ನಾಲ್ಕು ತಿಂಗಳ ಹಿಂದೆ ನಡೆದ ಕೊಲೆ ಬೆದಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಬಂಗಾರಪೇಟೆ ಪೊಲೀಸರಿಗೆ ಪ್ರಶಂಸೆ ವ್ಯಕ್ತಪಡಿಸಿದ ಕೆ.ಜೆ.ಎಫ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ. ಐಪಿಎಸ್.
ದಿನಾಂಕ 22/04/2022 ರಂದು ಶ್ರೀ ವೆಂಕಟೇಶ್ .ಸಿ ಬಿನ್ ಲೇಟ್ ಚಿನ್ನಪ್ಪ ಕೆರೆಕೋಡಿ ಬಂಗಾರಪೇಟೆ ರವರು ಬಂಗಾರಪೇಟೆ ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶದಲ್ಲಿ ತನ್ನ ಮಗನಾದ ಹರೀಶ್ ಅಲಿಯಾಸ್ ಕಬಾಬ್ ಎಂಬಾತನನ್ನು ಬಂಗಾರಪೇಟೆಯ ಕಾರಹಳ್ಳಿ ಗ್ರಾಮದ ರುದ್ರ ಭೂಮಿ ಸ್ಮಶಾನದ ಬಳಿ ಯಾರೊ ದುಷ್ಕರ್ಮಿಗಳು ಕೊಲೆ ಮಾಡಿದ್ದು ಈ ಬಗ್ಗೆ ನೀಡಿದ ದೂರಿನ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿತ್ತು.
ಪ್ರಕರಣದಲ್ಲಿ ಮೃತನಾದ ಹರೀಶ್ ಅಲಿಯಾಸ್ ಕಬಾಬ್ ಎಂಬಾತನನ್ನು ಕೊಲೆ ಮಾಡಿರುವ ಆರೋಪಿ ಯಾರೆಂದು ಗೊತ್ತಿಲ್ಲದೆ ಇದ್ದು ನಂತರ ಕೇಸಿನಲ್ಲಿ ಆರೋಪಿಯನ್ನು ಪತ್ತೆ ಮಾಡಲು ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ ಐಪಿಎಸ್ ರವರ ಆದೇಶದ ಮೇರೆಗೆ ಪೊಲೀಸ್ ಉಪಾಧೀಕ್ಷಕರಾದ ವಿ.ಎಲ್ ರಮೇಶ್ ರವರ ಮಾರ್ಗದರ್ಶನದಲ್ಲಿ ಬಂಗಾರಪೇಟೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಂಜೀವ್ ರಾಯಪ್ಪ ಹಾಗೂ ಪಿ.ಎಸ್.ಐ ಸುನಿಲ್ ಹಾಗೂ ಸಿಬ್ಬಂದಿಯವರಾದ ಅನಿಲ್ ಕುಮಾರ್, ರಾಮಕೃಷ್ಣ ರೆಡ್ಡಿ, ಮಂಜುನಾಥ್ ರೆಡ್ಡಿ, ನಾಗೇಶ್ ಮತ್ತು ಮುನಾವರ್ ಪಾಷಾ ರವರನ್ನು ನೇಮಿಸಿದ್ದರು. ಅದರಂತೆ ಬಾತ್ಮಿ ದಾರದಿಂದ ಮಾಹಿತಿಯನ್ನು ಪಡೆದು ಪತ್ತೆ ಕಾರ್ಯ ಕೈಗೊಂಡಿದ್ದು ಮಾಹಿತಿಯ ಮೇರೆಗೆ ಆರೋಪಿ ಸೂರ್ಯ ಅಲಿಯಾಸ್ ಗೋವಿಂದ ಬಿನ್ ಲೇಟ್ ವಿಜಯ್ ಕುಮಾರ್ ವಯಸ್ಸು 23 ಪೇಂಟಿಂಗ್ ಕೆಲಸ ಮಾಡುತ್ತಿದ್ದ ಕೆರೆ ಕೋಡಿ ಗ್ರಾಮ ಬಂಗಾರಪೇಟೆಯ ವಾಸಿತ ಆರೋಪಿಯನ್ನು ದಿನಾಂಕ 15/09/2022 ರಂದು ಪತ್ತೆ ಮಾಡಿ ವಿಚಾರಣೆಗೆ ಒಳಪಡಿಸಿದಾಗ ತಾನು ಹರೀಶ್ ಅಲಿಯಾಸ್ ಕಬಾಬ್ ನನ್ನ ಒಡೆಯಲು ಕರೆದುಕೊಂಡು ಹೋಗಿ ಮಧ್ಯವನ್ನು ಕುಡಿಸಿ ಸಾಯಿಸುವ ಉದ್ದೇಶದಿಂದ ಕೆಳಗೆ ತಳ್ಳಿ ಪಕ್ಕದಲ್ಲಿಯೇ ಇದ್ದ ದೊಡ್ಡ ಗಾತ್ರದ ಕಲ್ಲನ್ನು ಎತ್ತಿ ತಲೆಯ ಮೇಲೆ ಹಾಕಿ ನಂತರ ಕುಡಿಯಲು ತಂದಿದ್ದ ಬೀರ್ ಬಾಟಲ್ ಹೊಡೆದು ಬಾಟಲ್ ಚೂಪಾದ ಗಾಜಿನಿಂದ ಕಬಾಬ್ ಎಂಬಾತನ ಕುತ್ತಿಗೆಗೆ ತಿವಿದು ಕೊಲೆ ಮಾಡಿರುವುದಾಗಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು ನಂತರ ದಸ್ತಗಿರಿ ಮಾಡಿರುತ್ತಾರೆ.
ಈ ಕೊಲೆ ಪ್ರಕರಣದಲ್ಲಿ ಆರೋಪಿಯು ಯಾರೆಂದು ಖಚಿತವಾಗಿ ತಿಳಿಯದೆ ಇದ್ದರೂ ಸಹ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿರುವುದನ್ನು ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೆ. ಧರಣಿ ದೇವಿ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ವರದಿ -ರೋಶನ್