಗರದ ವಾಸಿ ಪದ್ಮ ಜೈನ್ (59) ಎಂಬುವವರ 50 ಗ್ರಾಂ ಮಾಂಗಲ್ಯ ಸರವನ್ನು ದ್ವಿಚಕ್ರ ವಾಹನದಲ್ಲಿ…