ಖಾಸಗಿ ವ್ಯಕ್ತಿಗಳು ಸರ್ಕಾರಿ ಕಚೇರಿಗಳಲ್ಲಿ ವೀಡಿಯೋಗಳನ್ನು ಚಿತ್ರಿಸಬಾರದು ಎಂದು ಸರ್ಕಾರ ನಿರ್ಬಂಧ ಹೇರಿತ್ತು. ಈ ವಿಚಾರವಾಗಿ ಸರ್ಕಾರ ಹೊರಡಿಸಿದ್ದ ಅಂತಹ ಆದೇಶ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಾಗೂ ಇದಕ್ಕೆ ಜನಸಾಮಾನ್ಯರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಭ್ರಷ್ಟರ ಸರಕಾರವಿದು ಗ್ರಸ್ತರಿಗೆ ಬೆಂಬಲಿಸಲು ತಮಗೆ ಇಷ್ಟ ಬಂದಂತೆ ಆದೇಶಗಳನ್ನು ಹೊರಡಿಸುತ್ತಾರೆ ಎಂದು ಜನರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಮುಂದಾದರು ಹಾಗೂ ಹಲವರು ಈಗಾಗಲೇ ವಿಡಿಯೋ ಮುಖಾಂತರ ಭ್ರಷ್ಟರನ್ನು ಹೊರಗೆಳೆದಿರುವ ವಿಚಾರಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಇದನ್ನೆಲ್ಲಾ ಕಂಡ ಸರ್ಕಾರವು ಜನರ ಆಕ್ರೋಶಕ್ಕೆ ಮಣಿದು ಸರ್ಕಾರಿ ಕಚೇರಿಗಳಲ್ಲಿ ವಿಡಿಯೋ ಚಿತ್ರೀಕರಣ ನಿಷೇಧಿಸಿರುವುದನ್ನು ಹಿಂಪಡೆದಿದೆ.

error: Content is protected !!