ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಅಪ್ರಾಪ್ತ ಯುವತಿ ಮತ್ತು ಅದೇ ಪಕ್ಕದ ಗ್ರಾಮದ ಗೋಣಸಗಿ ಗ್ರಾಮದ ಮಲ್ಲಿಕಾರ್ಜುನ ಜಮಖಂಡಿ ಅವರ ಪ್ರೇಮಾಂಕುರವಾಗಿತ್ತು. ಎರಡು ಜೋಡಿಗಳು ಪ್ರತಿನಿತ್ಯ ತಿಕೋಟಾದಿಂದ ವಿಜಯಪುರಕ್ಕೆ ಕಾಲೇಜಿಗೆ ಬಸ್ಸಿನಲ್ಲಿ ಬಂದು ಹೋಗುತ್ತಿದ್ದರು. ದಿನನಿತ್ಯ ಕಾಲೇಜಿಗೆ ಬಂದು ಹೋಗುತ್ತಿರುವ ಎರಡು ಜೋಡಿಗಳ ಪರಿಚಯ ಪ್ರೇಮಲೋಕಕ್ಕೆ ಧೂಡಿಕೊಂಡು ಹೋಗಿತ್ತು.
ತಮ್ಮ ಕಾಲೇಜಿನ ಬಿಡುವಿನ ಸಮಯದಲ್ಲ ಈ ಎರಡು ಜೋಡಿಗಳು ಪ್ರೀತಿ-ಪ್ರೇಮ ಗಾರ್ಡನ್ನು,ಸಿನಿಮಾ,ಶಾಪಿಂಗ್ ಅಂತ ಸಿಟಿ ಸುತ್ತಾಡುತ್ತಿದ್ದರು. ಇವರಿಬ್ಬರ ಪ್ರೇಮದಾಟವು ಮನೆಯ ಹಿರಿಯರಿಗೂ ಗೊತ್ತಾಗುತ್ತಿದ್ದಂತೆ ಎರಡು ಕಡೆಯವರು ತಮ್ಮ ಮಗ ಮಗಳಿಗೆ ಬುದ್ಧಿವಾದ ಹೇಳಿದ್ದರು. ಯುವಕ ಮಲ್ಲಿಕಾರ್ಜುನನ್ನು ಅವರ ತಂದೆ ವಿಜಯಪುರ ಕಾಲೇಜನ್ನು ಬಿಡಿಸಿ ಬನಹಟ್ಟಿಯ ಸೈನಿಕ ಶಾಲೆಗೆ ಸೇರಿಸಿದ್ದ ಆದರೂ ಕೂಡ ದಿನನಿತ್ಯ ಇಬ್ಬರು ಕೂಡ ಮೊಬೈಲಿನಲ್ಲಿ ತಾಸುಗಟ್ಟಲೆ ಮಾತನಾಡುತ್ತಿದ್ದರು. ಅದೇ ರೀತಿ ಮುಂದುವರೆದ ಅವರ ಪ್ರೇಮ ಮಧುರ ಮುಂದೊಂದು ದಿನ ಅಂದರೆ ಇದೇ ಸೆಪ್ಟೆಂಬರ್ 22ನೇ ತಾರೀಕಿನಂದು ಯುವಕ ಮಲ್ಲಿಕಾರ್ಜುನನಿಗೆ ಕರೆ ಮಾಡಿದ ಯುವತಿ ನಮ್ಮ ಮನೆಯಲ್ಲಿ ಯಾರು ಇಲ್ಲ ನೀನು ಮನೆಗೆ ಬಾ ಅಂತ ಕರೆಸಿಕೊಂಡಕೊಂಡಿದ್ದಳು.
ಮನೆಯಲ್ಲಿ ಕಂಡ ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ನೋಡಿ ಕೆಂಡಮಂಡಲಾಗಿದ್ದ. ತಕ್ಷಣ ಮಗಳನ್ನು ಯಾರು ಇವನು ಯಾಕೆ ಇವನ ಜೊತೆ ನಿನ್ನೆ ನಿನ್ನ ಒಡನಾಟ ಬಿಡು ಸರಿಯಲ್ಲ ಎಂಬ ಬುದ್ಧಿವಾದ ಹೇಳಿದ್ದ. ತಂದೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಿತಗೊಂಡ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು.ಮತ್ತಷ್ಟು ಕೋಪಿತಕೊಂಡ ತಂದೆ ಗುರಪ್ಪ ನನ್ನ ಮಗಳ ಸಾವಿಗೆ ಆ ಮಲ್ಲಿಕಾರ್ಜುನನೇ ಕಾರಣವೆಂಬ ಆತುರದಿಂದ ಅದೇ ವಿಷವನ್ನು ಆ ಮಲ್ಲಿಕಾರ್ಜುನನಿಗೆ ಸೇವಿಸಿ.
ಯುವತಿಯ ತಂದೆ ಗುರಪ್ಪ ಮತ್ತು ಅಳಿಯ ಅಜಿತ ಸೇರಿಕೊಂಡು ಮಲ್ಲಿಕಾರ್ಜುನನ ಕೈಕಾಲು ಕಟ್ಟಿ ಗೋಣಿಚೀಲದಲ್ಲಿ ಹಾಕಿಕೊಂಡು ಹೋಗಿ ಬೀಳಗಿ ಹತ್ತಿರ ಕೃಷ್ಣಾ ನದಿಗೆ ಎಸೆದು ಬಂದಿರುತ್ತಾನೆ..
ಮಲ್ಲಿಕಾರ್ಜುನನ ತಂದೆಯ ದೂರಿನನ್ವಯ ಹುಡುಕಾಟ ನಡೆಸಿದ ಪೊಲೀಸರಿಗೆ ಏನು ಬೀಳಗಿಯ ಕೃಷ್ಣಾ ನದಿಯ ದಡದಲ್ಲಿ ಮಲ್ಲಿಕಾರ್ಜುನನ ಶವ ಪತ್ತೆಯಾಗಿದೆ..
ಮಲ್ಲಿಕಾರ್ಜುನನ್ನು ಯುವತಿಯ ತಂದೆ ಗುರಪ್ಪ ಮತ್ತು ಅಳಿಯಯ ಅಜಿತ್ ಅವರು ಕೊಲೆ ಮಾಡಿ ಕೃಷ್ಣಾ ನದಿಗೆ ಎಸೆದಿದ್ದಾರೆ ಎಂಬುದು ಪೊಲೀಸ್ ತನಿಕೆಯಿಂದ ಹೊರಬಂದಿದೆ ಸದ್ಯ ಆರೋಪಿ ಯುವತಿಯ ತಂದೆ ಗುರಪ್ಪ ಹಾಗೂ ಅಳಿಯ ಅಜಿತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.